ನವದೆಹಲಿ: 2017ರಿಂದಲೂ ಸಾಮಾನ್ಯ ಬಜೆಟ್ನಲ್ಲಿ ರೈಲ್ವೆ ಬಜೆಟ್ ಕೂಡ ಮಂಡನೆಯಾಗ್ತಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿರುವ 2022-23ನೇ ಸಾಲಿನ ಆಯವ್ಯಯದಲ್ಲಿ ರೈಲ್ವೆ ಇಲಾಖೆಗೆ ಅನೇಕ ಯೋಜನೆ ಘೋಷಣೆ ಮಾಡಿದ್ದಾರೆ.
- 2022-23ನೇ ಕೇಂದ್ರ ಬಜೆಟ್ನಲ್ಲಿ ರೈಲ್ವೆ ಇಲಾಖೆಗೆ 1.4 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿದ್ದು, ರೈಲ್ವೆಯ ಸುರಕ್ಷತೆ ಮತ್ತು ಸಾಮರ್ಥ್ಯ ವರ್ಧನೆಗಾಗಿ 2 ಸಾವಿರ ರೈಲು ಜಾಲವನ್ನು ಸ್ಥಳೀಯ ವಿಶ್ವ ದರ್ಜೆಯ ತಂತ್ರಜ್ಞಾನ ಕವಚ್ ಅಡಿಯಲ್ಲಿ ತರಲು ನಿರ್ಧಾರ
ಇದನ್ನೂ ಓದಿರಿ: ಕೇಂದ್ರ ಬಜೆಟ್-2022 : ಜನಸಾಮಾನ್ಯರಿಗೆ ಸಿಕ್ಕಿದ್ದೇನು?
- ಪ್ರಮುಖವಾಗಿ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ 400 ವಂದೇ ಭಾರತ್ ಅತ್ಯಾಧುನಿಕ ರೈಲುಗಳ ಘೋಷಣೆ ಮಾಡಲಾಗಿದ್ದು ಜೊತೆಗೆ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ 100 ಕಾರ್ಗೋ ಟರ್ಮಿನಲ್ಸ್ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.
- ಭಾರತೀಯ ರೈಲ್ವೆ ಇಲಾಖೆ ಮತ್ತಷ್ಟು ಆಧುನೀಕರಣಗೊಳಿಸಲು ನಿರ್ಧರಿಸಲಾಗಿದ್ದು, 7 ಸಾವಿರ ಕಿಲೋ ಮೀಟರ್ ರೈಲ್ವೆ ಟ್ರ್ಯಾಕ್ ವಿದ್ಯುದ್ದೀಕರಣ ಮಾಡಲು ಬಜೆಟ್ನಲ್ಲಿ ಪ್ರಸ್ತಾಪ, ಇದಕ್ಕಾಗಿ 10 ಸಾವಿರ ಕೋಟಿ ರೂ. ಮೀಸಲು.
- ಬ್ರಾಡ್ ಗೇಜ್ ರೈಲ್ವೆ ಹಳಿಗಳನ್ನ ವಿದ್ಯುದ್ದೀಕರಣಗೊಳಿಸುವ ಯೋಜನೆಗೆ 7,452 ಕೋಟಿ ರೂಪಾಯಿ ಘೋಷಣೆ
- 2030ರೊಳಗೆ ಭಾರತೀಯ ರೈಲ್ವೆ ಇಲಾಖೆಯನ್ನ ಸಂಪೂರ್ಣವಾಗಿ ಹಸಿರು ರೈಲ್ವೆ ವ್ಯವಸ್ಥೆ ಮಾಡಲು ನಿರ್ಧಾರ
- ಒಂದು ಜಿಲ್ಲೆ ಒಂದು ಉತ್ಪನ್ನ ಮಾದರಿಯಲ್ಲೇ 'ಒನ್ ಮಾದರಿ ಒಂದು ರೈಲು ನಿಲ್ದಾಣ' ಪರಿಕಲ್ಪನೆ ಘೋಷಣೆ
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ