ETV Bharat / bharat

ಉಕ್ರೇನ್​ನಲ್ಲಿ ಪರಿಸ್ಥಿತಿ ಮತ್ತಷ್ಟು ಭೀಕರ.. ನವೀನ್ ಪಾರ್ಥಿವ ಶರೀರ ತರುವ ಬಗ್ಗೆ ರಾಯಭಾರಿ ಕಚೇರಿ ಅಧಿಕಾರಿಗಳು ಹೇಳಿದ್ದೇನು?

Russia-Ukraine War crisis.. ಉಕ್ರೇನ್‌ನಲ್ಲಿ ಸ್ಥಿತಿ ನಿನ್ನೆಗಿಂತಲೂ ಇಂದು ಭೀಕರವಾಗಿದೆ. ನವೀನ್‌ ಪಾರ್ಥಿವ ಶರೀರವನ್ನ ಸ್ಥಳೀಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಅಲ್ಲಿ ಬಹಳ ಕೆಟ್ಟ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಮಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ರಾಯಭಾರಿ ಅಧಿಕಾರಿ ಅಸಹಾಯಕತೆಯನ್ನು ಮೃತನ ಸಂಬಂಧಿಕರಿಗೆ ತಿಳಿಸಿದ್ದಾರೆ.

union government helpless to bring the naveen body from ukraine..!
ಸ್ವದೇಶಕ್ಕೆ ನವೀನ್ ಪಾರ್ಥಿವ ಶರೀರ ತರುವ ಬಗ್ಗೆ ರಾಯಭಾರಿ ಕಚೇರಿ ಅಧಿಕಾರಿಗಳು ಮೃತನ ಸಂಬಂಧಿಕರಿಗೆ ಹೇಳಿದ್ದೇನು?
author img

By

Published : Mar 2, 2022, 12:42 PM IST

Updated : Mar 2, 2022, 1:41 PM IST

ನವದೆಹಲಿ: ಉಕ್ರೇನ್‌ನ 2ನೇ ದೊಡ್ಡ ನಗರ ಖಾರ್ಕೀವ್‌ನಲ್ಲಿ ನಿನ್ನೆ ರಷ್ಯಾದ ದಾಳಿಗೆ ಬಲಿಯಾದ ಹಾವೇರಿ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್‌ ಎಸ್‌.ಜಿ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ವಾಪಸ್‌ ತರುವುದಕ್ಕೆ ಕೇಂದ್ರ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಸಿಗುತ್ತಿಲ್ಲ.

ಉಕ್ರೇನ್​ನಲ್ಲಿ ಪರಿಸ್ಥಿತಿ ಮತ್ತಷ್ಟು ಭೀಕರ.. ನವೀನ್ ಪಾರ್ಥಿವ ಶರೀರ ತರುವ ಬಗ್ಗೆ ರಾಯಭಾರಿ ಕಚೇರಿ ಅಧಿಕಾರಿಗಳು ಹೇಳಿದ್ದೇನು?

ಮೃತ ನವೀನ್ ಸಹೋದರನಿಗೆ ಫೋನ್ ಮಾಡಿ ಉಕ್ರೇನ್‌ನಲ್ಲಿರುವ ಸದ್ಯದ ಪರಿಸ್ಥಿತಿ ಬಗ್ಗೆ ರಾಯಭಾರಿ ಕಚೇರಿ ಅಧಿಕಾರಿಗಳು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ರಾಯಭಾರಿ ಕಚೇರಿಯ ಜಂಟಿ ಆಯುಕ್ತ ನಿಮೇಶ್‌ ಭಾರೋಟ್‌ ಅವರು, ನವೀನ್ ಪಾರ್ಥಿವ ಶರೀರವನ್ನ ತರಲು ನಾವು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದೇವೆ. ಆದ್ರೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಅಲ್ಲಿನ ಸ್ಥಿತಿ ನಿನ್ನೆಗಿಂತಲೂ ಇಂದು ಭೀಕರವಾಗಿದೆ. ಈಗ ಪಾರ್ಥಿವ ಶರೀರವನ್ನ ಸ್ಥಳೀಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಅಲ್ಲಿ ಬಹಳ ಕೆಟ್ಟ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಮಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ರಾಯಭಾರಿ ಅಧಿಕಾರಿ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

ಪಾರ್ಥಿವ ಶರೀರ ತರುವ ಪ್ರಯತ್ನದ ಭರವಸೆ.. ಮೃತ ನವೀನ್‌ ಸಹೋದರ ಹರ್ಷ ಮಾತನಾಡಿ, ರಾಯಭಾರಿ ಕಚೇರಿ ಜೊತೆಗೆ ಸಂಪರ್ಕದಲ್ಲಿದ್ದೇವೆ. ಅಲ್ಲಿ ಹೆಚ್ಚೆಚ್ಚು ಫೈರಿಂಗ್ ಆಗುತ್ತಿದೆ, ಪಾರ್ಥಿವ ಶರೀರ ತರುವ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಅಪ್ಪ,‌ ಅಮ್ಮ ಮತ್ತು ಕುಟುಂಬದವರು ನವೀನ ಪಾರ್ಥಿವ ಶರೀರ ನೋಡಬೇಕು ಅಂತಿದ್ದಾರೆ. ಕೇಂದ್ರ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ಪಾರ್ಥಿವ ಶರೀರವನ್ನ ತರಿಸಬೇಕು ಎಂದು ಒತ್ತಾಯಿಸಿರುವ ಹರ್ಷ, ನಿನ್ನೆ ಬೆಳಗ್ಗೆ ಅಮ್ಮ ಮತ್ತು ನಾನು ಅರ್ಧ ಗಂಟೆವರೆಗೂ ನವೀನ್​ ಜೊತೆ ಮಾತನಾಡಿದ್ದೆವು ಎಂದು ತಿಳಿಸಿದರು.

ಇದನ್ನೂ ಓದಿ: ಉಕ್ರೇನ್​ನಲ್ಲಿ ರಷ್ಯಾ ದಾಳಿ ವೇಳೆ ಮೃತಪಟ್ಟ ಹಾವೇರಿಯ ಯುವಕನ ಮೃತದೇಹ ಪತ್ತೆ

Last Updated : Mar 2, 2022, 1:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.