ಇಂಫಾಲ್/ನವದೆಹಲಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಲ್ಕು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಸೋಮವಾರ ರಾಜ್ಯಕ್ಕೆ ಆಗಮಿಸಿದ ಶಾ ಅವರು ರಾಜ್ಯಪಾಲೆ ಅನುಸೂಯಾ ಉಯಿಕೆ ಮತ್ತು ಮುಖ್ಯಮಂತ್ರಿ ಬಿರೇನ್ ಸಿಂಗ್ ಸೇರಿ ಹಲವರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ.
ಮೇ 3ರಿಂದ ಹಿಂಸಾಚಾರ ನಡೆಯುತ್ತಿದೆ. ಇದುವರೆಗೆ ರಾಜ್ಯಾದ್ಯಂತ ಉಂಟಾದ ಜನಾಂಗೀಯ ಘರ್ಷಣೆಗಳಲ್ಲಿ ಅಂದಾಜು 80 ಜನರು ಮೃತಪಟ್ಟಿದ್ದಾರೆ. ಮತ್ತೆ ಹೊಸವಾಗಿ ಗಲಭೆಗಳು ನಡೆಯುತ್ತಲೇ ಇವೆ. ಈ ನಿಟ್ಟಿನಲ್ಲಿ ಸೋಮವಾರ ಕೇಂದ್ರ ಗೃಹ ಸಚಿವರು ನಾಲ್ಕು ದಿನಗಳ ಸುದೀರ್ಘವಾದ ಭೇಟಿ ನೀಡಿದ್ದಾರೆ. ಗೃಹ ಕಾರ್ಯದರ್ಶಿಯೊಂದಿಗೆ ಆಗಮಿಸಿದ ಅವರು ತಡರಾತ್ರಿ ಸಿಎಂ ಬಿರೇನ್ ಸಿಂಗ್, ಕೆಲ ಸಚಿವರು ಮತ್ತು ಗುಪ್ತಚರ ಹಾಗೂ ಭದ್ರತಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಈ ಸಭೆಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮತ್ತು ಗುಪ್ತಚರ ವಿಭಾಗದ ಮುಖ್ಯಸ್ಥ ತಪನ್ ದೇಕಾ ಹಾಗೂ ರಾಜ್ಯ, ಕೇಂದ್ರದ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು. ರಾಜ್ಯದಲ್ಲಿ ಹಿಂಸಾಚಾರ ಪ್ರಾರಂಭವಾದಾಗಿನಿಂದ ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆಗಳ ಗಗನಕ್ಕೇರಿದೆ. ಹೀಗಾಗಿ ದಿನ ಬಳಕೆ ವಸ್ತುಗಳ ಸರಬರಾಜುಗಳನ್ನು ಹೆಚ್ಚಿಸುವ ಕ್ರಮಗಳ ಜೊತೆಗೆ ಪರಿಹಾರ ಕ್ರಮಗಳ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮಣಿಪುರದಲ್ಲಿ 30 ಭಯೋತ್ಪಾದಕರ ಹತ್ಯೆ: ಸಿಎಂ ಎನ್.ಬಿರೇನ್ ಸಿಂಗ್ ಮಾಹಿತಿ
ರಾಜ್ಯದ ಜನಸಂಖ್ಯೆಯ ಶೇ.53ರಷ್ಟಿರುವ ಮೇಟಿ ಸಮುದಾಯವು ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಬೇಡಿಕೆ ಇಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಇದನ್ನು ಬುಡಕಟ್ಟು ಜನಾಂಗದ ಕುಕಿಗಳು ಬಲವಾಗಿ ವಿರೋಧಿಸಿದ್ದಾರೆ. ಇದೇ ವಿಷಯವಾಗಿ ಹಿಂಸಾಚಾರ ಭುಗಿಲೆದ್ದಿದೆ. ಆದ್ದರಿಂದ ಮೇಟಿ ಮತ್ತು ಕುಕಿ ಎರಡೂ ಸಮುದಾಯಗಳ ರಾಜಕೀಯ ಮತ್ತು ಸಮಾಜದ ಮುಖಂಡರೊಂದಿಗೆ ಸರಣಿ ಸಭೆಗಳನ್ನು ನಡೆಸಲಾಗಿದೆ.
ಕುಕಿ ಜನಾಂಗದ ಅನೇಕ ಜನರು ರಕ್ಷಣೆಗಾಗಿ ನೆರೆಯ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಕುಕಿಗಳು ವಾಸಿಸುವ ಜಿಲ್ಲೆಗಳಿಗೆ ಪ್ರತ್ಯೇಕ ಆಡಳಿತವನ್ನು ನೇಮಿಸಬೇಕು. ಇದು ಸಾಧ್ಯವಾಗದೇ ಹೋದಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕೆಂದು ಕುಕಿ ಜನಾಂಗದ ಮುಖಂಡರು ಸಭೆಯಲ್ಲಿ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ ಮಹಿಳಾ ಪ್ರತಿನಿಧಿಗಳು ಸಹ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಸವಾಲು ಇನ್ನೂ ಇದೆ - ಸಿಡಿಎಸ್: ಮತ್ತೊಂದೆಡೆ, ಮಣಿಪುರದಲ್ಲಿನ ಹಿಂಸಾಚಾರದ ಬಗ್ಗೆ ಮಹಾರಾಷ್ಟ್ರದ ಪುಣೆಯಲ್ಲಿ ಮಾತನಾಡಿರುವ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಐಎಸ್) ಜನರಲ್ ಅನಿಲ್ ಚೌಹಾಣ್, ಈಶಾನ್ಯ ರಾಜ್ಯದಲ್ಲಿ ಸವಾಲುಗಳು ಇನ್ನೂ ಕಣ್ಮರೆಯಾಗಿಲ್ಲ. ಆದರೆ, ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಸ್ವಲ್ಪ ಸಮಯದೊಳಗೆ ಇತ್ಯರ್ಥವಾಗುವ ಭರವಸೆ ಇದೆ ಎಂದು ಹೇಳಿದ್ದಾರೆ.
2020ರ ಮೊದಲು ಮಣಿಪುರದಲ್ಲಿ ಸೇನೆ, ಅಸ್ಸಾಂ ರೈಫಲ್ಸ್ ನಿಯೋಜಿಸಲಾಗಿತ್ತು. ಆದರೆ, ಬಂಡಾಯದ ಪರಿಸ್ಥಿತಿಯು ಸಹಜವಾದ ಕಾರಣ ಸೇನೆಯನ್ನು ಹಿಂಪಡೆಯಲು ಸಾಧ್ಯವಾಗಿದೆ. ಆದರೆ, ಈಗ ಗಡಿ ಮತ್ತು ಬಂಡಾಯಕ್ಕೆ ಸಂಬಂಧಿಸಿದ ಘರ್ಷಣೆ ಇಲ್ಲ. ಇದು ಎರಡು ಜನಾಂಗಗಳ ನಡುವಿನ ಘರ್ಷಣೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ವಿಷಯವಾಗಿದೆ. ಈ ಸಂದರ್ಭದಲ್ಲೂ ಸಶಸ್ತ್ರ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್ ಅತ್ಯುತ್ತಮವಾದ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಹೆಚ್ಚಿನ ಸಂಖ್ಯೆಯ ಪ್ರಾಣ ಹಾನಿ ತಪ್ಪಿದೆ ಎಂದು ಎಂದು ತಿಳಿಸಿದ್ದಾರೆ.
-
It is with a deep sense of loss and hurt that we humbly submitted a memorandum to the President of India, for her kind intervention so that the extraordinary situation confronting Manipur can be redressed and normalcy can be brought in urgently. @rashtrapatibhvn
— Mallikarjun Kharge (@kharge) May 30, 2023 " class="align-text-top noRightClick twitterSection" data="
1/2 pic.twitter.com/ESx0oBT0PC
">It is with a deep sense of loss and hurt that we humbly submitted a memorandum to the President of India, for her kind intervention so that the extraordinary situation confronting Manipur can be redressed and normalcy can be brought in urgently. @rashtrapatibhvn
— Mallikarjun Kharge (@kharge) May 30, 2023
1/2 pic.twitter.com/ESx0oBT0PCIt is with a deep sense of loss and hurt that we humbly submitted a memorandum to the President of India, for her kind intervention so that the extraordinary situation confronting Manipur can be redressed and normalcy can be brought in urgently. @rashtrapatibhvn
— Mallikarjun Kharge (@kharge) May 30, 2023
1/2 pic.twitter.com/ESx0oBT0PC
ರಾಷ್ಟ್ರಪತಿ ಮಧ್ಯಪ್ರವೇಶಕ್ಕೆ ಕಾಂಗ್ರೆಸ್ ಒತ್ತಾಯ: ಮಣಿಪುರದಲ್ಲಿ ಶಾಂತಿ, ಸಹಜತೆ ಮತ್ತು ಸೌಹಾರ್ದತೆ ಪರಿಸ್ಥಿತಿ ಮರುಸ್ಥಾಪಿಸುವ ನಿಟ್ಟಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಧ್ಯಪ್ರವೇಶಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ನಿಯೋಗವು ರಾಷ್ಟ್ರಪತಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಈ ಕುರಿತು ಖರ್ಗೆ ಟ್ವೀಟ್ ಮಾಡಿದ್ದು, ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿ ಮಣಿಪುರದಲ್ಲಿ ಶಾಂತಿ, ಸಹಜತೆ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸುವ ಯಾವುದೇ ಉಪಕ್ರಮಕ್ಕೆ ಬೆಂಬಲ ನೀಡಲು ಕಾಂಗ್ರೆಸ್ ಎಂದಿಗೂ ಸಿದ್ಧವಾಗಿದೆ. ತಕ್ಷಣದ ಕ್ರಮಕ್ಕಾಗಿ ನಾವು 12 ಬೇಡಿಕೆಗಳನ್ನು ಸಲ್ಲಿಸುತ್ತೇವೆ. ಆಗ ಮಾತ್ರ ರಾಜ್ಯದಲ್ಲಿ ಶಾಂತಿ ನೆಲೆಸುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮನೆಗಳು ಸುಟ್ಟು ಕರಕಲಾಗಿದ್ದು, ಇನ್ನೂ ಅನೇಕರು ನಾಪತ್ತೆಯಾಗಿದ್ದಾರೆ. ಸಮನ್ವಯ ಮತ್ತು ಸಂವಾದದ ಮೂಲಕ ಸಮುದಾಯಗಳ ನಡುವಿನ ನಂಬಿಕೆಯನ್ನು ಪುನಃಸ್ಥಾಪಿಸಬೇಕು. ಸೇವಾ ನಿರತ ಅಥವಾ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ಆಯೋಗವನ್ನು ರಚಿಸಲು ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರ: 328 ಕುಕಿ ಗ್ರಾಮಸ್ಥರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ಸೇನೆ