ETV Bharat / bharat

ಯಾಕೂಬ್ ಮೆನನ್​​ ಸಮಾಧಿಗೆ ಅಲಂಕಾರ: ಟ್ರಸ್ಟ್‌ನ ಸದಸ್ಯನಿಗೆ ಟೈಗರ್ ಮೆನನ್ ಬೆದರಿಕೆ - Kabrastan Trust

ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆನನ್ ಸಮಾಧಿಗೆ ಅಮೃತಶಿಲೆ ಅಳವಡಿಸಿ ದೀಪಾಲಂಕಾರ ಮಾಡಿರುವುದು ವಿವಾದ ಹುಟ್ಟು ಹಾಕಿದೆ.

underworld-don-tiger-memon-threatens-kabrastan-trust-to-memorialize-yakub-memon
ಯಾಕೂಬ್ ಮೆಮನ್ ಸಮಾಧಿಗೆ ಅಲಂಕಾರ: ಟ್ರಸ್ಟ್‌ನ ಸದಸ್ಯನಿಗೆ ಟೈಗರ್ ಮೆಮನ್ ಬೆದರಿಕೆ
author img

By

Published : Sep 9, 2022, 3:12 PM IST

ಮುಂಬೈ (ಮಹಾರಾಷ್ಟ್ರ) : 1993ರ ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆನನ್ ಸಮಾಧಿಗೆ ವಿದ್ಯುತ್ ದೀಪಾಲಂಕಾರ ಮಾಡಿ ಶೃಂಗಾರ ಮಾಡಿರುವ ವಿವಾದಕ್ಕೆ ಸಂಬಂಧಿಸಿದ್ದಂತೆ ಭೂಗತ ಪಾತಕಿ ಟೈಗರ್ ಮೆಮನ್ ಕಬ್ರಸ್ತಾನ್ ಟ್ರಸ್ಟ್‌ನ ಸದಸ್ಯರೊಬ್ಬರಿಗೆ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ.

ಮುಂಬೈನ ಬಡಾ ಸ್ಮಶಾನದಲ್ಲಿ ಯಾಕೂಬ್ ಮೆನನ್ ಸಮಾಧಿ ಇದ್ದು, ಇದಕ್ಕೆ ಅಮೃತಶಿಲೆ ಅಳವಡಿಸಿ ದೀಪಾಲಂಕಾರ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೇ, ಇದು ವಿವಾದವನ್ನೂ ಹುಟ್ಟು ಹಾಕಿದೆ. ಇದೀಗ ವಿವಾದವು ಇತ್ಯರ್ಥವಾಗುತ್ತಿರುವಾಗಲೇ ಪಾತಕಿ ಟೈಗರ್ ಮೆನನ್ ಬೆದರಿಕೆ ಹಾಕಿರುವುದಾಗಿ ಗೊತ್ತಾಗಿದೆ.

ಯಾಕೂಬ್ ಮೆನನ್ ಸ್ಮರಣಾರ್ಥ ಕಬ್ರಸ್ತಾನ್ ಟ್ರಸ್ಟ್‌ನ ನ್ವಾಂಗಿ ಎಂಬುವವರಿಗೆ ಭೂಗತ ಪಾತಕಿ ಟೈಗರ್ ಮೆಮನ್ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಟ್ರಸ್ಟ್​ನ ಇತರ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನು, 1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ದೋಷಿಯಾಗಿದ್ದ 2015ರಲ್ಲಿ ಯಾಕೂಬ್ ಮೆನನ್​ನನ್ನು ಗಲ್ಲಿಗೇರಿಸಲಾಗಿತ್ತು. ಯಾಕೂಬ್ ಮೆನನ್ ಹಾಗೂ ಟೈಗರ್ ಮೆನನ್ ಸಹೋದರರಾಗಿದ್ಧಾರೆ.

ಇದನ್ನೂ ಓದಿ: ಮುಂಬೈ ಸ್ಫೋಟ ಅಪರಾಧಿ ಯಾಕೂಬ್ ಮೆಮನ್ ಸಮಾಧಿಗೆ ಶೃಂಗಾರವೇಕೆ?: ಬಿಜೆಪಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.