ETV Bharat / bharat

ಕೇಂದ್ರ ಸಚಿವ ಸಂಪುಟ ಸಭೆ ವಿಸ್ತರಣೆ ; ಹೊಸ ಮುಖಗಳನ್ನು ಸೇರಿಸಿಕೊಳ್ಳುವ ಸಾಧ್ಯತೆ

ಈಟಿವಿ ಭಾರತ್ ಮಂತ್ರಿಗಳ ರೇಸ್​​ನಲ್ಲಿರುವ 26 ಹೆಸರುಗಳನ್ನು ಪಟ್ಟಿ ಮಾಡಿದೆ. ಜ್ಯೋತಿರಾದಿತ್ಯ ಸಿಂಧಿಯಾ, ವರುಣ್ ಗಾಂಧಿ, ಕೈಲಾಶ್ ವಿಜಯವರ್ಗಿಯಾ, ದಿನೇಶ್ ತ್ರಿವೇದಿ, ಸರ್ಬಾನಂದ ಸೋನೊವಾಲ್ ಮತ್ತು ಪಶುಪತಿ ಪರಾಸ್ ಸಹ ಈ ಪಟ್ಟಿಯಲ್ಲಿ ಸೇರಿದ್ದಾರೆ..

modi
modi
author img

By

Published : Jun 19, 2021, 3:16 PM IST

ನವದೆಹಲಿ : ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಉನ್ನತ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಎರಡು ಮಹತ್ವದ ಸಭೆಗಳನ್ನು ನಡೆಸಿದ ನಂತರ ಕೇಂದ್ರ ಸಚಿವ ಸಂಪುಟದ ವಿಸ್ತರಣೆಯ ಕುರಿತ ಊಹಾಪೋಹಗಳು ಹರಿದಾಡತೊಡಗಿದವು. ಲೋಕ್​ ಜನಶಕ್ತಿ ಪಕ್ಷದ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಮತ್ತು ಕರ್ನಾಟಕ ಬಿಜೆಪಿ ನಾಯಕ ಸುರೇಶ್ ಅಂಗಡಿ ಅವರ ನಿಧನರಾದ ಹಿನ್ನೆಲೆ ತೆರವಾದ ಸ್ಥಾನಗಳಿಗೆ ಹೊಸಬರನ್ನು ಆಯ್ಕೆ ಮಾಡಬೇಕಾದ್ದರಿಂದ ಕ್ಯಾಬಿನೆಟ್ ವಿಸ್ತರಣೆಯ ಅಗತ್ಯವು ಹುಟ್ಟಿಕೊಂಡಿತು.

ಎನ್‌ಡಿಎ ಮೈತ್ರಿಕೂಟದಿಂದ ಶಿರೋಮಣಿ ಅಕಾಲಿ ದಳ ಮತ್ತು ಶಿವಸೇನೆ ಪ್ರತಿನಿಧಿಗಳು ಖಾಲಿ ಮಾಡಿದ ಸ್ಥಾನಗಳಿಗೆ ಇಬ್ಬರು ಮಂತ್ರಿಗಳನ್ನು ಸಹ ನೇಮಕ ಮಾಡಿಕೊಳ್ಳಬೇಕಿದೆ. ಈಗಿರುವ ಅನೇಕ ಮಂತ್ರಿಗಳು ವಿವಿಧ ಖಾತೆಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಕೆಲವು ಹೊಸ ಮಂತ್ರಿಗಳ ಪಾಲಾಗಲಿವೆ. ಕೈಗಾರಿಕೆ ಮತ್ತು ವಾಣಿಜ್ಯ, ಕಾನೂನು, ಕೃಷಿ, ಹೆಚ್‌ಆರ್‌ಡಿ, ನಾಗರಿಕ ವಿಮಾನಯಾನ, ಉಕ್ಕು ಮತ್ತು ಆಹಾರ ಸಂಸ್ಕರಣೆ ಸೇರಿವೆ. ಮಾಧ್ಯಮ ವರದಿಗಳ ಪ್ರಕಾರ, ಕಾರ್ಯನಿರ್ವಹಿಸದ ಮಂತ್ರಿಗಳನ್ನು ಕ್ಯಾಬಿನೆಟ್‌ನಿಂದ ಕೈಬಿಡಬಹುದು ಮತ್ತು ಕೆಲವು ಹೊಸ ಮುಖಗಳನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದೆ.

ಈಟಿವಿ ಭಾರತ್ ಮಂತ್ರಿಗಳ ರೇಸ್​​ನಲ್ಲಿರುವ 26 ಹೆಸರುಗಳನ್ನು ಪಟ್ಟಿ ಮಾಡಿದೆ. ಜ್ಯೋತಿರಾದಿತ್ಯ ಸಿಂಧಿಯಾ, ವರುಣ್ ಗಾಂಧಿ, ಕೈಲಾಶ್ ವಿಜಯವರ್ಗಿಯಾ, ದಿನೇಶ್ ತ್ರಿವೇದಿ, ಸರ್ಬಾನಂದ ಸೋನೊವಾಲ್ ಮತ್ತು ಪಶುಪತಿ ಪರಾಸ್ ಸಹ ಈ ಪಟ್ಟಿಯಲ್ಲಿ ಸೇರಿದ್ದಾರೆ.

ಜ್ಯೋತಿರಾದಿತ್ಯ ಸಿಂಧಿಯಾ : ಕೇಂದ್ರದ ಮಾಜಿ ಸಚಿವ ಸಿಂಧಿಯಾ ಅವರು, ಮಾರ್ಚ್ 2020ರಲ್ಲಿ ಬಿಜೆಪಿಗೆ ಸೇರಲು ಕಾಂಗ್ರೆಸ್​ ತೊರೆದರು. ಅವರ ಪಕ್ಷಾಂತರವು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಪತನಕ್ಕೂ ಕಾರಣವಾಗಿತ್ತು.

ವರುಣ್ ಗಾಂಧಿ : ಮನೇಕಾ ಗಾಂಧಿ ಮತ್ತು ದಿವಂಗತ ಸಂಜಯ್ ಗಾಂಧಿ ಅವರ ಪುತ್ರ. ಮೂರು ಬಾರಿ ಲೋಕಸಭಾ ಸಂಸದರಾಗಿದ್ದಾರೆ. ಅವರು ನೆಹರೂ-ಗಾಂಧಿ ಕುಟುಂಬದಿಂದ ಬಂದವರು, ಔಪಚಾರಿಕವಾಗಿ 2004ರಲ್ಲಿ ಬಿಜೆಪಿಗೆ ಸೇರಿದರು.

ಕೈಲಾಶ್ ವಿಜಯವರ್ಗಿಯಾ : ವಿಧಾನಸಭಾ ಚುನಾವಣೆಯಲ್ಲಿ ಎಂದಿಗೂ ಸೋಲು ಕಾಣದೇ ಆರು ಬಾರಿ ಶಾಸಕರಾದವರು. ಪ್ರಸ್ತುತ ಕೈಲಾಶ್ ಪಶ್ಚಿಮ ಬಂಗಾಳದ ಬಿಜೆಪಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ದಿನೇಶ್ ತ್ರಿವೇದಿ : ತೃಣಮೂಲ ಕಾಂಗ್ರೆಸ್‌ನ ಮಾಜಿ ಮುಖಂಡ ಮತ್ತು ಕೇಂದ್ರ ಸಚಿವ ದಿನೇಶ್ ತ್ರಿವೇದಿ ಮಾರ್ಚ್‌ನಲ್ಲಿ ಬಿಜೆಪಿ ಸೇರಿದರು. ತ್ರಿವೇದಿ 2016-2017ರ ಅವಧಿಯ ಅತ್ಯುತ್ತಮ ಸಂಸದೀಯ ಪ್ರಶಸ್ತಿಗೆ ಭಾಜನರಾಗಿದ್ದರು.

ಸರ್ಬಾನಂದ ಸೋನೊವಾಲ್ : ಇವರು 2016ರಲ್ಲಿ ಅಸ್ಸೋಂ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ 2014 ರಿಂದ 2016ರವರೆಗೆ ಕ್ರೀಡಾ ಮತ್ತು ಯುವ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಪಶುಪತಿ ಪರಾಸ್ : LJP ನಾಯಕ, ಹಾಜಿಪುರದ ಲೋಕಸಭಾ ಸದಸ್ಯ. ಅವರು ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಕಿರಿಯ ಸಹೋದರ. ಚಿರಾಗ್ ಪಾಸ್ವಾನ್ ಬದಲಿಗೆ ಲೋಕ ಜನಶಕ್ತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಪರಾಸ್ ಇತ್ತೀಚೆಗೆ ಆಯ್ಕೆಯಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.