ETV Bharat / bharat

ಗೆಳತಿ ಭೇಟಿಯಾಗಲು ಹೋದ ದಲಿತ ವ್ಯಕ್ತಿಗೆ ಥಳಿತ, ಯುವಕ ಸಾವು : ಐವರ ಬಂಧನ

author img

By

Published : Feb 28, 2021, 1:45 PM IST

ಈ ಕುರಿತು ಮಾಹಿತಿ ನೀಡಿದ ಕುಮಾರ್ ಅವರ ಸಹೋದರ ಆಕಾಶ್, ಶುಕ್ರವಾರ ತಡರಾತ್ರಿ ಪವನ್ ಕುಮಾರ್ ತನ್ನ ಗೆಳತಿಯನ್ನು ಭೇಟಿ ಮಾಡಲು ಹೋಗಿದ್ದ. ಈ ವೇಳೆ ಯುವತಿಯ ಮನೆಯವರು ಥಳಿಸಿದ್ದು, ಆತನ ಕಿರುಚಾಟ ಕೇಳಿದ ಸ್ಥಳೀಯರು ಆತನನ್ನು ರಕ್ಷಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ..

death
death

ಉತ್ತರಪ್ರದೇಶ : ಬೇರೆ ಜಾತಿಗೆ ಸೇರಿದ ಗೆಳತಿಯನ್ನು ಭೇಟಿಯಾಗಲು ಹೋದ 22 ವರ್ಷದ ದಲಿತ ಯುವಕನಿಗೆ ಆಕೆಯ ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಆಗ್ರಾದಲ್ಲಿ ನಡೆದಿದೆ.

ಪವನ್ ಕುಮಾರ್ ಥಳಿತಕ್ಕೊಳಗಾದ ದಲಿತ ಯುವಕ. ಘಟನೆಯಿಂದಾಗಿ ಪವನ್ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು, ಈ ಕುರಿತು ಮಾಹಿತಿ ನೀಡಿದ ಕುಮಾರ್ ಅವರ ಸಹೋದರ ಆಕಾಶ್, ಶುಕ್ರವಾರ ತಡರಾತ್ರಿ ಪವನ್ ಕುಮಾರ್ ತನ್ನ ಗೆಳತಿಯನ್ನು ಭೇಟಿ ಮಾಡಲು ಹೋಗಿದ್ದ. ಈ ವೇಳೆ ಯುವತಿಯ ಮನೆಯವರು ಥಳಿಸಿದ್ದು, ಆತನ ಕಿರುಚಾಟ ಕೇಳಿದ ಸ್ಥಳೀಯರು ಆತನನ್ನು ರಕ್ಷಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಂತರ ಗಂಭೀರವಾಗಿ ಗಾಯಗೊಂಡ ಪವನ್​ನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಯುವತಿಯ ಕುಟುಂಬದ ಐವರು ಸದಸ್ಯರನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.