ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪತ್ನಿ ಸೋನಾಲ್ ಶಾ ಅವರ ಜೊತೆಗೂಡಿ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ತಮ್ಮ ನಿವಾಸದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದರು.
ಬಳಿಕ ಧ್ವಜಾರೋಹಣದ ಚಿತ್ರಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡು, ತಿರಂಗ ನಮ್ಮ ಹೆಮ್ಮೆ. ಇದು ಪ್ರತಿಯೊಬ್ಬ ಭಾರತೀಯರನ್ನು ಒಂದುಗೂಡಿಸುತ್ತದೆ. ಪ್ರೇರೇಪಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಹರ್ ಘರ್ ತಿರಂಗ ಕರೆಯ ಮೇರೆಗೆ ನಮ್ಮ ನಿವಾಸದ ಮೇಲೆ ರಾಷ್ಟ್ರಧ್ವಜ ಹಾರಿಸಲಾಯಿತು. ಮಾತೃಭೂಮಿಗಾಗಿ ಪ್ರಾಣ ತ್ಯಾಗ ಮಾಡಿದ ನಮ್ಮ ವೀರರಿಗೆ ಶ್ರದ್ಧಾಂಜಲಿ ಎಂದು ಬರೆದುಕೊಂಡಿದ್ದಾರೆ.
-
Tiranga is our pride. It unites and inspires everyone Indian.
— Amit Shah (@AmitShah) August 13, 2022 " class="align-text-top noRightClick twitterSection" data="
On PM @narendramodi Ji's clarion call of #HarGharTiranga , today hoisted a Tiranga at my residence in New Delhi and paid tributes to our valorous heroes who sacrificed everything for the motherland. pic.twitter.com/qv1obdIu9J
">Tiranga is our pride. It unites and inspires everyone Indian.
— Amit Shah (@AmitShah) August 13, 2022
On PM @narendramodi Ji's clarion call of #HarGharTiranga , today hoisted a Tiranga at my residence in New Delhi and paid tributes to our valorous heroes who sacrificed everything for the motherland. pic.twitter.com/qv1obdIu9JTiranga is our pride. It unites and inspires everyone Indian.
— Amit Shah (@AmitShah) August 13, 2022
On PM @narendramodi Ji's clarion call of #HarGharTiranga , today hoisted a Tiranga at my residence in New Delhi and paid tributes to our valorous heroes who sacrificed everything for the motherland. pic.twitter.com/qv1obdIu9J
ಇನ್ನೊಂದು ಟ್ವೀಟ್ ಮಾಡಿ, ಆಗಸ್ಟ್ 13 ರಿಂದ 15 ರವರೆಗೆ ನಿಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ, ಪ್ರತಿಯೊಬ್ಬರ ಹೃದಯದಲ್ಲಿ ದೇಶಭಕ್ತಿಯ ಮನೋಭಾವ ಜಾಗೃತಿಗೊಳಿಸಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ ಈ ಅಭಿಯಾನದ ಭಾಗವಾಗಿ ಎಂದು ದೇಶವಾಸಿಗಳಿಗೆ ಕರೆಕೊಟ್ಟರು.
ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ ಬಳಿಕ ಅದರ ಜೊತೆಗಿನ ಫೋಟೋಗಳನ್ನು http://hargartiranga.com ನಲ್ಲಿ ಅಪ್ಲೋಡ್ ಮಾಡಿ ಮತ್ತು ಹೀಗೆ ಮಾಡಲು ಎಲ್ಲರನ್ನೂ ಪ್ರೇರೇಪಿಸಿ ಎಂದು ಕೋರಿದ್ದಾರೆ.
ಉಪ್ರದಲ್ಲಿ ಸಿಎಂ ಯೋಗಿ ಚಾಲನೆ: ಇನ್ನು ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದರು. ತಮ್ಮ ನಿವಾಸದ ಮುಂದೆ ಶಾಲಾ ಮಕ್ಕಳೊಂದಿಗೆ ಕೂಡಿ ತಿರಂಗಾವನ್ನು ಹಿಡಿದು ಸಂಭ್ರಮಿಸಿದರು.
ಓದಿ: ಮನೆ ಮನೆ ತಿರಂಗಾ ಅಭಿಯಾನ.. ಸಿಎಂ ಸೇರಿ ಬಿಜೆಪಿ ನಾಯಕರಿಂದ ಮನೆ ಮುಂದೆ ಧ್ವಜಾರೋಹಣ