ನವದೆಹಲಿ: ಕೇಂದ್ರ ಸರ್ಕಾರ ಇಂದು ಮಂಡಿಸುತ್ತಿರುವ ಆಯವ್ಯಯದಲ್ಲಿ ಕೃಷಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ದೇಶದ ಕೃಷಿ ಮತ್ತು ರೈತರ ಅಭಿವೃದ್ಧಿಗಾಗಿ ₹75 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಿಸಿದೆ.
43.36 ಲಕ್ಷ ಫಲಾನುಭವಿಗಳು ಇದರ ಉಪಯೋಗ ಪಡೆದುಕೊಳ್ಳಲಿದ್ದಾರೆ. ಅಲ್ಲದೆ, ಕನಿಷ್ಠ ಬೆಂಬಲ ಬೆಲೆ ನಿಲ್ಲಿಸಿಲ್ಲ, ಖರೀದಿ ಪ್ರಕ್ರಿಯೆ ಮುಂದುವರಿದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ಪ್ರಮುಖ ಅಂಶಗಳು
- ಕನಿಷ್ಠ ಬೆಂಬಲ ಬೆಲೆ ನೀತಿಯಲ್ಲಿ ಈ ಬಾರಿ ಗಮನಾರ್ಹ ಬದಲಾವಣೆಯಾಗಿದ್ದು, ಬೆಳೆ ಉತ್ಪಾದನಾ ವೆಚ್ಚದ ಶೇ.150ರಷ್ಟಕ್ಕೆ ಹೆಚ್ಚಿಸಲಾಗಿದೆ.
- ಕೃಷಿಗೆ 2013ರ ಸಾಲಿನ ಬಜೆಟ್ನಲ್ಲಿ ₹33,874 ಕೋಟಿ ಅನುದಾನ, 2019-20ರಲ್ಲಿ 62,802 ಕೋಟಿ ಅನುದಾನ ನೀಡಲಾಗಿತ್ತು. ಈ ಬಾರಿ ಕೃಷಿಯ ಸಮಗ್ರ ಬದಲಾವಣೆಗೆ ಹೆಚ್ಚು ಒತ್ತು ಕೊಟ್ಟಿರುವ ಕೇಂದ್ರ, ಈ ಹಿಂದಿಗಿಂತಲೂ ಹೆಚ್ಚು (75,060 ಕೋಟಿ) ಅನುದಾನ ಘೋಷಿಸುವ ಮೂಲಕ ಸಂಕಷ್ಟದಲ್ಲಿದ್ದ ರೈತರ ನೆರವಿಗೆ ಮುಂದಾಗಿದೆ.
- 2019-20ರ ಬಜೆಟ್ನಲ್ಲಿ 35.57 ಲಕ್ಷ ರೈತ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದರು. ಈ ಬಾರಿ ಫಲಾನುಭವಿಗಳ ಸಂಖ್ಯೆಯಲ್ಲೂ ಹೆಚ್ಚಾಗಿದ್ದು, 43.36 ರೈತರು ಈ ಅನುದಾನದ ಸದುಪಯೋಗಕ್ಕೆ ಒಳಗಾಗಿದ್ದಾರೆ.
ಕೃಷಿ ಸಾಲ ಗುರಿ ₹16.5 ಲಕ್ಷ ಕೋಟಿಗೆ ಹೆಚ್ಚಳ: ಸಚಿವೆ
ಕೃಷಿ ಸಾಲದ ಗುರಿಯನ್ನು ₹16.5 ಲಕ್ಷ ಕೋಟಿಗೆ ಹೆಚ್ಚಿಸಲು ಬಜೆಟ್ ಮಂಡನೆಯ ಸಂದರ್ಭದಲ್ಲಿ ಹಣಕಾಸು ಸಚಿವೆ ಸೀತಾರಾಮನ್ ಅವರು ಪ್ರಸ್ತಾಪಿಸಿದರು. ಕನಿಷ್ಠ ಬೆಂಬಲ ಬೆಲೆ ನೀತಿಯು ಎಲ್ಲಾ ಸರುಕುಗಳ ಉತ್ಪದನಾ ವೆಚ್ಚಕ್ಕಿಂತ ಕನಿಷ್ಠ ಶೇ.1.5 ಪಟ್ಟು ಬೆಲೆಯಲ್ಲಿ ಬದಲಾವಣೆ ತರಲು ಮುಂದಾಗಿದೆ. ಅಲ್ಲದೆ, ಭತ್ತ ಬೆಳೆಯುವ ರೈತರಿಗೆ 2020-21ರಲ್ಲಿ ₹1.72 ಲಕ್ಷ ಕೋಟಿ ಪಾವತಿಸಲಾಗಿದೆ ಎಂದು ಈ ವೇಳೆ ಹೇಳಿದರು.