ರಂಗಾರೆಡ್ಡಿ(ತೆಲಂಗಾಣ): ಔಷಧ ಖರೀದಿಸುವ ನೆಪದಲ್ಲಿ ಮೆಡಿಕಲ್ ಶಾಪ್ಗೆ ಬಂದ ಅಪರಿಚಿತರಿಬ್ಬರು ಅಂಗಡಿ ಓನರ್ ಮೇಲೆ ಅಮಾನುಷ ದಾಳಿ ನಡೆಸಿರುವ ಘಟನೆ ರಂಗಾರೆಡ್ಡಿ ಜಿಲ್ಲೆಯ ಮಣಿಕೊಂಡದಲ್ಲಿ ಜರುಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜ್ವರಕ್ಕೆ ಮಾತ್ರೆ ತೆಗೆದುಕೊಳ್ಳಲು ಇಬ್ಬರು ಅಪರಿಚಿತರು ಔಷಧ ಅಂಗಡಿಗೆ ಬಂದಿದ್ದರು. ಮಾತ್ರೆ ಕೋಡುತ್ತಿದ್ದ ವೇಳೆ ಅಂಗಡಿಗೆ ನುಗ್ಗಿದ ಓರ್ವ ವ್ಯಕ್ತಿ ಅಂಗಡಿ ಮಾಲೀಕ ಚಿನ್ನಾರೆಡ್ಡಿ ಎಂಬುವರನ್ನು ಥಳಿಸಿದ್ದಾನೆ. ನಂತರ ಒಳ ಬಂದ ಮತ್ತೋರ್ವನನ್ನು ಸಹ ಹೊಡೆದಿದ್ದಾರೆ.
ಸದ್ಯ ಘಟನೆಗೆ ಸಂಬಂಧಿಸಿ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪರಿಚಿತರು ಯಾರು..? ಯಾವು ಉದ್ದೇಶಕ್ಕಾಗಿ ದಾಳಿ ಮಾಡಿದ್ದಾರೆ? ಎಂದು ತನಿಖೆ ಆರಂಭಿಸಿದ್ದಾರೆ.