ETV Bharat / bharat

ಉತ್ತರ ಪ್ರದೇಶ ಚುನಾವಣೆ: ಮತದಾರರ ಸೆಳೆಯಲು ಪಕ್ಷೇತರ ಅಭ್ಯರ್ಥಿಯಿಂದ ವಿನೂತನ ಪ್ರಚಾರ! - ಉತ್ತರಪ್ರದೇಶ ವಿಧಾನಸಭಾ ಚುನಾವಣೆ 2022

ಉತ್ತರಪ್ರದೇಶ ಚುನಾವಣೆ ಕಾವು ಜೋರಾಗಿದೆ. ಚುನಾವಣಾ ಅಭ್ಯರ್ಥಿಗಳು ಪ್ರಚಾರದ ಭರಾಟೆಯಲ್ಲಿ ತೊಡಗಿದ್ದು, ಮತದಾರರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಆದರೆ ಇಲ್ಲೋಬ್ಬ ಪಕ್ಷೇತರ ಅಭ್ಯರ್ಥಿ ಮತದಾರರನ್ನು ತನ್ನತ್ತ ಸೆಳೆಯಲು ವಿನೂತನವಾಗಿಯೇ ಪ್ರಚಾರ ನಡೆಸಿದ್ದಾರೆ.

firozabad sadar assembly seat  up assembly election 2022  independent candidate ramdas manav  candidate ramdas manav from sadar assembly seat  ಫಿರೋಜಾಬಾದ್​ ಸದರ್​ ವಿಧಾನಸಭಾ ಚುನಾವಣೆ  ಉತ್ತರಪ್ರದೇಶ ವಿಧಾನಸಭಾ ಚುನಾವಣೆ 2022  ಪಕ್ಷೇತರ ಅಭ್ಯರ್ಥಿ ರಾಮದಾಸ್​ ಮಾನವ್​ನಿಂದ ವಿನೂತನ ಪ್ರಚಾರ
ಮತದಾರರನ್ನು ಸೆಳೆಯಲು ಪಕ್ಷೇತರ ಅಭ್ಯರ್ಥಿಯಿಂದ ವಿನೂತನ ಪ್ರಚಾರ
author img

By

Published : Feb 7, 2022, 12:54 PM IST

ಫಿರೋಜಾಬಾದ್: ಚುನಾವಣೆ ಸಂದರ್ಭದಲ್ಲಿ ಹಲವು ರೀತಿಯ ಅಭ್ಯರ್ಥಿಗಳನ್ನು ನೋಡುತ್ತೀರಿ. ಕೆಲವರು ಆಮಿಷವೊಡ್ಡಿ ಭರವಸೆ ನೀಡಿ ಮತದಾರರನ್ನು ಸೆಳೆದರೆ, ಕೆಲವರು ಜಾತಿ, ಧರ್ಮದ ಹೆಸರಿನಲ್ಲಿ ಮತ ಸಂಗ್ರಹಿಸುವ ಕೆಲಸ ಮಾಡುತ್ತಾರೆ. ಫಿರೋಜಾಬಾದ್ ಜಿಲ್ಲೆಯ ಸದರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಯೊಬ್ಬರು ಇತ್ತೀಚಿನ ದಿನಗಳಲ್ಲಿ ಹೊಸ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಮತದಾರರನ್ನು ಸೆಳೆಯಲು ಪಕ್ಷೇತರ ಅಭ್ಯರ್ಥಿಯಿಂದ ವಿನೂತನ ಪ್ರಚಾರ

ಈ ಅಭ್ಯರ್ಥಿ ತನ್ನ ಮೈತುಂಬಾ ಕಬ್ಬಿಣದ ಸರಪಳಿ ಹಾಕಿಕೊಂಡು, ಕೈಗೆ ಬೇಡಿಗಳನ್ನು ತೊಡಗಿಸಿಕೊಂಡು, ಕೊರಳಿನಲ್ಲಿ ಬಟ್ಟಲನ್ನು ನೇತು ಹಾಕಿಕೊಂಡು ತನ್ನ ಮತದ ಜೊತೆಗೆ 10 ರೂಪಾಯಿ ನೀಡುವಂತೆ ಮತದಾರರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಸದರ್ ಕ್ಷೇತ್ರದಿಂದ ಸ್ಪರ್ಧಿಸಿರುವ ಈ ಅಭ್ಯರ್ಥಿಯ ಹೆಸರು ರಾಮದಾಸ್ ಮಾನವ್. ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿರುವ ರಾಮದಾಸ್ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದು, ಇದರಿಂದ ಕಾರ್ಮಿಕರಿಗೆ ತಮ್ಮ ಹಕ್ಕು ಸಿಗುವಂತಾಗಿದೆ.

ರಾಮದಾಸ್ ಅವರು ಬಳೆ-ಜೋಡಣೆ ಕಾರ್ಮಿಕರನ್ನು ದೀರ್ಘಕಾಲ ಪ್ರತಿನಿಧಿಸುತ್ತಿದ್ದಾರೆ. ಕಾಲಕಾಲಕ್ಕೆ ಕಾರ್ಮಿಕರ ಹಿತಕ್ಕಾಗಿಯೂ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಹಲವು ಚಳವಳಿಗಳನ್ನೂ ಮಾಡಿದ್ದಾರೆ. ಅವರೂ ಜೈಲಿಗೆ ಹೋಗಬೇಕಾದ ಸ್ಥಿತಿ ಬಂದಿತು. ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕಿಳಿದು ಕಾರ್ಯಕರ್ತರ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ಆರಂಭಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.