ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರದಿಂದ ಎರಡು ದಿನಗಳ ಪಶ್ಚಿಮ ಬಂಗಾಳದ ಪ್ರವಾಸ ಕೈಗೊಂಡಿದ್ದು, ಶುಕ್ರವಾರ ದೆಹಲಿಗೆ ಮರಳುವ ಮುನ್ನ ಬಿಸಿಸಿಐ ಅಧ್ಯಕ್ಷ ಮತ್ತು ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ನಿವಾಸಕ್ಕೆ ಭೇಟಿ ನೀಡಿ, ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ.
ಗುರುವಾರ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮಿತ್ ಶಾ ಅವರನ್ನು ಬಿಜೆಪಿಯ ಪ್ರಮುಖರು ಬರ ಮಾಡಿಕೊಂಡರು. ಶುಕ್ರವಾರ ಸಂಜೆ ವಿಕ್ಟೋರಿಯಾ ಸ್ಮಾರಕದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಅವರು, ಅಲ್ಲಿಂದ ಬೆಹಲಾದಲ್ಲಿರುವ ಗಂಗೂಲಿ ಅವರ ನಿವಾಸಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
-
দুই দিনের পশ্চিমবঙ্গ সফরে কলকাতায় পৌঁছালাম। বিভিন্ন অনুষ্ঠানে যোগদান এবং আমাদের বাংলার বোন ও ভাইদের সাথে আলাপচারিতার জন্য উন্মুখ হয়ে আছি। pic.twitter.com/kI3c3oXOFu
— Amit Shah (@AmitShah) May 5, 2022 " class="align-text-top noRightClick twitterSection" data="
">দুই দিনের পশ্চিমবঙ্গ সফরে কলকাতায় পৌঁছালাম। বিভিন্ন অনুষ্ঠানে যোগদান এবং আমাদের বাংলার বোন ও ভাইদের সাথে আলাপচারিতার জন্য উন্মুখ হয়ে আছি। pic.twitter.com/kI3c3oXOFu
— Amit Shah (@AmitShah) May 5, 2022দুই দিনের পশ্চিমবঙ্গ সফরে কলকাতায় পৌঁছালাম। বিভিন্ন অনুষ্ঠানে যোগদান এবং আমাদের বাংলার বোন ও ভাইদের সাথে আলাপচারিতার জন্য উন্মুখ হয়ে আছি। pic.twitter.com/kI3c3oXOFu
— Amit Shah (@AmitShah) May 5, 2022
ಗಂಗೂಲಿ ನಿವಾಸಕ್ಕೆ ತೆರಳುವ ಅಮಿತ್ ಶಾ ಅವರಿಗೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸ್ವಪನ್ ದಾಸ್‌ಗುಪ್ತಾ ಮತ್ತು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸಾಥ್ ನೀಡಲಿದ್ದಾರೆ. ಗಂಗೂಲಿ ನಿವಾಸದಲ್ಲೇ ಅವರು ಭೋಜನ ಸೇವಿಸುವ ನಿರೀಕ್ಷೆ ಇದೆ ಎಂದು ಬಿಜೆಪಿ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನು, 2021ರ ವಿಧಾನಸಭಾ ಚುನಾವಣೆಗೂ ಮುನ್ನ ಗಂಗೂಲಿ ಬಿಜೆಪಿ ಸೇರಬಹುದು ಎಂಬ ವದಂತಿ ಹರಿದಾಡಿತ್ತು. ಅಲ್ಲದೇ, ಈ ಸಮಯದಲ್ಲಿ ಅಮಿತ್ ಶಾ ಕೋಲ್ಕತ್ತಾಕ್ಕೆ ತೆರಳಿದಾಗ ಗಂಗೂಲಿ ಅವರನ್ನು ಭೇಟಿಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆದರೆ, ಆಗ ಗಂಗೂಲಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅಂದು ಶಾ ಭೇಟಿ ಸಾಧ್ಯವಾಗಿರಲಿಲ್ಲ. ಈಗ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದರೆ, ಅಮಿತ್ ಶಾ ಅವರ ಪುತ್ರ ಜಯ್ ಶಾ ಬಿಸಿಸಿಐನ ಕಾರ್ಯದರ್ಶಿಯಾಗಿದ್ದಾರೆ. ಹೀಗಾಗಿ ಇದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಅಮಿತ್ ಶಾ ಸಮ್ಮುಖದಲ್ಲಿ ವಿಕ್ಟೋರಿಯಾ ಸ್ಮಾರಕ ಕಾರ್ಯಕ್ರಮ: ಸಿಎಂ ಮಮತಾ ಬ್ಯಾನರ್ಜಿಗಿಲ್ಲ ಆಹ್ವಾನ!