ETV Bharat / bharat

ಕೇರಳದಲ್ಲಿ ಶೇ. 58ರಷ್ಟು COVID​ ಕೇಸ್​.. ಏರಿಕೆಯತ್ತ ಮುಖ ಮಾಡಿದ ಮಹಾಮಾರಿ ಕೊರೊನಾ! - ರಾಜೇಶ್ ಭೂಷಣ್​

ಹಬ್ಬಗಳ ಸಂದರ್ಭದಲ್ಲಿ ಕೊರೊನಾ ಮಾರ್ಗಸೂಚಿ ಪಾಲನೆ ಮಾಡದ ಕಾರಣದಿಂದಾಗಿ ದೇಶದಲ್ಲಿ ಸೋಂಕಿತ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Rajesh Bhushan
Rajesh Bhushan
author img

By

Published : Aug 26, 2021, 5:15 PM IST

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದ್ದು, ಕೇರಳದಲ್ಲಿ ಶೇ. 58ರಷ್ಟು ಕೋವಿಡ್​ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್​ ತಿಳಿಸಿದ್ದಾರೆ.

  • 46,000 new cases were reported in the country in the last 24 hours. 58% of these cases were reported from Kerala. Rest of the states are still showing a declining trend: Union Health Secretary Rajesh Bhushan#COVID19 pic.twitter.com/p9FEIkFPD3

    — ANI (@ANI) August 26, 2021 " class="align-text-top noRightClick twitterSection" data=" ">

ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 46,000 ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಕೇರಳದಲ್ಲೇ ಅತಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ ಎಂದರು. ಸದ್ಯ ಕೇರಳದಲ್ಲಿ 1 ಲಕ್ಷಕ್ಕೂ ಅಧಿಕ ಆ್ಯಕ್ಟೀವ್ ಕೇಸ್​ಗಳಿದ್ದು, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ 10 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದರು. ಉಳಿದಂತೆ ಕೆಲವೊಂದು ರಾಜ್ಯಗಳಲ್ಲಿ ಶೇ. 4-5ರಷ್ಟು ಸೋಂಕಿತ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ ಎಂಬ ಮಾಹಿತಿ ನೀಡಿದರು.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 80 ಲಕ್ಷ ಜನರಿಗೆ ಕೋವಿಡ್​ ವ್ಯಾಕ್ಸಿನೇಷನ್​ ನೀಡಲಾಗಿದ್ದು, ಇಂದು ಕೂಡ 47 ಲಕ್ಷ ಡೋಸ್​ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

  • Kerala has more than 1 lakh active cases. Maharashtra, Karnataka, Tamil Nadu & Andhra Pradesh have 10,000 to 1 lakh active cases. Kerala contributes to 51%, Maharastra 16% & rest of the three states contribute to 4-5% of the cases in the country: Union Health Secy Rajesh Bhushan pic.twitter.com/Win7HludCb

ಇದನ್ನೂ ಓದಿರಿ: ವರದಕ್ಷಿಣೆ ಭೂತ: ಪತ್ನಿ ಹಾಗೂ ಆರು ತಿಂಗಳ ಮಗು ಕೊಲೆ ಮಾಡಿದ ಪಾಪಿ ಗಂಡ

ದೇಶದಲ್ಲಿ ಎರಡನೇ ಕೋವಿಡ್ ಅಲೆ ಮುಗಿದಿಲ್ಲ. ಹಬ್ಬಗಳು ಮುಕ್ತಾಯಗೊಂಡ ಬಳಿಕ ಸೋಂಕಿತ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿವೆ. ಬರುವ ದಿನಗಳಲ್ಲಿ ಮತ್ತಷ್ಟು ಹಬ್ಬಗಳು ಇರುವ ಕಾರಣ ಎಲ್ಲರೂ ಕೊರೊನಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.