ETV Bharat / bharat

ಮಗಳ ವಿರುದ್ಧ ಆರೋಪ.. ಕಾಂಗ್ರೆಸ್​ಗೆ ಸಚಿವೆ ಸ್ಮೃತಿ ಇರಾನಿ ಲೀಗಲ್ ನೋಟಿಸ್​

author img

By

Published : Jul 24, 2022, 8:06 PM IST

Smriti Irani sends legal notice to Congress leaders.. ಗೋವಾದಲ್ಲಿ ಜೋಯಿಸ್ ಇರಾನಿಗೆ ಸೇರಿದ ‘ಸಿಲ್ಲಿ ಸೋಲ್ಸ್ ಕೆಫೆ ಆ್ಯಂಡ್ ಬಾರ್’ ಅಕ್ರಮವಾಗಿ ಅಬಕಾರಿ ಪರವಾನಗಿ ಪಡೆದು ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಈ ಆರೋಪಗಳನ್ನು ತಕ್ಷಣವೇ ಹಿಂಪಡೆಯುವಂತೆ ಸ್ಮೃತಿ ಇರಾನಿ ವಕೀಲರ ಮೂಲಕ ಲೀಗಲ್ ನೋಟಿಸ್​ ಕಳುಹಿಸಿದ್ದಾರೆ.

Union Minister Smriti Irani sends legal notice to Congress leaders
18 ವರ್ಷದ ಮಗಳ ವಿರುದ್ಧ ಆರೋಪ: ಕಾಂಗ್ರೆಸ್​ಗೆ ಸಚಿವೆ ಸ್ಮೃತಿಯಿಂದ ಲೀಗಲ್ ನೋಟಿಸ್​

ನವದೆಹಲಿ: ಗೋವಾದಲ್ಲಿ ತಮ್ಮ ಮಗಳು ಜೋಯಿಸ್ ಇರಾನಿ ಅಕ್ರಮವಾಗಿ ಬಾರ್​ ನಡೆಸುತ್ತಿದ್ದಾರೆ ಎಂಬ ಆರೋಪ ಸಂಬಂಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್​ ಮತ್ತು ಆ ಪಕ್ಷದ ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್, ನೆಟ್ಟಾ ಡಿಸೋಜಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಲಿಖಿತವಾಗಿಯೇ ಬೇಷರತ್ ಕ್ಷಮೆಯಾಚಿಸಬೇಕೆಂದು ಈ ನೋಟಿಸ್​ ಮೂಲಕ ಆಗ್ರಹಿಸಿದ್ದಾರೆ.

ಗೋವಾದಲ್ಲಿ ಇರಾನಿ ಅವರ ಪುತ್ರಿ ನಡೆಸುತ್ತಿರುವ ‘ಸಿಲ್ಲಿ ಸೋಲ್ಸ್ ಕೆಫೆ ಆ್ಯಂಡ್ ಬಾರ್’ಗೆ ಅಕ್ರಮವಾಗಿ ಅಬಕಾರಿ ಪರವಾನಗಿ ಪಡೆದು ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಶನಿವಾರ ಆರೋಪಿಸಿದ್ದರು. ಈ ಸಂಬಂಧ ಶನಿವಾರವೇ ಮಾಧ್ಯಮಗೋಷ್ಟಿ ನಡೆಸಿದ್ದ ಸಚಿವೆ ಸ್ಮೃತಿ ಇರಾನಿ, ತಮ್ಮ ಮಗಳು 18 ವರ್ಷದವಳಾಗಿದ್ದು, ಕಾಲೇಜಿನಲ್ಲಿ ಓದುತ್ತಿದ್ದಾಳೆ. ಯಾವುದೇ ಬಾರ್​ ಹೊಂದಿಲ್ಲ. ಕಾಂಗ್ರೆಸ್​ ಮಾಡಿರುವ ಆರೋಪಗಳು ದುರುದ್ದೇಶಪೂರಿತದಿಂದ ಕೂಡಿವೆ ಎಂದು ಸ್ಪಷ್ಟಪಡಿಸಿದ್ದರು.

  • Union Minister Smriti Irani sends legal notice to Congress leaders Pawan Khera, Jairam Ramesh, Netta D' Souza & Congress over remarks on her 18-year-old daughter & ask them to tender a written unconditional apology and withdraw the allegations with immediate effect

    (file pic) pic.twitter.com/meHGyQKvBW

    — ANI (@ANI) July 24, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಗೋವಾದಲ್ಲಿ ಸ್ಮೃತಿ ಇರಾನಿ ಪುತ್ರಿಯಿಂದ ಅಕ್ರಮ ಬಾರ್​​.. ಕಾಂಗ್ರೆಸ್ ಆರೋಪಕ್ಕೆ ಕೇಂದ್ರ ಸಚಿವೆ ಹೇಳಿದ್ದೇನು!?

ಇದೀಗ ಇಂದು ಮಗಳ ಮೇಲೆ ಮಾಡಿರುವ ಆರೋಪಗಳನ್ನು ತಕ್ಷಣವೇ ಹಿಂಪಡೆಯುವಂತೆ ಸ್ಮೃತಿ ಇರಾನಿ ವಕೀಲರ ಮೂಲಕ ಲೀಗಲ್ ನೋಟಿಸ್​ ಕಳುಹಿಸಿದ್ದಾರೆ. ಅಲ್ಲದೇ, ನೋಟಿಸ್​ ಸ್ವೀಕರಿಸಿದ 24 ಗಂಟೆಯೊಳಗೆ ಲಿಖಿತ ಬೇಷರತ್ತಾಗಿ ಕ್ಷಮೆಯಾಚಿಸಬೇಕು. ಇದನ್ನು ಮುದ್ರಣ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಬೇಕು. ಹೀಗಾಗಿ ಹಬ್ಬಿಸಿರುವ ಎಲ್ಲ ಸುಳ್ಳು ಮಾಹಿತಿಯನ್ನು ತೆಗೆದುಹಾಕಬೇಕು. ಇದಕ್ಕೆ ವಿಫಲವಾದಲ್ಲಿ ಸೂಕ್ತ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ಹಾಕಬೇಕಾಗುತ್ತದೆ ಎಂದು ಸಚಿವೆ ಇರಾನಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ: UPSC ಪರೀಕ್ಷೆ ಪಾಸ್​ ಆಗಲಿಲ್ಲ, ನೋಡೋಕೆ ಚೆನ್ನಾಗಿಲ್ಲ ಅಂತಾ ನೆಪ.. ವಿಚ್ಛೇದನಕ್ಕೆ ಮುಂದಾದ ಪತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.