ಗೊಂಡಾ(ಉತ್ತರ ಪ್ರದೇಶ): ಮದುವೆಯಾಗುವುದಾಗಿ ನಂಬಿಸಿ, ಯುವತಿಯೊಬ್ಬಳ ಮೇಲೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅತ್ಯಾಚಾರವೆಸಗಿರುವ ಆರೋಪ ಕೇಳಿ ಬಂದಿದೆ. ಉತ್ತರ ಪ್ರದೇಶದ ಗೊಂಡಾದಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದೂರು ದಾಖಲಾಗಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರುವ ಯುವತಿ ಅತ್ಯಾಚಾರವೆಸಗಿರುವ ಪ್ರಕರಣ ದಾಖಲು ಮಾಡಿದ್ದಾರೆ.
ಉತ್ತರ ಪ್ರದೇಶದ ಗೊಂಡಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಬ್ ಇನ್ಸ್ಪೆಕ್ಟರ್ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಮೂರು ವರ್ಷಗಳ ಕಾಲ ತನ್ನೊಂದಿಗೆ ಮದುವೆ ನೆಪದಲ್ಲಿ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದಾರೆ. ಮದುವೆ ಮಾಡಿಕೊಳ್ಳಲು ಕೇಳಿದಾಗ ಅವರು ನಿರಾಕರಿಸಿದ್ದಾರೆಂದು ದೂರಿನಲ್ಲಿ ಹೇಳಿದ್ದಾರೆ.
ಯುವತಿ ಹಾಗೂ ಇನ್ಸ್ಪೆಕ್ಟರ್ ನಡುವೆ ಪ್ರೇಮ ಆರಂಭಗೊಂಡಾಗ ತನ್ನನ್ನು ರಿಂಕು ಶುಕ್ಲಾ ಎಂದು ಇನ್ಸ್ಪೆಕ್ಟರ್ ಪರಿಚಯ ಮಾಡಿಕೊಂಡಿದ್ದಾಗಿ ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಆತ ಅನ್ಯ ಧರ್ಮಿಯ ಎಂಬುದು ಗೊತ್ತಿದ್ದರೂ,ಮದುವೆ ಮಾಡಿಕೊಳ್ಳಲು ಮುಂದಾಗಿದ್ದೆ. ಆದರೆ, ಬೇರೆ ಬೇರೆ ಕಾರಣ ಹೇಳಿ ಮದುವೆ ಮುಂದೂಡಿಕೆ ಮಾಡುತ್ತಿದ್ದರೂ ಎಂದು ಯುವತಿ ಹೇಳಿಕೊಂಡಿದ್ದಾರೆ.
ಸಬ್ಇನ್ಸ್ಪೆಕ್ಟರ್ ಇದೀಗ ಮತ್ತೋರ್ವ ಯುವತಿ ಜೊತೆ ಇರುವುದನ್ನ ನಾನು ನೋಡಿದ್ದೇನೆಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲು ಬಂದಾಗ ನನ್ನ ಮೇಲೆ ಒತ್ತಡ ಸಹ ಹೇರಲಾಗಿತ್ತು ಎಂದು ಆಕೆ ಆರೋಪ ಮಾಡಿದ್ದಾರೆ. ಆದರೆ, ಇದನ್ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವರಾಜ್ ತಳ್ಳಿ ಹಾಕಿದ್ದಾರೆ.