ETV Bharat / bharat

ಚೆನ್ನಾಗಿ ತಿಂದು 'ಬಿಲ್'​ ಕಟ್ಟದ ಪೊಲೀಸ್ ಅಧಿಕಾರಿಗಳ ಪ್ರಶ್ನಿಸಿದ್ದಕ್ಕೆ 10 ಜನರ ಬಂಧಿಸಿ ಜೈಲಿಗಟ್ಟಿದ್ರು!

ಇಬ್ಬರು ಪೊಲೀಸ್ ಅಧಿಕಾರಿಗಳ ಬಳಿ ಹಣ ಸಂದಾಯ ಮಾಡುವಂತೆ ಕೇಳಿಕೊಂಡಿದ್ದಕ್ಕಾಗಿ 10 ಮಂದಿ ಢಾಬಾ ಕೆಲಸಗಾರರ ಮೇಲೆ ನಕಲಿ ಸುಳ್ಳು ದಾಖಲು ಮಾಡಿದ್ದಾರೆ.

author img

By

Published : Mar 24, 2021, 4:30 AM IST

UP Police
UP Police

ಇಟಾ(ಉತ್ತರ ಪ್ರದೇಶ): ಢಾಬಾವೊಂದರಲ್ಲಿ ಚೆನ್ನಾಗಿ ತಿಂದು ಪೊಲೀಸ್ ಅಧಿಕಾರಿಗಳಿಬ್ಬರು ಬಿಲ್​ ನೀಡಲು ಹಿಂದೇಟು ಹಾಕಿದ್ದು, ಈ ವೇಳೆ ಪ್ರಶ್ನೆ ಮಾಡಿರುವ 10 ಜನರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಿ ಬಂಧಿಸಿ, ಜೈಲಿಗಟ್ಟಿದ್ದಾರೆ.

ಉತ್ತರ ಪ್ರದೇಶ ಇಟಾದ ಕೊಟ್ವಾಲಿ ಗ್ರಾಮೀಣ ಪೊಲೀಸ್​ ಠಾಣೆಯ ಸಂತೋಷ್ ಕುಮಾರ್​ ಮತ್ತು ಶೈಲೇಂದ್ರ ಯಾದವ್​ ಎಂಬ ಇಬ್ಬರು ಪೊಲೀಸರು ಈ ಕೃತ್ಯ ಕೈಗೊಂಡಿದ್ದಾರೆ. ಊಟ ಸೇವನೆ ಮಾಡಿದ ಬಳಿಕ ಹಣ ಪಾವತಿ ಮಾಡಲು ನಿರಾಕರಿಸಿದ್ದು, ಇದು ವಾಗ್ವಾದಕ್ಕೆ ಕಾರಣವಾಗಿದೆ. ಹೀಗಾಗಿ ಅಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿ ವಿರುದ್ಧ ನಕಲಿ ಗ್ಯಾಂಗ್​ ಲೂಟಿ ಪ್ರಕರಣ ದಾಖಲು ಮಾಡಿ, ಜೈಲಿಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: 5 ಕೋಟಿ ಜನರಿಗೆ ಕೋವಿಡ್​​ ವ್ಯಾಕ್ಸಿನ್ ನೀಡಿದ ಭಾರತ!

ಘಟನೆಗೆ ಸಂಬಂಧಿಸಿದಂತೆ ಇದೀಗ ಪೊಲೀಸ್ ಅಧಿಕಾರಿಗಳ ವಿರುದ್ಧ ಢಾಬಾದ ಮಾಲೀಕರು ದೂರು ದಾಖಲು ಮಾಡಿದ್ದು, ಲಂಚ ನೀಡುವಂತೆ ಬೇಡಿಕೆ ಸಹ ಇಟ್ಟಿದ್ದಾರೆ ಎಂದಿದ್ದಾರೆ.ಇದರ ಬಗ್ಗೆ ತನಿಖೆ ಆರಂಭಗೊಂಡಿದ್ದು, ಅಪರಾಧ ವಿಭಾಗದ ಎಸ್​​ಪಿ ರಾಹುಲ್ ಕುಮಾರ್​ ನೋಡಿಕೊಳ್ಳುತ್ತಿದ್ದಾರೆ. ಈ ಪ್ರಕರಣದಲ್ಲಿ ಜನರನ್ನ ನಕಲಿ ರೀತಿಯಲ್ಲಿ ಜೈಲಿಗೆ ಕಳುಹಿಸಿದ್ರೆ ಪೊಲೀಸ್​ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.