ETV Bharat / bharat

ಪ್ರಧಾನಿ ಮೋದಿಯೊಂದಿಗೆ ಯೋಗ ಮಾಡಿದ್ದ ಬಾಲಕಿಯ ತಾಯಿ ಆತ್ಮಹತ್ಯೆ! - ಕೆರೆಯಲ್ಲಿ ಕಂಡು ಬಂದ ಮಹಿಳೆಯ ಮೃತದೇಹ

ಸಾವಿಗೀಡಾದ ಮಹಿಳೆಯನ್ನು ಕಮಲಾ (30 ವರ್ಷ) ಎಂದು ಗುರುತಿಸಲಾಗಿದೆ. ಆಕೆ ನೈನಿತಾಲ್‌ನ ತಲ್ಲಾ ಕೃಷ್ಣಾಪುರದ ನಿವಾಸಿ. ಅವರ ಪುತ್ರಿ ಈ ಬಾರಿಯ ಯೋಗ ಪ್ರದರ್ಶನದಲ್ಲಿ ಮೋದಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದಳು ಎಂದು ತಿಳಿದುಬಂದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By

Published : Jun 23, 2022, 4:19 PM IST

Updated : Jun 23, 2022, 4:51 PM IST

ನೈನಿತಾಲ್(ಉತ್ತರಾಖಂಡ) : ಇಂದು ಬೆಳಗ್ಗೆ ನೈನಿತಾಲ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು ಭಾರಿ ಸಂಚಲನ ಮೂಡಿಸಿದೆ. ಬೆಳಗಿನಜಾವ ವಾಕ್ ಮಾಡುತ್ತಿದ್ದ ಸ್ಥಳೀಯರು ನೈನಾ ದೇವಿ ದೇವಸ್ಥಾನದ ಬಳಿಯ ಕೆರೆಯಲ್ಲಿ ಮೃತದೇಹ ಬಿದ್ದಿರುವುದನ್ನು ಕಂಡಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಮೃತದೇಹವು 11 ವರ್ಷದ ದೀಪಾ ಅವರ ತಾಯಿ ಎಂದು ಗುರುತಿಸಲಾಗಿದೆ. ಆಕೆ ಪ್ರಧಾನಿ ಮೋದಿಯೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಮಾಡಿದ್ದರು.

ಸಾವಿಗೀಡಾದ ಮಹಿಳೆಯನ್ನು ಕಮಲಾ (30 ವರ್ಷ) ಎಂದು ಗುರುತಿಸಲಾಗಿದೆ. ಆಕೆ ನೈನಿತಾಲ್‌ನ ತಲ್ಲಾ ಕೃಷ್ಣಾಪುರದ ನಿವಾಸಿ. ನಿನ್ನೆ ಸಂಜೆಯಿಂದ ಕಮಲಾ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಇಂದು ಬೆಳಗ್ಗೆ ನೈನಿ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜೂನ್​ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಕಮಲಾ ಅವರ ಪುತ್ರಿ ದೀಪಾ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಷ್ಟ್ರೀಯ ಒಲಿಂಪಿಯಾಡ್‌ನಲ್ಲಿ ಯೋಗ ಮಾಡಿದ್ದಳು. ಹೈಕೋರ್ಟ್ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿನ ತೋಟದಲ್ಲಿ ಕಮಲಾ ಅವರ ಪತಿ ಕಿಶನ್​ ಸಿಂಗ್​ ಕೆಲಸ ಮಾಡುತ್ತಿದ್ದಾರೆ.

ತನ್ನ ಪತ್ನಿ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಳು, ಇದರಿಂದ ಅವಳು ತುಂಬಾ ನೊಂದುಕೊಳ್ಳುತ್ತಿದ್ದಳು. ಅದಕ್ಕಾಗಿಯೇ ಆಕೆ ಈ ರೀತಿ ಮಾಡಿಕೊಂಡಿರಬಹುದು ಎಂದು ಪತಿ ಕಿಶನ್ ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ.

ಹೆಚ್ಚಿನ ಓದಿಗೆ: ಉತ್ತರಾಖಂಡದ ದೀಪಾಗೆ ಒಲಿದ 'ಯೋಗ'.. ಪ್ರಧಾನಿ ಮೋದಿ ಜೊತೆ ಯೋಗ ಪ್ರದರ್ಶನ

ಇದನ್ನೂ ಓದಿ: ಸಿಡಿದೆದ್ದ ಶಿಂಧೆಗೆ ಮೂರನೇ ಎರಡರಷ್ಟು ಶಾಸಕರ ಬಲ.. ಏಕನಾಥ್​ಗಿಲ್ಲ ಕಾನೂನು ತೊಡಕು

Last Updated : Jun 23, 2022, 4:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.