ಕೌಶಂಬಿ (ಉತ್ತರ ಪ್ರದೇಶ) : ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತ ಇಬ್ಬರು ಆರೋಪಿಗಳನ್ನು ಎಸ್‌ಟಿಎಫ್ ವಶಕ್ಕೆ ಪಡೆದಿದೆ. ಈ ವ್ಯಕ್ತಿಗಳು ಅತೀಕ್ ಅಹ್ಮದ್ ಅವರ ಪುತ್ರ ಅಸದ್ ಅಹ್ಮದ್ ಅವರ 'ಶೇರ್-ಇ-ಅತೀಕ್' ವಾಟ್ಸಾಪ್ ಗುಂಪಿನೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಅಸದ್ ಈ ಗ್ರೂಪ್ನ ಅಡ್ಮಿನ್ ಆಗಿದ್ದರು. ಇದರಲ್ಲಿ 14 ಜಿಲ್ಲೆಗಳ 56 ಮಂದಿ ಭಾಗಿಯಾಗಿದ್ದು, ಪರಸ್ಪರ ಸಂದೇಶ ವಿನಿಮಯ ಮಾಡಿಕೊಳ್ಳುತ್ತಿದ್ದರು. ಈ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಾವಳಿಗಳ ನಂತರ ಅತೀಕ್ ಅಹ್ಮದ್ ಪುತ್ರ ಅಸದ್ ಹೆಸರು ಬಯಲಾಗಿದೆ. ಇದಾದ ಬಳಿಕ ಪೊಲೀಸರು ನಿರಂತರ ಕ್ರಮಕೈಗೊಳ್ಳುತ್ತಿದ್ದಾರೆ. ಹತ್ಯಾಕಾಂಡಕ್ಕೂ ಮುನ್ನ ಅಸ್ಸಾದ್ 'ಶೇರ್-ಎ-ಅತಿಕ್' ಹೆಸರಿನ ವಾಟ್ಸ್ಆ್ಯಪ್ ಗ್ರೂಪ್ ಹೊಂದಿದ್ದ ಎಂದು ಹೇಳಲಾಗುತ್ತಿದೆ.
ಉಮೇಶ್ ಪಾಲ್ ಕೊಲೆ ಪ್ರಕರಣಕ್ಕೂ ಮುನ್ನ ಅದನ್ನು ಅಳಿಸಿ ಹಾಕಲಾಗಿತ್ತು. ಆದರೆ, ಎಸ್‌ಟಿಎಫ್ ಅದನ್ನು ಪತ್ತೆ ಮಾಡಿದೆ. ಮೂಲಗಳನ್ನು ನಂಬುವುದಾದರೆ, ಗುಂಪಿನ ಸದಸ್ಯರು ಇದರ ನಂತರ ವಾಟ್ಸ್ಆ್ಯಪ್ ಕರೆ ಮೂಲಕ ಸಂಪರ್ಕದಲ್ಲಿದ್ದಾರೆ. ಇದರಲ್ಲಿ ಪ್ರಯಾಗ್‌ರಾಜ್ ನಿವಾಸಿ ಅಬು ಝೈದ್ ಕೂಡ ಭಾಗಿಯಾಗಿದ್ದ. ಪ್ರಸ್ತುತ, ಅಬು ಜೈದ್ ತನ್ನ ತಾಯಿಯ ಅಜ್ಜನೊಂದಿಗೆ ಕೌಶಂಬಿ ಜಿಲ್ಲೆಯ ಕೊಖ್ರಾಜ್ ಕೊಟ್ವಾಲಿಯ ಸಿಹೋರಿ ಗ್ರಾಮದಲ್ಲಿ ವಾಸಿಸುತ್ತಿದ್ದನು ಎಂಬುದು ತಿಳಿದುಬಂದಿದೆ.
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಹೆಸರು ಬೆಳಕಿಗೆ ಬಂದಿರುವ ಮರಿಯಾದಿಯ ಶೂಟರ್ ಸಾಬೀರ್ ಸಹೋದರನಿಗೆ ರಾಳ ಗ್ರಾಮದ ನಿವಾಸಿ ಅಬು ಝೈದ್ ಮತ್ತು ಖಾದಿರ್ ಆಶ್ರಯ ನೀಡಿದ್ದರು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಪೊಲೀಸ್ ಮುತ್ತಿಗೆಯ ವೇಳೆ ಜಾಕೀರ್ ಓಡಿಹೋಗಿದ್ದಾನೆ. ಇದಾದ ನಂತರ ಅವರು ಹೃದಯಾಘಾತದಿಂದ ನಿಧನರಾದರು. ಪೊಲೀಸರು ಇತ್ತೀಚೆಗೆ ಅವರ ಮೃತ ದೇಹವನ್ನು ಸಾಸಿವೆ ಗದ್ದೆಯಿಂದ ಹೊರತೆಗೆದಿದ್ದರು.
ಈ ಸಂದರ್ಭದಲ್ಲಿ ಕೋಖ್ರಾಜ್ ಪ್ರದೇಶದಲ್ಲಿ ಎಸ್‌ಟಿಎಫ್ ತೀವ್ರ ತಪಾಸಣೆ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದರಲ್ಲಿ ಕೊಖ್ರಾಜ್ ಪೊಲೀಸರೂ ಭಾಗವಹಿಸಿದ್ದರು. ಭಾನುವಾರ ರಾತ್ರಿ, ಸಿಹೋರಿಯಿಂದ ಅಬು ಜೈದ್ ಮತ್ತು ರಾಲಾದಿಂದ ಖಾದಿರ್ ಅವರನ್ನು ಬಂಧಿಸಿದ ನಂತರ ಪೊಲೀಸರು ಪ್ರಯಾಗರಾಜ್‌ಗೆ ತೆರಳಿದರು. ಈ ಕ್ರಮ ನನ್ನ ಅರಿವಿಗೆ ಬಂದಿಲ್ಲ ಎನ್ನುತ್ತಾರೆ ಇನ್ಸ್ಪೆಕ್ಟರ್ ಕೊಖರಾಜ್ ರಮೇಶ್ ಪಟೇಲ್.
ಉಮೇಶ್ ಪಾಲ್ ಮನೆಯಲ್ಲಿ ಪ್ರಾರ್ಥನಾ ಸಭೆ ಆಯೋಜನೆ: ಉಮೇಶ್ ಪಾಲ್ ಹತ್ಯೆಯಾಗಿ 17 ದಿನಗಳ ನಂತರ ಇಂದು ಅವರ ನಿವಾಸದಲ್ಲಿ ಪ್ರಾರ್ಥನಾ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಉಮೇಶ್ ಪಾಲ್ ಅವರ ಸಂಬಂಧಿಕರು ಮತ್ತು ಬೆಂಬಲಿಗರು ಮನೆಗೆ ಆಗಮಿಸಿ ಪುಷ್ಪ ನಮನ ಸಲ್ಲಿಸಿದರು.
ಅತೀಕ್ ಅಹ್ಮದ್ ಕೊಲ್ಲುವವರೆಗೆ ಗಂಡನ ಆತ್ಮಕ್ಕೆ ಶಾಂತಿ ಸಿಗದು: ಈ ವೇಳೆ ಉಮೇಶ್ ಪಾಲ್ ಪತ್ನಿ ಹಾಗೂ ತಾಯಿ ಅತೀಕ್ ಅಹಮದ್ ಹಾಗೂ ಆತನ ಕುಟುಂಬಸ್ಥರಿಗೆ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಅತೀಕ್ ಅಹ್ಮದ್ ಹಾಗೂ ಆತನ ಕುಟುಂಬಸ್ಥರನ್ನು ಕೊಲ್ಲುವವರೆಗೂ ಕುಟುಂಬ ಸುರಕ್ಷಿತವಾಗಿರುವುದಿಲ್ಲ ಎಂದು ಉಮೇಶ್ ಪತ್ನಿ ಜಯಪಾಲ್ ಹಾಗೂ ತಾಯಿ ಶಾಂತಿಪಾಲ್ ಹೇಳಿದ್ದಾರೆ.
ಉಮೇಶ್ ಪಾಲ್ ಕುಟುಂಬಸ್ಥರಲ್ಲಿ ಮನೆ ಮಾಡಿದ ಭಯ: ಉಮೇಶ್ ಪಾಲ್ ಕೊಲೆ ಪ್ರಕರಣದ ಬಳಿಕ ಆತನ ಮನೆಯ ಹೊರಗೆ ಪೊಲೀಸ್ ಪಿಸಿ ಕಾವಲು ಕಾಯುತ್ತಿದ್ದರೂ ಉಮೇಶ್ ಪಾಲ್ ಕುಟುಂಬಸ್ಥರ ಮನದಲ್ಲಿ ಅತೀಕ್ ಅಹಮದ್ ಮತ್ತು ಆತನ ಗ್ಯಾಂಗ್ನ ಭಯ ಮಾತ್ರ ಕಡಿಮೆಯಾಗುತ್ತಿಲ್ಲ. ಪರೀಕ್ಷೆ ಇದ್ದರೂ ಉಮೇಶ್ ಪಾಲ್ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಇದಕ್ಕೆಲ್ಲ ಕಾರಣ ಅತೀಕ್ ಅಹಮದ್ ಅವರಿಂದಲ ಎಲ್ಲಿ ತೊಂದರೆ ಆಗುತ್ತದೋ ಎಂಬ ಭಯ.
ಇದನ್ನೂ ಓದಿ : ಸರ್ಕಾರಿ ಶೌಚಾಲಯದ ಗೋಡೆ ಕುಸಿದು ಐದು ವರ್ಷದ ಬಾಲಕ ಸಾವು