ETV Bharat / bharat

ಇತ್ತೀಚೆಗೆ ಎಲ್ಲರೂ ಚುನಾವಣಾ ಹಿಂದೂಗಳಾಗುತ್ತಿದ್ದಾರೆ: ಯಪಿ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ

ಕಳೆದ ತಿಂಗಳಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಯೋಧ್ಯೆಗೆ ಭೇಟಿ ನೀಡಿದ್ದು, ರಾಜಕೀಯ ತಿರುವು ಪಡೆದುಕೊಂಡಿತ್ತು. ಉತ್ತರ ಪ್ರದೆಶ ಚುನಾವಣೆಯ ದೃಷ್ಟಿಯಿಂದ ಕೇಜ್ರಿವಾಲ್ ಭೇಟಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.ಈ ಸಂಬಂಧ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲರೂ ಚುನಾವಣಾ ಹಿಂದೂಗಳಾಗುತ್ತಿದ್ದಾರೆ ಎಂದು ಯುಪಿ ಡಿಸಿಎಂ ಹೇಳಿದ್ದಾರೆ.

up-dy-cm-maurya
ಯಪಿ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ
author img

By

Published : Nov 4, 2021, 8:44 AM IST

Updated : Nov 4, 2021, 12:32 PM IST

ಅಯೋಧ್ಯೆ (ಉತ್ತರ ಪ್ರದೇಶ): ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲರೂ ಚುನಾವಣಾ ಹಿಂದೂಗಳಾಗುತ್ತಿದ್ದಾರೆ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ವಿಪಕ್ಷಗಳ ವಿರುದ್ಧ ಗುಡುಗಿದ್ದಾರೆ.

ಅಯೋಧ್ಯೆ ರಾಮ ಮಂದಿರಕ್ಕೆ ಯಾರೇ ಬಂದರೂ ನಾವು ಅವರನ್ನು ಬರದಂತೆ ತಡೆಯುತ್ತಿಲ್ಲ, ಬರಬಾರದು ಎಂದು ಸಹ ಹೇಳುತ್ತಿಲ್ಲ. ಆದರೆ 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವ ಮೊದಲು ಯಾವುದೇ ಪಕ್ಷವು ಇಲ್ಲಿಗೆ ಬರಲಿಲ್ಲ. ರಾಮ ಮಂದಿರ ನಿರ್ಮಾಣವನ್ನು ಬೆಂಬಲಿಸುವ ಬದಲು ಅದನ್ನು ವಿರೋಧಿಸಿದರು. ಅವರು ಕರಸೇವಕರಿಗೆ ಎಂದಿಗೂ ಸಹಾಯ ಮಾಡಲಿಲ್ಲ. ಆದ್ರೆ ಇತ್ತೀಚಿಗೆ ಎಲ್ಲರೂ ಚುನಾವಣಾ ಹಿಂದೂಗಳಾಗುತ್ತಿದ್ದಾರೆ ಎಂದಿದ್ದಾರೆ.

ಇಂದು ಇಡೀ ದೇಶ ರಾಮಮಂದಿರ ನಿರ್ಮಾಣದಿಂದಾಗಿ ಸಂತೃಪ್ತಿಗೊಂಡಿದೆ. ನಾನೂ ಸಹ ಕರಸೇವಕನಾಗಿದ್ದೆ. ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ್ದೆ ಎಂದ ಅವರು, ಉತ್ತರ ಪ್ರದೇಶದಲ್ಲಿ ಮುಂಬವರು ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ನಟ ವಿಜಯ್ ಸೇತುಪತಿ ಮೇಲೆ ಹಲ್ಲೆ ಯತ್ನ: ವಿಡಿಯೋ

Last Updated : Nov 4, 2021, 12:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.