ನವದೆಹಲಿ: ಬಿಜೆಪಿ ನಡೆಸುತ್ತಿರುವ ಹರ್ ಘರ್ ತಿರಂಗಾ ಅಭಿಯಾನ, ಆರ್ಎಸ್ಎಸ್ ಬಗ್ಗೆ ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಬ್ಬ ಅರೆಕಾಲಿಕ ರಾಜಕಾರಣಿ. ರಾಹುಲ್ಗೆ ಯಾವುದೇ ವಿಚಾರಗಳ ಬಗ್ಗೆ ಗಾಂಭೀರ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದರು.
ಸಂಸತ್ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿ ಜೋಶಿ, ರಾಹುಲ್ ಗಾಂಧಿ ಅವರಿಗೆ ಯಾವುದೇ ವಿಷಯಗಳ ಮೇಳೆ ಗಾಂಭೀರ್ಯವಿಲ್ಲ. ಅವರೊಬ್ಬ ಅರೆಕಾಲಿಕ ರಾಜಕಾರಣಿ. ಅಲ್ಲಲ್ಲಿ ಸುತ್ತಾಡುತ್ತಾ ಇಂತಹ ಹೇಳಿಕೆಗಳನ್ನೇ ಕೊಡುತ್ತಾರೆ. ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬಾರದು ಮತ್ತು ಅದಕ್ಕೆ ಪ್ರತಿಕ್ರಿಯೆ ನೀಡಬಾರದು ಎಂದು ಚುಚ್ಚಿದರು.
-
राहुल गांधी एक part time politician हैं!
— Pralhad Joshi (@JoshiPralhad) August 4, 2022 " class="align-text-top noRightClick twitterSection" data="
संघ की विचारधारा पर राहुल गांधी के लापरवाह बयान को गंभीरता से लेने की जरूरत नहीं है। संघ और संघ की विचारधारा को पूरे देश ने स्वीकार किया है।
जो कांग्रेस आजादी दिलाने का खोखला दावा करती है, आज उसकी क्या हालत है, आप सभी देख रहे हैं। pic.twitter.com/F049dCdbSc
">राहुल गांधी एक part time politician हैं!
— Pralhad Joshi (@JoshiPralhad) August 4, 2022
संघ की विचारधारा पर राहुल गांधी के लापरवाह बयान को गंभीरता से लेने की जरूरत नहीं है। संघ और संघ की विचारधारा को पूरे देश ने स्वीकार किया है।
जो कांग्रेस आजादी दिलाने का खोखला दावा करती है, आज उसकी क्या हालत है, आप सभी देख रहे हैं। pic.twitter.com/F049dCdbScराहुल गांधी एक part time politician हैं!
— Pralhad Joshi (@JoshiPralhad) August 4, 2022
संघ की विचारधारा पर राहुल गांधी के लापरवाह बयान को गंभीरता से लेने की जरूरत नहीं है। संघ और संघ की विचारधारा को पूरे देश ने स्वीकार किया है।
जो कांग्रेस आजादी दिलाने का खोखला दावा करती है, आज उसकी क्या हालत है, आप सभी देख रहे हैं। pic.twitter.com/F049dCdbSc
ಆರ್ಎಸ್ಎಸ್ ಮತ್ತು ಅದರ ಸಿದ್ಧಾಂತವನ್ನು ದೇಶದ ಜನರು ಒಪ್ಪಿಕೊಂಡಿದ್ದಾರೆ. ನಾವೇ ಸ್ವಾತಂತ್ರ್ಯ ತಂದುಕೊಟ್ಟೆವು ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡು ತಿರುಗಾಡಿದ್ದಕ್ಕೆ ಕಾಂಗ್ರೆಸ್ ದೇಶದಲ್ಲಿಯೇ ತಿರಸ್ಕೃತಗೊಂಡಿದೆ. ಇದು ಅವರಿಂದ ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ರಾಹುಲ್ ಎಲ್ಲೆಂದರಲ್ಲಿ, ಏನೇನೋ ಹೇಳಿಕೆ ನೀಡುತ್ತಾರೆ. ಅದಕ್ಕೆಲ್ಲಾ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದರು.
ಭದ್ರತೆ ಬೇಡವಾದರೆ ಬಿಡಿ: ಗಾಂಧಿಗಳ ನಿವಾಸದ ಮುಂದೆ ಬ್ಯಾರಿಕೇಡ್ ಹಾಕಿದ್ದಕ್ಕೆ ಪ್ರತಿಕ್ರಿಯಿಸಿ, ಸರ್ಕಾರ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಬ್ಯಾರಿಕೇಡ್ಗಳನ್ನು ಅಳವಡಿಸಿದೆ. ಭದ್ರತಾ ವಿಷಯಗಳ ಮೇಲೆ ನಂಬಿಕೆ ಇಲ್ಲವಾದಲ್ಲಿ ಅವರು ಹಾಗೆಯೇ ಸುತ್ತಾಡಲಿ. ಅದನ್ನು ಬಿಟ್ಟು ಸರ್ಕಾರ ನೀಡಿದ ಭದ್ರತೆ ನೀಡಿದ್ದನ್ನು ಟೀಕಿಸುವುದು ಸರಿಯಲ್ಲ ಎಂದರು.
ದೇಶದ್ರೋಹ ಚಟುವಟಿಕೆಗಳಲ್ಲಿ ತೊಡಗಿರುವ ಆರ್ಎಸ್ಎಸ್ ಮತ್ತು ಅದನ್ನು ಬೆಂಬಲಿಸುವ ಬೆಜೆಪಿ ರಾಷ್ಟ್ರಧ್ವಜವನ್ನು ಒಂದು ಬಾರಿಯೂ ಹಾರಿಸಿಲ್ಲ. ಇಂದು ಹರ್ ಘರ್ ತಿರಂಗಾದ ಮಾತನಾಡುತ್ತಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು.
ಓದಿ: ಉಗ್ರ ದಾಳಿ ಬೆದರಿಕೆ.. ಸ್ವಾತಂತ್ರ್ಯ ದಿನದಂದು ಕೆಂಪುಕೋಟೆ ಮೇಲೆ 1 ಸಾವಿರ ಸಿಸಿಟಿವಿ ಅಳವಡಿಕೆ