ETV Bharat / bharat

1947ರಲ್ಲೇ ಭಾರತ ಸ್ವಾತಂತ್ರ್ಯ, ಹೈದರಾಬಾದ್​​ನಲ್ಲಿ ಈಗಲೂ ನಿಜಾಮ್​ ಆಳ್ವಿಕೆ: ಅಮಿತ್ ಶಾ ಟೀಕೆ

author img

By

Published : Sep 17, 2022, 10:55 AM IST

ಹೈದರಾಬಾದ್​​ ವಿಮೋಚನಾ ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೇಂದ್ರ ಗೃಹ ಸಚಿವ ಅಮಿತ್​​​​ ಶಾ ಮಾತನಾಡಿದರು. ಈ ವೇಳೆ ಮುಖ್ಯಮಂತ್ರಿ ಕೆಸಿಆರ್​ ವಿರುದ್ಧ ವಾಗ್ದಾಳಿ ನಡೆಸಿದರು.

Union Home Minister Amit Shah
Union Home Minister Amit Shah

ಹೈದರಾಬಾದ್​​(ತೆಲಂಗಾಣ): ಇಂದು ಹೈದರಾಬಾದ್ ವಿಮೋಚನಾ ದಿನ. ಈ ದಿನದ ಪ್ರಯುಕ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಹೈದರಾಬಾದ್​​​ನಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಮಾತನಾಡಿದರು. ಭಾರತಕ್ಕೆ 1947ರಲ್ಲೇ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಹೈದರಾಬಾದ್​​ನಲ್ಲಿ ಈಗಲೂ ನಿಜಾಮ್ ಆಳ್ವಿಕೆ ಇದೆ ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್​​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮುಂದಿನ 13 ತಿಂಗಳ ಕಾಲ ರಾಜ್ಯದ ಜನತೆ ನಿಜಾಮರ ದಬ್ಬಾಳಿಕೆ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದ ಅಮಿತ್ ಶಾ, ರಾಜ್ಯದ ಜನರು ಹೈದರಾಬಾದ್ ವಿಮೋಚನಾ ದಿನವನ್ನು ಅಧಿಕೃತವಾಗಿ ಆಚರಣೆ ಮಾಡಲು ಮುಂದಾಗಿದ್ದಾರೆ. ವಿವಿಧ ರಾಜಕೀಯ ಮುಖಂಡರು ವಿಮೋಚನೆ ದಿನಾಚರಣೆ ಆಚರಿಸುವ ಭರವಸೆ ನೀಡಿದ್ದಾರೆ. ಆದರೆ, ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ವೋಟ್​ ಬ್ಯಾಂಕ್​​​ನಿಂದಾಗಿ ತಮ್ಮ ಮಾತು ಮರೆತುಬಿಟ್ಟಿದ್ದಾರೆ ಎಂದರು.

  • Telangana | People of the state wanted to officially celebrate Hyderabad Liberation day. Different political leaders promised to celebrate the day. However, once in power, they refused to celebrate due to vote bank politics: Union HM Amit Shah at Hyderabad Liberation Day program pic.twitter.com/1GBTHhLbkS

    — ANI (@ANI) September 17, 2022 " class="align-text-top noRightClick twitterSection" data=" ">

ಇದನ್ನೂ ಓದಿ: ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ.. ಕೆಸಿಆರ್​ ವಿರುದ್ಧ ಅಮಿತ್​ ಶಾ ವಾಗ್ದಾಳಿ

ಸರ್ದಾರ್​ ವಲ್ಲಭಭಾಯಿ ಪಟೇಲ್ ಇಲ್ಲದಿದ್ದರೆ, ಹೈದರಾಬಾದ್​ ವಿಮೋಚನೆಗೊಳ್ಳಲು ಮತ್ತಷ್ಟು ವರ್ಷಗಳನ್ನು ತೆಗೆದುಕೊಳ್ಳುತ್ತಿತ್ತು. ಎಲ್ಲಿಯವರೆಗೆ ನಿಮಾಜ್ ಪದ್ಧತಿ ಹೊಡೆದು ಹಾಕಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಅಖಂಡ ಭಾರತದ ಕನಸು ನನಸಾಗುವುದಿಲ್ಲ ಎಂಬುದು ಸರ್ದಾರ್​ ವಲ್ಲಭಭಾಯಿ ಪಟೇಲ್​ ಅವರಿಗೆ ಗೊತ್ತಿಲ್ಲ ಎಂದರು.

ಹೈದರಾಬಾದ್​ನ ಪರೇಡ್ ಮೈದಾನದಲ್ಲಿ ಆಯೋಜನೆಗೊಂಡಿರುವ ತೆಲಂಗಾಣ ವಿಮೋಚನಾ ದಿನಾಚರಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.​​

  • Telangana | Union Home Minister Amit Shah, Maharashtra CM Eknath Shinde and Union Minister G Kishan Reddy attend 'Telangana Liberation Day' at Parade Ground, Hyderabad pic.twitter.com/H2HkiH0eHS

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ತೆಲಂಗಾಣದಲ್ಲಿನ ಕೇಸರಿ ಪಕ್ಷ ಬಿಜೆಪಿ ಈ ದಿನವನ್ನು ಹೈದರಾಬಾದ್ ವಿಮೋಚನಾ ದಿನ’ ಎಂದು ಕರೆಯುತ್ತಿದ್ದು, ಆಡಳಿತ ಪಕ್ಷ ಟಿಆರ್‌ಎಸ್ ನೇತೃತ್ವದ ತೆಲಂಗಾಣ ಸರ್ಕಾರ ಇದನ್ನು ‘ರಾಷ್ಟ್ರೀಯ ಏಕೀಕರಣ ದಿನ’ ಎಂದು ಕರೆಯುತ್ತಿದೆ. ವಿಶೇಷವೆಂದರೆ ಇಂದು ರಾಜ್ಯದಲ್ಲಿ ಎರಡು ಪ್ರತ್ಯೇಕ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಒಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮತ್ತೊಂದರಲ್ಲಿ ಮುಖ್ಯಮಂತ್ರಿ ಕೆಸಿಆರ್ ಭಾಗಿಯಾಗಿದ್ದಾರೆ. ಸಿಕಂದರಾಬಾದ್​​ನಿಂದ ಕೇವಲ 7 ಕಿಲೋ ಮೀಟರ್ ದೂರದ ನಾಂಪಲ್ಲಿಯಲ್ಲಿ ಕೆ. ಚಂದ್ರಶೇಖರ್ ರಾವ್​​ ರಾಷ್ಟ್ರೀಯ ಏಕೀಕರಣ ದಿನ ಆಚರಣೆ ಮಾಡ್ತಿದ್ದಾರೆ.

ಮುಂದಿನ ಕೆಲ ತಿಂಗಳಲ್ಲಿ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕೇಂದ್ರ ಬಿಜೆಪಿ ಸರ್ಕಾರ ರಚನೆ ಮಾಡುವ ಕಸರತ್ತು ನಡೆಸುತ್ತಿದೆ. ಇನ್ನು, ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಕೆಸಿಆರ್​​ ವಿವಿಧ ಪಕ್ಷಗಳ ನಾಯಕರನ್ನು ಒಂದುಗೂಡಿಸುವ ಕೆಲಸ ಮಾಡ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.