ETV Bharat / bharat

Union Budget 2023: ಹಲವರಿಗೆ ಸಿಹಿ, ಕೆಲವರಿಗೆ ಕಹಿ.. ಯಾವುದು ಅಗ್ಗ? ಯಾವುದು ದುಬಾರಿ? ಇಂದಿನ ಬಜೆಟ್​ನ ಪ್ರಮುಖ ಅಂಶ - ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಷಣ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್​ ಇಂದು ಬಜೆಟ್​ ಮಂಡನೆ ಮಾಡಿದ್ದು ಹಲವರಿಗೆ ಸಿಹಿ ನೀಡಿದರೆ ಕೆಲವರಿಗೆ ಕಹಿ ನೀಡಿದ್ದಾರೆ.

Union Budget 2023
Union Budget 2023
author img

By

Published : Feb 1, 2023, 12:37 PM IST

Updated : Feb 1, 2023, 1:44 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವಧಿಯ ಕೊನೆಯ ಹಾಗೂ 2023ನೇ ಸಾಲಿನ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್​ ಅವರು ಇಂದು ಮಂಡನೆ ಮಾಡಿದ್ದಾರೆ. ಅವರು ಮಂಡಿಸಿದ 6ನೇ ಬಜೆಟ್​ ಇದಾಗಿದ್ದು ಹಲವರಿಗೆ ಸಿಹಿ ಸುದ್ದಿ ನೀಡಿದರೆ ಕೆಲವರಿಗೆ ಕಹಿ ಸುದ್ದಿ ನೀಡಿದ್ದಾರೆ. ಬಹುತೇಕ ಐಷಾರಾಮಿ ವಸ್ತುಗಳ ದರ ಏರಿಕೆ ಮಾಡುವ ಮೂಲಕ ಕೆಲವರಿಗೆ ಶಾಕ್​ ನೀಡಿದ್ದಾರೆ. ಪ್ರತಿಯಾಗಿ ಕೆಲವು ದಿನ ಬಳಕೆ ವಸ್ತುಗಳ ಬೆಲೆ ಕಡಿಮೆ ಮಾಡುವ ಮೂಲಕ ಹಲವರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಧಾರವಾಡ ಕಸೂತಿ ಕಲೆಯಿರುವ ಸೀರೆಯುಟ್ಟು ಕೇಂದ್ರ ಬಜೆಟ್ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್

2070ರ ವೇಳೆಗೆ ಹೊಗೆ ಮುಕ್ತ ಭಾರತ ನಿರ್ಮಾಣ ಗುರಿ ಹೊಂದುವ ನಿರೀಕ್ಷೆ ಇದೆ ಎಂದು ನಿರ್ಮಲಾ ಸೀತರಾಮನ್ ತಮ್ಮ ಬಜೆಟಟ್​​ನಲ್ಲಿ ತಿಳಿಸಿದ್ದಾರೆ. ಆದರೆ, ಬಂಗಾರ, ಬೆಳ್ಳಿ, ವಜ್ರ, ಪ್ಲಾಟಿನಮ್​ ದರ ಏರಿಕೆ ಮಾಡಿ ಮಹಿಳೆಯರಿಗೆ ಶಾಕ್​ ನೀಡಿದ್ದಾರೆ. ಇತ್ತ ಬಟ್ಟೆ ಹಾಗೂ ಸಿಗರೇಟ್ ಮೇಲಿನ ತೆರಿಗೆಯನ್ನು ಏರಿಕೆ ಮಾಡುವ ಮೂಲಕ ಧೂಮಪಾನ ಮಾಡುವವರಿಗೂ​ ಕೂಡ ಶಾಕ್​ ನೀಡಿದ್ದಾರೆ. ಆದರೆ, ಗೃಹ ಬಳಕೆವಸ್ತುಗಳ ಮೇಲಿನ ತೆರಿಗೆ ಕಡಿತ ಮಾಡಿ ಸಾಮಾನ್ಯ ಜನರನ್ನು ಖುಷಿಗೊಳಿಸುವ ಕೆಲಸ ಮಾಡಿದ್ದಾರೆ.

Union Budget 2023
ಬಜೆಟ್​ ಪ್ರತಿ

ಯಾವುದೆಲ್ಲಾ ದರ ಏರಿಕೆ: ಸಿಗರೇಟ್ ಮೇಲಿನ ತೆರಿಗೆ ಶೇ. 16ರಷ್ಟು ಏರಿಕೆ ಮಾಡಲಾಗಿದೆ. ಹಾಗಾಗಿ ಪ್ರತಿ ಸಿಗರೇಟ್ ದರ ಶೇ. 1 ರಿಂದ 2 ರಷ್ಟು ಏರಿಕೆ ಸಾಧ್ಯತೆ ಇದೆ. ಪ್ಲಾಟಿನಂ, ಬಂಗಾರ, ಬೆಳ್ಳಿ, ವಜ್ರ, ಬೈಸಿಕಲ್‌ಗಳ, ಮಕ್ಕಳ ಆಟದ ಸಾಮಗ್ರಿಗಳು, ಬ್ರಾಂಡೆಡ್​ ಬಟ್ಟೆಗಳು, ತಂಬಾಕು ಉತ್ಪನ್ನ, ಆಮದು ಮಾಡಿಕೊಂಡ ರಬ್ಬರ್, ಹೆಡ್‌ಫೋನ್‌ಗಳು ಮತ್ತು ಇಯರ್‌ಫೋನ್‌ಗಳು, ಛತ್ರಿ, ಸ್ಮಾರ್ಟ್ ಮೀಟರ್, ಸೌರ ಮಾಡ್ಯೂಲ್ಗಳು, ಎಕ್ಸ್-ರೇ ಯಂತ್ರಗಳು, ಎಲೆಕ್ಟ್ರಾನಿಕ್ ಆಟಿಕೆಗಳ ಭಾಗಗಳು ದರ ಏರಿಕೆಯಾಗಲಿದೆ. ವಿದೇಶಿ ವಾಹನಗಳ ಆಮದು ಕೂಡ ದುಬಾರಿಯಾಗಲಿದೆ.

ಯಾವುದೆಲ್ಲಾ ದರ ಇಳಿಕೆ: ಮೊಬೈಲ್ ಫೋನ್ ಕ್ಯಾಮರಾ ಲೆನ್ಸ್ ಆಮದು ಸುಂಕವನ್ನು ರದ್ದು ಮಾಡಲಾಗಿದೆ. ಜೊತೆಗೆ ಮೊಬೈಲ್ ಫೋನ್‌ಗಳ ದರ ಕೂಡ ಇಳಿಕೆ ಮಾಡಲಾಗಿದೆ. ಲೀಥಿಯಂ ಅಯಾನ್ ಬ್ಯಾಟರಿಗಳು ಅಗ್ಗಗೊಳಿಸಲಾಗಿದ್ದು ಕಸ್ಟಮ್ ಡ್ಯೂಟಿ ಶೇ. 13ರಷ್ಟು ಇಳಿಕೆ ಮಾಡಲಾಗಿದೆ. ಮೊಬೈಲ್, ಕ್ಯಾಮರಾ ಲೆನ್ಸ್, ಎಲ್​ಇಡಿ ಟಿವಿ ಬೆಲೆ ಕೂಡ ಇಳಿಕೆಯಾಗಲಿದೆ. ಬ್ಲೆಂಡೆಡ್ ಸಿಎನ್‌ಜಿಗೆ ಸುಂಕ ಕಡಿತಗೊಳಿಸಲಾಗಿದ್ದು ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳ ದರ ಇಳಿಕೆ ಮಾಡಲಾಗಿದೆ. ಎಲೆಕ್ಟ್ರಿಕ್ ವಾಹನಗಳು, ಜೈವಿಕ ಅನಿಲಕ್ಕೆ ಸಂಬಂಧಿಸಿದ ವಸ್ತುಗಳು, ಕೋಕೋ ಬೀಜಗಳು, ಸಂಸ್ಕರಿಸದ ಸಕ್ಕರೆ, ಕಬ್ಬಿಣ, ಮೊಬೈಲ್ ಚಾರ್ಜರ್, ಆಟೋಮೊಬೈಲ್ಸ್ ವಸ್ತುಗಳ ದರದಲ್ಲಿ ಕೂಡ ಇಳಿಕೆ ಕಾಣಲಿದೆ.

ಇದನ್ನೂ ಓದಿ: LIVE.. ಕೇಂದ್ರ ಬಜೆಟ್​: 7 ಲಕ್ಷದವರೆಗೆ ತೆರಿಗೆ ಕಟ್ಟಬೇಕಿಲ್ಲ.. ಕೇಂದ್ರ ಬಂಪರ್​ ಘೋಷಣೆ

Last Updated : Feb 1, 2023, 1:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.