ETV Bharat / bharat

ಟಿ-ಶರ್ಟ್ಸ್​​, ಜೀನ್ಸ್​ ಪ್ಯಾಂಟ್​​ ಧರಿಸಿದ್ದೇ ತಪ್ಪಾಯ್ತು... ಬಾಲಕಿಯನ್ನು ಕೊಲೆಗೈದ ಚಿಕ್ಕಪ್ಪ, ಅಜ್ಜ! - ಜೀನ್ಸ್ ಪ್ಯಾಂಟ್ ಹಾಕಿದ್ದಕ್ಕೆ ಕೊಲೆ

ಬಾಲಕಿಯೋರ್ವಳು ಮನೆಯಲ್ಲಿ ಜೀನ್ಸ್​​ ಪ್ಯಾಂಟ್​, ಟಿ-ಶರ್ಟ್ಸ್​ ಧರಿಸಿರುವುದಕ್ಕೆ ಕುಪಿತಗೊಂಡು ಆಕೆಯನ್ನು ಕೊಲೆಗೈದ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

deoria news
deoria news
author img

By

Published : Jul 22, 2021, 8:03 PM IST

ದೇವಾರಿಯಾ(ಉತ್ತರ ಪ್ರದೇಶ): ಟಿ ಶರ್ಟ್​, ಜೀನ್ಸ್​ ಪ್ಯಾಂಟ್​​ ಧರಿಸಿಕೊಂಡಿದ್ದರಿಂದ ಆಕ್ರೋಶಗೊಂಡ ಚಿಕ್ಕಪ್ಪ, ಅಜ್ಜ ಸೇರಿಕೊಂಡು ಬಾಲಕಿಯೋರ್ವಳ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ದೇವಾರಿಯಾದಲ್ಲಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

uncle killed niece in deoria
ಕೊಲೆಯಾಗಿರುವ ಬಾಲಕಿ ಸ್ನೇಹಾ

ಎರಡು ದಿನಗಳ ಹಿಂದೆ ಸೇತುವೆಯೊಂದರ ಕೆಳಗೆ ನೇತು ಹಾಕಿರುವ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿರುವ ಪೊಲೀಸರಿಗೆ ಇದೀಗ ಆಘಾತಕಾರಿ ವಿಚಾರ ಗೊತ್ತಾಗಿದೆ.

ಈ ಬಾಲಕಿ ಮನೆಯಲ್ಲಿ ಜೀನ್ಸ್​ ಪ್ಯಾಂಟ್​​ ,ಟಿ ಶರ್ಟ್​ ಧರಿಸಿದ್ದೇ ಕೊಲೆಗೆ ಕಾರಣ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ತಾಯಿ ದೂರು ದಾಖಲಿಸಿದ್ದು, ಅದರ ಅನ್ವಯ ಆರೋಪಿಗಳಾದ ಚಿಕ್ಕಪ್ಪ ಹಾಗೂ ಅಜ್ಜನನ್ನು ಪೊಲೀಸರು ಬಂಧಿಸಿದ್ದಾರೆ.

ಜೀನ್ಸ್​ ಪ್ಯಾಂಟ್​, ಟಿ-ಶರ್ಟ್​ ಹಾಕಿದ್ದಕ್ಕೆ ಬಾಲಕಿ ಕೊಲೆ

ಪಂಜಾಬ್‌ನ ಲೂಧಿಯಾನ​ದಲ್ಲಿ ಉಳಿದುಕೊಂಡು 16 ವರ್ಷದ ನೇಹಾ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಕೆಲ ದಿನಗಳ ಹಿಂದೆ ಊರಿಗೆ ಆಗಮಿಸಿದ್ದಳು. ಈ ವೇಳೆ ಮನೆಯಲ್ಲಿ ಜೀನ್ಸ್​ ಪ್ಯಾಂಟ್​​ ಹಾಗೂ ಟಿ-ಶರ್ಟ್ಸ್​ ಹಾಕಿಕೊಳ್ಳುತ್ತಿದ್ದಳು. ಇದರಿಂದ ಬಾಲಕಿಯ ಚಿಕ್ಕಪ್ಪ ಹಾಗೂ ಅಜ್ಜ ಅಕ್ರೋಶಗೊಂಡಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಎರಡ್ಮೂರು ಸಲ ಜಗಳ ಸಹ ನಡೆದಿತ್ತು. ಆದರೆ ಬಾಲಕಿ ತನ್ನಿಷ್ಟದ ಬಟ್ಟೆ​ ಹಾಕಿಕೊಳ್ಳುವುದನ್ನು ಮುಂದುವರೆಸಿದ್ದಳು. ಹೀಗಾಗಿ ಕಳೆದ ಮಂಗಳವಾರ ಆಕೆಯ ಮೇಲೆ ಹಲ್ಲೆ ನಡೆಸಿರುವ ಕುಟುಂಬಸ್ಥರು ಬಳಿಕ ಕೊಲೆ ಮಾಡಿದ್ದಾರೆ. ಇದಾದ ಬಳಿಕ ಊರ ಹೊರಗಿನ ರಸ್ತೆ ಕೆಳಗಿನ ಸೇತುವೆ​ಯಲ್ಲಿ ಆಕೆಯ ಶವವನ್ನು ನೇತು ಹಾಕಿದ್ದಾರೆ.

ಈ ಘಟನೆ ಬಗ್ಗೆ ತಾಯಿ ಶಂಕುತಲಾಗೆ ಗೊತ್ತಾಗುತ್ತಿದ್ದಂತೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.