ETV Bharat / bharat

ಮದುವೆ ಬೇಡ ಎಂದು ಮರ್ಮಾಂಗ ಕತ್ತರಿಸಿಕೊಂಡ ಯುವಕ... ಕಾರಣ? - ತಮಿಳುನಾಡು ಸೇಲಂ

ಮದುವೆ ಬೇಡವೆಂದು ಪೋಷಕರೊಂದಿಗೆ ಜಗಳವಾಡಿರುವ ಯುವಕನೊಬ್ಬ ಶಿಶ್ನವನ್ನೇ ಕತ್ತರಿಸಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

Youth tries suicide by cutting penis
Youth tries suicide by cutting penis
author img

By

Published : Jun 30, 2021, 10:05 PM IST

ಸೇಲಂ(ತಮಿಳುನಾಡು): ವಿರೋಧದ ನಡುವೆ ಕೂಡ ಮಗನ ಮದುವೆಗೆ ಮುಂದಾಗಿದ್ದರಿಂದ ಆಕ್ರೋಶಗೊಂಡ ಆತ ಜನನಾಂಗ ಕತ್ತರಿಸಿಕೊಂಡು ಅತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಸೇಲಂ ಜಿಲ್ಲೆಯ ತಮ್ಮಂಪಟ್ಟಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವೃತ್ತಿಯಲ್ಲಿ ಬಡಗಿಯಾಗಿದ್ದ ವಿಜಯರಾಘವನ್​ ಈ ಕೃತ್ಯ ಮಾಡಿಕೊಂಡಿದ್ದಾನೆ.

ವಿಜಯರಾಘವನ್ಗೆ ಪೋಷಕರು ಮದುವೆ ಮಾಡಲು ನಿರ್ಧರಿಸಿದ್ದರು. ಆದರೆ, ಇದಕ್ಕೆ ಇಷ್ಟವಿಲ್ಲದ ವಿಜಯ್​ ತನ್ನ ಹೆತ್ತವರೊಂದಿಗೆ ವಾಗ್ವಾದ ನಡೆಸಿದ್ದು, ಮದುವೆ ನಿಲ್ಲಿಸುವಂತೆ ಒತ್ತಾಯಿಸಿದ್ದನು. ಇದೇ ವಿಷಯಕ್ಕೆ ಮಂಗಳವಾರ ಪೋಷಕರು ಹಾಗೂ ಮಗನ ನಡುವೆ ವಾದ ನಡೆದಿದೆ. ಇದರಿಂದ ಆಕ್ರೋಶಗೊಂಡ ಆತ ಉಳಿಯಿಂದ ಶಿಶ್ನ ಹಾಗೂ ಕುತ್ತಿಗೆ ಕತ್ತರಿಸಿಕೊಂಡು, ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇದನ್ನೂ ಓದಿರಿ: 3 ಲಕ್ಷಕ್ಕೂ ಅಧಿಕ ಗ್ರಾಮಗಳಲ್ಲಿ Broadband: ಕೇಂದ್ರ ಕ್ಯಾಬಿನೆಟ್​ನಲ್ಲಿ ಮಹತ್ವದ ನಿರ್ಧಾರ

ಘಟನೆ ಬಳಿಕ ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅದೇ ದಿನ ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾನೆಂದು ತಿಳಿದು ಬಂದಿದೆ. ಘಟನೆ ಬಗ್ಗೆ ಪೊಲೀಸರ ಬಳಿ ಕೇಳಿದಾಗ ನಮ್ಮ ಬಳಿ ಅಂತಹ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.