ETV Bharat / bharat

ಹೆಲಿಕಾಪ್ಟರ್​ ಮೂಲಕ ಮೆರವಣಿಗೆ, ಜಾಗ್ವಾರ್ ಕಾರಲ್ಲಿ ಮಂಟಪ ತಲುಪಿದ ವರ- ರೈತನ ಮಗನ ಅದ್ಧೂರಿ ಮದುವೆ! - ರೈತನ ಮಗನ ಅದ್ಧೂರಿ ಮದುವೆ

ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡ್ಬೇಕೆಂದು ಕನಸು ಕಂಡಿದ್ದ ರೈತನೋರ್ವ ತಾನು ಅಂದುಕೊಂಡಿರುವ ರೀತಿಯಲ್ಲೇ ವೈಭವದಿಂದ ಮಾಡಿಸಿದ್ದಾನೆ. ಮಧ್ಯಪ್ರದೇಶದಲ್ಲಿ ಈ ವಿಷಯ ಇದೀಗ ಹಾಟ್ ಟಾಪಿಕ್ ಆಗಿದೆ.

unique wedding Indore
unique wedding Indore
author img

By

Published : Apr 29, 2022, 10:14 PM IST

ಇಂದೋರ್​(ಮಧ್ಯಪ್ರದೇಶ): ಬಡ ರೈತರು ಸಾಮಾನ್ಯವಾಗಿ ತಮ್ಮ ಮಕ್ಕಳ ಮದುವೆಗಳನ್ನು ಸಾಮೂಹಿಕ ಮದುವೆ ಕಾರ್ಯಕ್ರಮ, ಜಾತ್ರೆ ಅಥವಾ ಯಾವುದಾದ್ರೂ ದೇವಸ್ಥಾನಗಳಲ್ಲಿ ಮಾಡುವುದುಂಟು. ಆದರೆ, ಇಲ್ಲೋರ್ವ ರೈತ ತನ್ನ ಮಗನ ಮದುವೆಯನ್ನು ಯಾವುದೇ ಶ್ರೀಮಂತರ ಮಕ್ಕಳಿಗಿಂತಲೂ ಕಡಿಮೆ ಮಾಡಿಲ್ಲ. ಆತನ ಮೆರವಣಿಗೆಗೋಸ್ಕರ ಹೆಲಿಕಾಪ್ಟರ್ ಹಾಗೂ ಮದುವೆ ಮಂಟಪಕ್ಕೆ ಕರೆತರಲು ಜಾಗ್ವಾರ್ ಕಾರು ಬಳಕೆ ಮಾಡಿದ್ದಾನೆ.

ತನ್ನ ಮಗನ ಮದುವೆಯನ್ನು ಹೆಲಿಕಾಪ್ಟರ್​​ನಲ್ಲಿ ಮೆರವಣಿಗೆ ಮಾಡಬೇಕೆಂಬ ಕನಸು ಕಂಡಿದ್ದ ರೈತ, ಅದೇ ರೀತಿ ಮಾಡಿದ್ದಾನೆ. ವರನ ಮನೆಯಿಂದ ವಧುನ ಊರಿಗೆ ಮೆರವಣಿಗೆ ಮೂಲಕ ಹೊರಡಲು ಎಲ್ಲರೂ ಸಜ್ಜಾಗಿದ್ದರು. ಈ ವೇಳೆ ಅಲ್ಲಿ ಸೇರಿದ್ದ ಎಲ್ಲರಿಗೂ ಅಚ್ಚರಿ ಕಾದಿತ್ತು. ಖುದ್ದಾಗಿ ಮಗನಿಗೂ ಅಪ್ಪನ ಯೋಜನೆ ತಿಳಿದಿರಲಿಲ್ಲ. ವರನನ್ನು ಹೊತ್ತೊಯ್ಯಲು ಹೆಲಿಕಾಪ್ಟರ್ ಬಂದಿದೆ. ಈ ವೇಳೆ ತಂದೆಯ ಅಚ್ಚರಿಯ ಯೋಜನೆ ಬಯಲಾಗಿದೆ. ವಧುವಿನ ಊರು ತಲುಪುತ್ತಿದ್ದಂತೆ ಅವರನ್ನು ಕಲ್ಯಾಣ ಮಂಟಪದವರೆಗೂ ಕರೆದುಕೊಂಡು ಹೋಗಲು ಜಾಗ್ವಾರ್ ಕಾರು ಬಂದಿದೆ. ಅದಕ್ಕೆ ಸಂಪೂರ್ಣವಾಗಿ ಅಲಂಕಾರ ಮಾಡಲಾಗಿತ್ತು. ಇದನ್ನೂ ನೋಡಿರುವ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಇದರ ಬೆನ್ನಲ್ಲೇ ಸಂಪ್ರದಾಯದಂತೆ ಕುದುರೆ ಮೆರವಣಿಗೆ ಸಹ ಮಾಡಿಸಲಾಗಿದೆ.

ಇದನ್ನೂ ಓದಿ: ಜೈಲಿಂದ ಹೊರಬಂದ ಶಾಸಕ ಜಿಗ್ನೇಶ್​ 'ಪುಷ್ಪ' ಸಿನಿಮಾ ಸ್ಟೈಲಲ್ಲಿ ರಿಯಾಕ್ಷನ್!

ಈ ವಿಶಿಷ್ಟ ಮದುವೆ ಕಾರ್ಯಕ್ರಮ ಇಂದೋರ್​ನ ಅರಾಂಡಿಯಾ ಎಂಬ ಸಣ್ಣ ಹಳ್ಳಿಯಲ್ಲಿ ನಡೆದಿದ್ದು, ಇಲ್ಲಿನ ಕೃಷಿಕ ಸಜ್ಜನ್ ಕುಶ್ವಾಹ್​ ತಮ್ಮ ಮಗ ಜೈ ಸಿಂಗ್​ಗೋಸ್ಕರ ಇಷ್ಟೆಲ್ಲ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವರ ಜೈಸಿಂಗ್​, ಮಗನ ಮದುವೆ ಸ್ಮರಣೀಯವಾಗಿಸಲು ತಂದೆ ಮಾಡಿರುವ ಅದ್ದೂರಿ ವ್ಯವಸ್ಥೆಯನ್ನು ಮರೆಯಲು ಸಾಧ್ಯವಿಲ್ಲ. ಅವರಿಗೆ ನಾನು ಯಾವಾಗಲು ಋಣಿ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.