ETV Bharat / bharat

ಕೇಂದ್ರ ಸಚಿವ ಗಡ್ಕರಿಗೆ ಮತ್ತೆ ಬೆದರಿಕೆ ಕರೆ: ನಾಲ್ಕು ತಿಂಗಳಲ್ಲಿ 3 ಬಾರಿ ಧಮ್ಕಿ - Nitin Gadkari

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮತ್ತೊಂದು ಬೆದರಿಕೆ ಕರೆ ಮಾಡಲಾಗಿದೆ. ದೆಹಲಿ ನಿವಾಸಕ್ಕೆ ಕರೆ ಮಾಡಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೇಂದ್ರ ಸಚಿವ ಗಡ್ಕರಿಗೆ ಮತ್ತೆ ಬೆದರಿಕೆ ಕರೆ
ಕೇಂದ್ರ ಸಚಿವ ಗಡ್ಕರಿಗೆ ಮತ್ತೆ ಬೆದರಿಕೆ ಕರೆ
author img

By

Published : May 16, 2023, 6:19 PM IST

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮತ್ತೊಂದು ಜೀವ ಬೆದರಿಕೆ ಕರೆ ಬಂದಿದೆ. ಸೋಮವಾರ ಸಂಜೆ ಅವರ ದೆಹಲಿಯ ನಿವಾಸಕ್ಕೆ ದೂರವಾಣಿ ಕರೆ ಮಾಡಿದ ಆಗಂತುಕ ಜೀವ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ. ಇದಾದ ಬಳಿಕ ಸಚಿವರ ಕಚೇರಿಯು ದೆಹಲಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಿಂದಿನ ಬೆದರಿಕೆ ಕರೆಗಳು: ಇದಕ್ಕೂ ಮೊದಲು ಕೇಂದ್ರ ಸಚಿವರಿಗೆ ಬೆದರಿಕೆ ಕರೆಗಳು ಬಂದಿದ್ದವು. ಜನವರಿ 14ರಂದು ನಾಗ್ಪುರದಲ್ಲಿರುವ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಜಯೇಶ್ ಪೂಜಾರಿ ಅಲಿಯಾಸ್ ಕಾಂತ ಎಂಬ ವ್ಯಕ್ತಿ ಬೆದರಿಕೆ ಕರೆ ಮಾಡಿದ್ದ. 100 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದ ಆತ, ತಾನು ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡಿದ್ದ.

ಜಯೇಶ್ ಪೂಜಾರಿ ಕೊಲೆ ಪ್ರಕರಣದ ಅಪರಾಧಿಯಾಗಿದ್ದು, ಕರ್ನಾಟಕದ ಬೆಳಗಾವಿ ಜೈಲಿನಲ್ಲಿ ಈತ ಬಂಧಿಯಾಗಿದ್ದಾನೆ. ಭಯೋತ್ಪಾದನಾ ವಿರೋಧಿ ಕಾನೂನಾದ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಕೊಲೆ ಪ್ರಕರಣ ಅಪರಾಧಿ ಪೂಜಾರಿಗೆ ಮರಣದಂಡನೆ ಶಿಕ್ಷೆಯಾಗಿದ್ದು, ಬೆದರಿಕೆ ಕರೆಯನ್ನು ತಾನು ಮಾಡಿಲ್ಲ ಎಂದು ಆತ ತನ್ನ ಕೈವಾಡವನ್ನು ಅಲ್ಲಗಳೆದಿದ್ದ.

  • Union minister Nitin Gadkari received a death threat via phone call at his Delhi residence last evening. The minister's office informed Delhi Police about the same and the matter is under investigation by police now: Sources

    — ANI (@ANI) May 16, 2023 " class="align-text-top noRightClick twitterSection" data=" ">

ಶನಿವಾರ ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕಚೇರಿಗೆ ಮೂರು ಬೆದರಿಕೆ ಕರೆಗಳು ಬಂದಿದ್ದವು. ಕಚೇರಿಯ ಲ್ಯಾಂಡ್​ಲೈನ್​ ನಂಬರ್​ಗೆ ಅನಾಮಧೇಯ ವ್ಯಕ್ತಿಗಳು ಕರೆ ಮಾಡಿದ್ದರು. ಬೆಳಗ್ಗೆ 11.25, 11.32 ಮತ್ತು ಮಧ್ಯಾಹ್ನ 12.32ಕ್ಕೆ ಬಿಎಸ್‌ಎನ್‌ಎಲ್‌ನಿಂದ ಮೂರು ಕರೆಗಳು ಬಂದಿದ್ದವು.

ಕರೆಯಲ್ಲಿ ಹಣಕ್ಕೆ ಬೇಡಿಕೆಯಿಟ್ಟಿರುವುದು ಮಾತ್ರವಲ್ಲದೆ ಕೊಲೆ ಬೆದರಿಕೆಯನ್ನೂ ಹಾಕಲಾಗಿತ್ತು. ಕಚೇರಿಯ ಸಿಬ್ಬಂದಿ ಈ ಅನಾಮಧೇಯ ಕರೆಗಳನ್ನು ಸ್ವೀಕರಿಸಿದ್ದರು. ತಕ್ಷಣವೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಕರೆಗಳ ವಿವರಗಳ ದಾಖಲೆಗಳನ್ನು ಕಲೆ ಹಾಕಿದ್ದರು.

ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್​ ಗಡ್ಕರಿಗೆ ಬೆದರಿಕೆ ಕರೆ ಪ್ರಕರಣ: ಹಿಂಡಲಗಾ ಜೈಲಿನ ಕೈದಿಯಿಂದ ಎರಡು ಮೊಬೈಲ್, ಸಿಮ್​ ಕಾರ್ಡ್ ಜಪ್ತಿ

ಇದಾದ ನಂತರ ಮಾರ್ಚ್ 21 ರಂದು ಪೂಜಾರಿ ಹೆಸರಿನಲ್ಲೇ ಮತ್ತೊಮ್ಮೆ ಕರೆ ಬಂದು ನಿತಿನ್​ ಗಡ್ಕರಿ ಅವರಿಗೆ 10 ಕೋಟಿ ರೂಪಾಯಿ ಪಾವತಿಸದಿದ್ದರೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು. ಕೇಂದ್ರ ಗೃಹ ಸಚಿವಾಲಯದಿಂದ ಗ್ರೀನ್ ಸಿಗ್ನಲ್ ಪಡೆದ ನಂತರ, ಎನ್‌ಐಎ ಅಧಿಕಾರಿಗಳು ಭಯೋತ್ಪಾದಕ ಕೋನದಲ್ಲಿ ತನಿಖೆಯನ್ನು ಪ್ರಾರಂಭಿಸಿದ್ದರು.

ಪೂಜಾರಿ ಲಷ್ಕರ್-ಎ-ತೊಯ್ಬಾದ ದಕ್ಷಿಣ ವಿಭಾಗದ ಮುಖ್ಯಸ್ಥ ಕ್ಯಾಪ್ಟನ್ ನಸೀರ್ ಸೇರಿದಂತೆ ಭಯೋತ್ಪಾದಕರೊಂದಿಗೆ ಸಂಬಂಧ ಹೊಂದಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಬೆದರಿಕೆ ಕರೆಗಳ ನಂತರ, ನಾಗ್ಪುರ ಸಂಸದರ ಮನೆ ಮತ್ತು ಕಚೇರಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೈಲಿನಿಂದಲೇ ಜೀವ ಬೆದರಿಕೆ ಕರೆ: ಕೈದಿಯ ಡೈರಿ ಜಪ್ತಿ, ತೀವ್ರ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.