ETV Bharat / bharat

ಕಳಪೆ ಆಹಾರದ ತಟ್ಟೆ ಹಿಡಿದು ಕಣ್ಣೀರಿಟ್ಟಿದ್ದ ಕಾನ್​​ಸ್ಟೇಬಲ್​​ಗೆ ಹುಚ್ಚನ ಹಣೆಪಟ್ಟಿ - ಕಳಪೆ ಮಟ್ಟದ ಆಹಾರ

ಪೊಲೀಸ್ ಮೆಸ್​ನಲ್ಲಿ ಕಳಪೆ ಮಟ್ಟದ ಆಹಾರ ನೀಡಲಾಗ್ತಿದೆ ಎಂದು ಗಂಭೀರ ಆರೋಪ ಮಾಡಿದ್ದ ಪೊಲೀಸ್​ ಕಾನ್​​ಸ್ಟೇಬಲ್​ಗೆ ಹುಚ್ಚನ ಹಣೆಪಟ್ಟಿ ಕಟ್ಟುವ ಹುನ್ನಾರ ನಡೆಸಲಾಗ್ತಿದೆ ಎಂಬ ಆರೋಪ ಕೇಳಿ ಬಂದಿದೆ.

Etv Bharat
Etv Bharat
author img

By

Published : Aug 13, 2022, 5:05 PM IST

ಫಿರೋಜಾಬಾದ್ (ಉತ್ತರ ಪ್ರದೇಶ): ಪೊಲೀಸ್ ಮೆಸ್​ನಲ್ಲಿ ಸಿಬ್ಬಂದಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ, ಉಟದ ತಟ್ಟೆ ಹಿಡಿದು ಕಾನ್​​​ಸ್ಟೇಬಲ್​​ನೋರ್ವ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸ್ ಇಲಾಖೆ ತನಿಖೆ ನಡೆಸಲು ಮುಂದಾಗಿತ್ತು. ಆದರೆ, ಇದೀಗ ಕಾನ್​​ಸ್ಟೇಬಲ್​​ಗೆ ಉನ್ನತ ಅಧಿಕಾರಿಗಳು ಹುಚ್ಚನ ಹಣೆಪಟ್ಟಿ ಕಟ್ಟುವ ಹುನ್ನಾರ ನಡೆಸುತ್ತಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ.

ಕಳೆದ ಕೆಲ ದಿನಗಳ ಹಿಂದೆ ಪೊಲೀಸ್ ಕಾನ್​​ಸ್ಟೇಬಲ್​ ಮನೋಜ್ ಕುಮಾರ್ ಕೈಯಲ್ಲಿ ಊಟದ ತಟ್ಟಿ ಹಿಡಿದು ರಸ್ತೆಯಲ್ಲಿ ಪ್ರತಿಭಟನೆ ನಡೆಸುವುದರ ಜೊತೆಗೆ ಕಣ್ಣೀರು ಹಾಕಿದ್ದರು. ಪೊಲೀಸ್​ ಇಲಾಖೆ ಕೊಡುತ್ತಿರುವ ಆಹಾರ ಪ್ರಾಣಿ ಕೂಡ ತಿನ್ನಲು ಸಾಧ್ಯವಿಲ್ಲ. ಆದರೆ, ಅದನ್ನು ನಮಗೆ ನೀಡಲಾಗುತ್ತಿದೆ. ಇದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಡಿಸಿಪಿಗಳ ಮಾಡುತ್ತಿರುವ ಹಗರಣವಾಗಿದೆ ಎಂದು ವಿಡಿಯೋದಲ್ಲಿ ಪೇದೆ ಆರೋಪಿಸಿದ್ದನು. ಇದರ ವಿಡಿಯೋ ಎಲ್ಲೆಡೆ ವೈರಲ್​ ಆಗಿತ್ತು. ಈ ಬೆನ್ನಲ್ಲೇ ತನಿಖೆಗೆ ಆದೇಶಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ, ಪೊಲೀಸ್​ ಕಾನ್ಸ್​ಸ್ಟೇಬಲ್​ ಮನೋಜ್​ ಕುಮಾರ್​ ಅವರ ಆರೋಪವನ್ನು ಹಿರಿಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ.

ಇದನ್ನೂ ಓದಿ: ಕಳಪೆ ಆಹಾರ ಪೂರೈಕೆ ವಿಚಾರ: ಕಾನ್ಸ್​ಟೇಬಲ್ ಪ್ರತಿಭಟನೆ ವಿಡಿಯೋ ವೈರಲ್​, ತನಿಖೆಗೆ ಆದೇಶಿಸಿದ ಇಲಾಖೆ​​

ಪೊಲೀಸ್ ಕಾನ್​​ಸ್ಟೇಬಲ್​ ಮನೋಜ್ ಕುಮಾರ್ ಈಗಾಗಲೇ 15 ಬಾರಿ ಶಿಕ್ಷೆಗೆ ಒಳಗಾಗಿದ್ದಾರೆ. ಆತ ಮಾಡಿರುವ ಆರೋಪದಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂದಿರುವ ಉನ್ನತ ಅಧಿಕಾರಿಗಳು ಆತನೋರ್ವ ಹುಚ್ಚ ಎಂದು ಕರೆಯಲು ಮುಂದಾಗಿದ್ದಾರೆಂದು ವರದಿಯಾಗಿದೆ. ಮನೋಜ್ ಕುಮಾರ್​ ಜಿಲ್ಲಾ ನ್ಯಾಯಾಲಯದ ಸಮನ್ಸ್ ಸೆಲ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಮ್ಮ ವಿರುದ್ಧದ ಆರೋಪಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.