ETV Bharat / bharat

ಮದುವೆಗೆ ನಿರಾಕರಣೆ: 16 ವರ್ಷದ ಬಾಲಕಿಯನ್ನು ಕೊಂದ ಪಾಗಲ್​ ಪ್ರೇಮಿ! - ಸಂಭಾಲ್ ಉತ್ತರ ಪ್ರದೇಶ ಕೊಲೆ ಪ್ರಕರಣ

ಬಾಲಕಿ ಬುಧವಾರ ರಾತ್ರಿ ತನ್ನ ನೆರೆಯಹೊರೆಯವನಾದದ ಅರ್ಜುನ್ ಕುಮಾರ್(18) ಎಂಬಾತನ ಜೊತೆ ಹೋಗಿದ್ದು, ಪೊಲೀಸರು ಗುರುವಾರ ರಾತ್ರಿ ಆಕೆಯ ಶವವನ್ನು ಪತ್ತೆ ಮಾಡಿದ್ದಾರೆ. ಆರೋಪಿ ಅರ್ಜುನ್ ಕುಮಾರ್ ತಾನೇ ಆಕೆಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

UP: Class 10 student kills minor girlfriend
ಉತ್ತರ ಪ್ರದೇಶ: 16 ವರ್ಷದ ಬಾಲಕಿಯನ್ನು ಕೊಂದ ಪಾಗಲ್​ ಪ್ರೇಮಿ
author img

By

Published : Nov 20, 2020, 12:28 PM IST

ಸಂಭಾಲ್ (ಉತ್ತರ ಪ್ರದೇಶ): ನಾಪತ್ತೆಯಾಗಿದ್ದ 16 ವರ್ಷದ ಬಾಲಕಿ ಮೃತದೇಹ ಸದ್ಯ ಸಂಭಾಲ್ ಜಿಲ್ಲೆಯ ಅರಣ್ಯ ಪ್ರದೇಶದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬಾಲಕಿ ಬುಧವಾರ ರಾತ್ರಿ ತನ್ನ ನೆರೆಯಹೊರೆಯವನಾದದ ಅರ್ಜುನ್ ಕುಮಾರ್(18) ಎಂಬಾತನ ಜೊತೆ ಹೋಗಿದ್ದು, ಪೊಲೀಸರು ಗುರುವಾರ ರಾತ್ರಿ ಶವವನ್ನು ಪತ್ತೆ ಮಾಡಿದ್ದಾರೆ. ಬಾಲಕಿಯ ತಂದೆ ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ

ಗುನ್ನಾವರ್​​ ಸರ್ಕಲ್ ಇನ್ಸ್​ಪೆಕ್ಟರ್​​​ ಕೃಷ್ಣ ಕಾಂತ್ ಸರೋಜ್ ಮಾತನಾಡಿ, ತನ್ನ ಮಗಳನ್ನು ಆರೋಪಿ ಅಪಹರಿಸಿ ನಂತರ ಅರಣ್ಯ ಪ್ರದೇಶದಲ್ಲಿ ಕೊಲ್ಲಲಾಗಿದೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ. ಹಾಗಾಗಿ ನಾವು ಕೊಲೆ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಆತನನ್ನು ವಶಕ್ಕೆ ಪಡೆದಿದ್ದೇವೆ ಎಂದರು.

ಆರೋಪಿ ಬಾಲಕಿಯನ್ನು ಕೊಂದು ತಾನು ಸಹ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದ್ರೆ, ಹಗ್ಗ ಸಡಿಲವಾದ ಹಿನ್ನೆಲೆ ಆತ ಬದುಕುಳಿದಿದ್ದಾನೆ. ಆಕೆ ಮೃತಪಟ್ಟಿದ್ದನ್ನು ನೋಡಿ ಭೀತಿಗೊಳಗಾದ ಆರೋಪಿ ಆತ್ಮಹತ್ಯೆ ಮಾಡಿಕೊಳ್ಳಲು ಹಿಂಜರಿದಿದ್ದಾನೆ ಎಂದು ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ. ಜೊತೆಗೆ ತನಿಖೆ ಮುಂದುವರೆದಿದೆ ಎಂದು ತಿಳಿಸಿದರು.

ಪೊಲೀಸರ ಪ್ರಕಾರ, ಬಾಲಕಿ 9 ನೇ ತರಗತಿಯ ವಿದ್ಯಾರ್ಥಿಯಾಗಿದ್ದು, 10 ನೇ ತರಗತಿ ವಿದ್ಯಾರ್ಥಿಯಾಗಿದ್ದ ಆರೋಪಿ ಜೊತೆ ಸಂಬಂಧ ಹೊಂದಿದ್ದಳು ಎಂದು ಹೇಳಲಾಗಿದೆ. ಆರೋಪಿ ಆಕೆಯನ್ನು ಮದುವೆಗೆ ಒತ್ತಾಯಿಸಿದಾಗ ಬಾಲಕಿ ಕುಟುಂಬಸ್ಥರು ನಿರಾಕರಿಸಿದ್ದಾರೆ ಮತ್ತು ಆಕೆಯ ಶಿಕ್ಷಣಕ್ಕೆ ಮಹತ್ವ ನೀಡಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಎರಡು ಕುಟುಂಬಗಳ ನಡುವೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸಭೆ ನಡೆಸಲಾಗಿದ್ದು, ಪ್ರಯತ್ನ ವ್ಯರ್ಥವಾಗಿತ್ತು. ಸದ್ಯ ಪ್ರಕರಣ ಕೊಲೆಯಲ್ಲಿ ಅಂತ್ಯ ಕಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.