ETV Bharat / bharat

ಭಾರತದಲ್ಲಿ 40 ಕೋಟಿ ಜನ ಬಡತನದಿಂದ ಹೊರಕ್ಕೆ: ಯುಎನ್​ಡಿಪಿ ವರದಿ ಆಧರಿಸಿ ಕೇಂದ್ರದ ಹೇಳಿಕೆ

ಸರ್ಕಾರವು ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಮೇಲಕ್ಕೆ ಎತ್ತಲು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರದ ರಾಜ್ಯಖಾತೆ ಸಚಿವ ರಾವ್ ಇಂದ್ರಜಿತ್ ಸಿಂಗ್ ಇಂದು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

undp-report-says-415-mn-people-lifted-out-of-poverty-in-india-govt
ಭಾರತದಲ್ಲಿ 400 ಮಿಲಿಯನ್​ಗಿಂತಲೂ ಹೆಚ್ಚು ಜನ ಬಡತನದಿಂದ ಹೊರಬಂದಿದ್ದಾರೆ: ಯುಎನ್​ಡಿಪಿ ವರದಿ
author img

By

Published : Dec 12, 2022, 6:43 PM IST

ನವದೆಹಲಿ: ದೇಶದಲ್ಲಿ 2005-06 ರಿಂದ 2019-20 ರ ನಡುವೆ ಸುಮಾರು 40 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಯುಎನ್​ಡಿಪಿಯ ಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕ(ಎಂಪಿಐ) 2022ರ ವರದಿ ಉಲ್ಲೇಖಿಸಿ ಸರ್ಕಾರ ರಾಜ್ಯಸಭೆಯಲ್ಲಿ ಈ ಹೇಳಿಕೆ ನೀಡಿದೆ.

ಎನ್​ಐಟಿಐ ಆಯೋಗ ಬಿಡುಗಡೆ ಮಾಡಿದ ಎಂಪಿಐ 2021ರ ಮೂಲ ವರದಿಯ ಪ್ರಕಾರ, ಶೇಕಡಾ. 25.01ರಷ್ಟು ಜನಸಂಖ್ಯೆ ಬಹು ಆಯಾಮದ ಬಡವರು ಎಂದು ಗುರುತಿಸಲಾಗಿದೆ. ಈ ವರದಿಯನ್ನು ಯೋಜನಾ ಸಚಿವಾಲಯದ ಕೇಂದ್ರ ರಾಜ್ಯ ಖಾತೆ ಸಚಿವ ರಾವ್ ಇಂದ್ರಜಿತ್ ಸಿಂಗ್ ರಾಜ್ಯಸಭೆಗೆ ಲಿಖಿತ ರೂಪದಲ್ಲಿ ತಿಳಿಸಿದ್ದಾರೆ.

ಜಾಗತಿಕ ಬಹುಆಯಾಮದ ಬಡತನ ಸೂಚ್ಯಂಕ 2022 ರ ಪ್ರಕಾರ, ಭಾರತದಲ್ಲಿ 2005-06 ರಿಂದ 2019-21 ರ ನಡುವೆ 415 ಮಿಲಿಯನ್ ಅಂದರೆ 41ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಆಕ್ಸ್‌ಫರ್ಡ್ ಪಾವರ್ಟಿ, ಹ್ಯೂಮನ್ ಡೆವಲಪ್‌ಮೆಂಟ್ ಇನಿಶಿಯೇಟಿವ್ (ಒಪಿಎಚ್‌ಐ) ಮತ್ತು ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಮ್ (ಯುಎನ್‌ಡಿಪಿ) ಬಿಡುಗಡೆ ಮಾಡಿದ ವರದಿಯ ಆಧಾರದಲ್ಲಿ ಸಿಂಗ್ ಈ ಹೇಳಿಕೆಯನ್ನು ಸಂಸತ್​​ಗೆ ನೀಡಿದ್ದಾರೆ.

ಎಂಪಿಐ ಡೇಟಾವು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS)-5 ಅನ್ನು ಆಧರಿಸಿದೆ. ಕೊರೊನಾದಿಂದ ಉಂಟಾದ ಹಿನ್ನೆಲೆಯಲ್ಲಿ ಜೂನ್ 17,2019 ರಿಂದ ಏಪ್ರಿಲ್ 30,2021ರವರೆ ಸುಮಾರು 2 ವರ್ಷಗಳ ಕಾಲ ಈ ಸಮೀಕ್ಷೆ ನಡೆಸಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಹು ಆಯಾಮದ ಬಡವರ ಸಂಖ್ಯೆಯ ಶೇಕಡಾವಾರು ಪ್ರಮಾಣವು ಕ್ರಮವಾಗಿ ಶೇ 32.75 ಮತ್ತು ಶೇಕಡಾ 8.81 ರಷ್ಟಿದೆ ಎಂದು ಮಾಹಿತಿ ನೀಡಿದ್ದಾರೆ.

ಸರ್ಕಾರವು ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಮೇಲಕ್ಕೆತ್ತಲು ಹಲವಾರು ಕ್ರಮಗಳನ್ನು ಕೈಗೊಂಡಿದೆ ಮತ್ತು ಬಡತನವನ್ನು ಕಡಿಮೆ ಮಾಡಲು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿವೆ ಎಂದು ಸಚಿವರು ಇದೇ ವೇಳೆ ರಾಜ್ಯಸಭೆಯಲ್ಲಿ ಉತ್ತರ ನೀಡುತ್ತಾ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಬಡತನ ಹೋಗಲಾಡಿಸಲು ಆರ್ಥಿಕ ಚಟುವಟಿಕೆಗಳಲ್ಲಿ ಮಧ್ಯಸ್ಥಿಕೆ ಅಗತ್ಯ : ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.