ನವದೆಹಲಿ: ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ಸಾಕ್ಷಿ ಸಿಗದ ಹಿನ್ನೆಲೆ ಬಿಜೆಪಿ ಉಚ್ಚಾಟಿತ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದೆ.
ತೀರ್ಪಿನಲ್ಲಿ, ಆರೋಪಿ ಕುಲದೀಪ್ ಸಿಂಗ್ ಸೆಂಗಾರ್ ಮತ್ತು ಇತರ ಐವರು ಆರೋಪಿಗಳ ವಿರುದ್ಧ ಪ್ರಾಥಮಿಕವಾಗಿ ಯಾವುದೇ ಸಾಕ್ಷ್ಯಗಳು ಕಂಡು ಬಂದಿಲ್ಲ ಎಂದು ನ್ಯಾಯಾಲಯ ಹೇಳಿದೆ. ನಾಲ್ವರು ಆರೋಪಿಗಳಾದ ಆಶಿಶ್ ಕುಮಾರ್ ಪಾಲ್, ವಿನೋದ್ ಮಿಶ್ರಾ, ಹರಿಪಾಲ್ ಸಿಂಗ್ ಮತ್ತು ನವೀನ್ ಸಿಂಗ್ ವಿರುದ್ಧ ಡಿಸೆಂಬರ್ 21 ರಂದು ನ್ಯಾಯಾಲಯ ಆರೋಪ ಪಟ್ಟಿ ತಯಾರಿಸಲಿದೆ ಎಂದು ಹೇಳಿತು.
ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಪ್ರಧಾನಿ ಮೋದಿ ಫೋನ್ ಸಂಭಾಷಣೆ
ಉನ್ನಾವೋದಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಕುಲದೀಪ್ ಸೆಂಗಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು ಗಮನಿಸಬೇಕಾದ ಸಂಗತಿ. ಪೋಕ್ಸೋ ಸೆಕ್ಷನ್ 376 ಮತ್ತು ಸೆಕ್ಷನ್ 6ರ ಅಡಿ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ.
ಅತ್ಯಾಚಾರದ ಜೊತೆಗೆ ಕುಲದೀಪ್ ಸೆಂಗಾರ್ ಸಂತ್ರಸ್ತೆಯ ಕುಟುಂಬದ ಮೂವರನ್ನು ಕೊಂದ ಆರೋಪವನ್ನೂ ಹೊರಿಸಲಾಗಿತ್ತು. ಸಂತ್ರಸ್ತೆಯ ತಂದೆಯೂ ಇದರಲ್ಲಿ ಭಾಗಿಯಾಗಿದ್ದರು. ನಂತರ, ಹುಡುಗಿಯ ಕಾರಿಗೂ ಅಪಘಾತ ಸಂಭವಿಸಿದೆ, ಇದಕ್ಕಾಗಿ ಸೆಂಗರ್ ಅವರನ್ನು ಆರೋಪಿಯನ್ನಾಗಿ ಮಾಡಲಾಗಿತ್ತು.
ನಡೆದ ಘಟನೆ...
ಜುಲೈ 2019ರಲ್ಲಿ ಉತ್ತರಪ್ರದೇಶದ ರಾಯ ಬರೇಲಿಯಲ್ಲಿನ ಉನ್ನಾವೋ ರೇಪ್ ಪ್ರಕರಣದ ಸಂತ್ರಸ್ತೆಗೆ ಸಂಭವಿಸಿದ ಅಪಘಾತಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಮತ್ತು ಆತನ ಸಹೋದರ ಮನೋಜ್ ಸಿಂಗ್ ಸೆನಗಾರ್ ಸೇರಿ 8 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆ ಚಿಕ್ಕಪ್ಪ ಮಹೇಶ್ ಸಿಂಗ್ ಅವರು ಐಪಿಸಿ ಸೆಕ್ಷನ್ 302 (ಕೊಲೆಗೆ ದಂಡ), 307 (ಕೊಲೆ ಯತ್ನ), 506 (ಕೊಲೆ ಬೆದರಿಕೆ) ಮತ್ತು 120–'ಬಿ' (ಅಪರಾಧಿಕ ಒಳಸಂಚು) ಅಡಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಓದಿ: 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಪಾಕಿಸ್ತಾನಿ ಸ್ಪಿನ್ನರ್ ಯಾಸಿರ್ ಶಾ ವಿರುದ್ಧ ಎಫ್ಐಆರ್
ಸಂತ್ರಸ್ತೆ ತಾಯಿ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ಕುಲದೀಪ್ ಸಿಂಗ್ ಸಂತ್ರಸ್ತೆಯ ಕುಟುಂಬವನ್ನು ಕೊಲೆ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಸಂತ್ರಸ್ತೆಯ ಚಿಕ್ಕಪ್ಪ ದೂರಿನಲ್ಲಿ ತಿಳಿಸಿದ್ದರು. ಪ್ರತ್ಯೇಕ ಪ್ರಕರಣದಲ್ಲಿ ಜೈಲು ಸೇರಿರುವ ಚಿಕ್ಕಪ್ಪನನ್ನು ನೋಡಲೆಂದು ಸಂತ್ರಸ್ತೆ ತನ್ನ ಕುಟುಂಬದೊಂದಿಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು.
ಈ ಅಪಘಾತದಲ್ಲಿ ಕಾರಿನಲ್ಲಿದ್ದ ಸಂತ್ರಸ್ತೆ ಸಂಬಂಧಿಕರಿಬ್ಬರು ಮೃತಪಟ್ಟಿದ್ದರು. ಮೃತರಲ್ಲಿ ಒಬ್ಬರು ಉನ್ನಾವೋ ಪ್ರಕರಣದ ಸಾಕ್ಷಿಯಾಗಿದ್ದರು. ಅದೃಷ್ಟವಶಾತ್ ವಕೀಲರು ಬದುಕುಳಿದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಖುಲಾಸೆಗೊಳಿಸಿದೆ.