ಜಮ್ಮು ಮತ್ತು ಕಾಶ್ಮೀರ: ಜಮ್ಮುವಿನ ಜಾನಿಪುರ ಪ್ರದೇಶದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಕಂಡಿದ್ದು, ಅದರಡಿ ಹಲವು ಕಾರ್ಮಿಕರು ಸಿಲುಕಿರುವ ದುರ್ಘಟನೆ ಇಂದು ಸಂಜೆ ನಡೆದಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಎಸ್ಡಿಆರ್ಎಫ್ ತಂಡ ಧಾವಿಸಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ. 2 ಬುಲ್ಡೋಜರ್‌ಗಳು ಕೂಡ ಅವಶೇಷಗಳನ್ನು ತೆರವು ಮಾಡುವ ಕಾರ್ಯದಲ್ಲಿ ತೊಡಗಿವೆ.
ನಿರ್ಮಾಣದ ವೇಳೆ ಇಡೀ ಕಟ್ಟಡ ದಿಢೀರ್ ಕುಸಿತ ಕಂಡಿದೆ. ಇದರಿಂದ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅದರಲ್ಲಿ ಸಿಲುಕೊಂಡಿದ್ದಾರೆ. ಎಷ್ಟು ಕಾರ್ಮಿಕರು ಈ ವೇಳೆ ಅಲ್ಲಿದ್ದರು ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ. ಕಳಪೆ ಕಾಮಗಾರಿಯಿಂದ ಕಟ್ಟಡ ಕುಸಿತ ಕಂಡಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಓದಿ: ಕಿವಿ ಸಮಸ್ಯೆಗೆ ಹೋದವಳು ಕೈ ಕಳೆದುಕೊಂಡಳು: ಜೀವನವೇ ಸರ್ವನಾಶವಾಯಿತಾ ?