ETV Bharat / bharat

ಕುಸ್ತಿಪಟು ಪಟು ಸಾಗರ್ ರಾಣಾ ಕೊಲೆ ಪ್ರಕರಣ : ಉಕ್ರೇನ್‌ ಮಹಿಳೆ ವಿಚಾರಣೆ

ಯುವ ಕುಸ್ತಿಪಟು ಪಟು ಸಾಗರ್ ರಾಣಾ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪ್ರಕರಣ ಸಂಬಂಧ ಉಕ್ರೇನ್​ ಮಹಿಳೆಯೊಬ್ಬರನ್ನು ವಿಚಾರಣೆ ನಡೆಸಲಾಗ್ತಿದೆ. ಈ ಮಹಿಳೆ ವಿಚಾರಕ್ಕೆ ಸಾಗರ್​​​ ಕೊಲೆ ಆರೋಪಿ ಸುಶೀಲ್​ ಅವರ ಸ್ನೇಹಿತ ಮತ್ತು ಸೋನು ಮಹಲ್ ನಡುವೆ ಜಗಳ ಏರ್ಪಟ್ಟಿತ್ತು ಎಂದು ತನಿಖೆ ವೇಳೆ ತಿಳಿದು ಬಂದಿದೆ..

susheel
susheel
author img

By

Published : Jun 15, 2021, 5:01 PM IST

Updated : Jun 15, 2021, 5:23 PM IST

ನವದೆಹಲಿ : ಕುಸ್ತಿಪಟು ಸಾಗರ್ ರಾಣಾ ಧಂಕರ್ ಕೊಲೆ ಪ್ರಕರಣದಲ್ಲಿ ಪೊಲೀಸರು ಇದೀಗ ಉಕ್ರೇನ್‌ನ ಮಹಿಳೆಯೊಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಮಹಿಳೆ ಸಾಗರ್​ ಕೊಲೆ ಪ್ರಕರಣದ ಪ್ರತ್ಯಕ್ಷದರ್ಶಿ ಸೋನು ಮಹಲ್ ಗೆಳತಿ ಎಂದು ಹೇಳಲಾಗಿದೆ. ಈ ಮಹಿಳೆ ವಿಚಾರವಾಗಿ ಸೋನು ಮಹಲ್ ಮತ್ತು ರೆಸ್ಲರ್​​ ಸುಶೀಲ್ ಅವರ ಸ್ನೇಹಿತ ಅಜಯ್ ನಡುವೆ ಜಗಳ ನಡೆದಿರುವುದು ಪೊಲೀಸರಿಗೆ ತಿಳಿದು ಬಂದಿದೆ.

ಈ ಮಹಿಳೆಯ ಕಾರಣಕ್ಕಾಗಿ ಅವರ ನಡುವಿನ ಜಗಳ ತಾರಕಕ್ಕೆ ತಲುಪಿ ಕುಸ್ತಿಪಟು ಸಾಗರ್ ಹತ್ಯೆಗೆ ಕಾರಣವಾಗಿದೆ ಎನ್ನಲಾಗ್ತಿದೆ. ಈ ಬಗ್ಗೆ ಅಪರಾಧ ಇಲಾಖಾ ಅಧಿಕಾರಿಗಳು ಸೋನು ಮಹಲ್ ಅವರನ್ನು ವಿಚಾರಣೆ ನಡೆಸಲಿದ್ದಾರೆ. ಯುವ ಕ್ರೀಡಾಪಟು ಸಾಗರ್ ರಾಣಾ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ.

ಪ್ರಕರಣ ಸಂಬಂಧ ಉಕ್ರೇನ್​ ಮಹಿಳೆಯೊಬ್ಬರನ್ನು ವಿಚಾರಣೆ ನಡೆಸಲಾಗ್ತಿದೆ. ಈ ಮಹಿಳೆ ವಿಚಾರಕ್ಕೆ ಸಾಗರ್​​​ ಕೊಲೆ ಆರೋಪಿ ಸುಶೀಲ್​ ಅವರ ಸ್ನೇಹಿತ ಮತ್ತು ಸೋನು ಮಹಲ್ ನಡುವೆ ಜಗಳ ಏರ್ಪಟ್ಟಿತ್ತು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಸುಶೀಲ್ ಸಾಗರ್‌ ಫ್ಲ್ಯಾಟ್‌ನ ಏಕೆ ಖಾಲಿ ಮಾಡಿದ್ದಾನೆ ಎಂದು ಅಪರಾಧ ವಿಭಾಗ ತನಿಖೆ ನಡೆಸುತ್ತಿದೆ.

ಸೋನು ಮಹಲ್ ಅವರ ಸ್ನೇಹಿತೆ ಉಕ್ರೇನ್ ಮೂಲದ ಮಹಿಳೆ ಎಂದು ತನಿಖಾಧಿಕಾರಿಗಳಿಗೆ ತಿಳಿದು ಬಂದಿದೆ. ಕೆಲವು ತಿಂಗಳ ಹಿಂದೆ ಈ ಮಹಿಳೆ ವಿಚಾರವಾಗಿ ಸೋನು ಮಹಲ್ ಮತ್ತು ಸುಶೀಲ್ ಕುಮಾರ್​ ಅವರ ಸ್ನೇಹಿತ ಅಜಯ್ ನಡುವೆ ಜಗಳವಾಗಿತ್ತು. ಮಾಡೆಲ್ ಟೌನ್‌ನ ಸಾಗರ್‌ನ ಫ್ಲ್ಯಾಟ್‌ನಲ್ಲಿ ಉಕ್ರೇನ್​ ಮಹಿಳೆ ಅವನನ್ನು ಹಲವಾರು ಬಾರಿ ಭೇಟಿ ಮಾಡುತ್ತಿದ್ದಳು. ಇನ್ನು, ಯಾವುದೋ ಪಾರ್ಟಿಯಲ್ಲಿ ಆಕೆ ಅಜಯ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾಳೆ ಎಂಬ ಕಾರಣಕ್ಕೆ ಅಜಯ್ ಮತ್ತು ಸೋನು ನಡುವೆ ಜಗಳ ಏರ್ಪಟ್ಟಿತ್ತು ಎನ್ನಲಾಗಿದೆ.

ವಿವಾದ ಉಲ್ಬಣಗೊಂಡ ನಂತರ ಫ್ಲ್ಯಾಟ್ ಖಾಲಿ ; ಈ ವಾಗ್ವಾದ ಹಿನ್ನೆಲೆ ಅಜಯ್, ಸುಶೀಲ್‌ರಿಗೆ ಸಾಗರ್​ಗೆ ಪಾಠ ಕಲಿಸುವಂತೆ ಕೇಳಿಕೊಂಡರು. ಈ ವಿವಾದದಿಂದಾಗಿ, ಸುಶೀಲ್ ತನ್ನ ಫ್ಲಾಟ್ ಖಾಲಿ ಮಾಡಿಕೊಂಡನು. ಇದರ ನಂತರ, ಸಾಗರ್ ನಂಗ್ಲೋಯಿಯಲ್ಲಿ ಮಕ್ಕಳಿಗೆ ಕುಸ್ತಿಯನ್ನು ಕಲಿಸುತ್ತಿದ್ದರು. ಆದರೆ, ಕೆಲವು ಮಕ್ಕಳು ಸುಶೀಲ್ ಬಳಿ ಹೋಗಲು ಪ್ರಾರಂಭಿಸಿದ್ದರಿಂದ ಮತ್ತೆ ಜಗಳ ಉಂಟಾಗಿತ್ತು. ಸಾಗರ್​ ರಾಣಾ ಕೊಲೆಗೆ ಇದೂ ಕಾರಣ ಎನ್ನಲಾಗಿದೆ.

ಸೋನು ಮಹಲ್​​ ವಿಚಾರಣೆ : ಸಾಗರ್ ಕೊಲೆ ಪ್ರಕರಣದಲ್ಲಿ ಅಪರಾಧ ವಿಭಾಗದ ಅಧಿಕಾರಿಗಳ ತಂಡ ಮತ್ತೊಮ್ಮೆ ಘಟನೆಯ ಪ್ರತ್ಯಕ್ಷದರ್ಶಿ, ಕುಖ್ಯಾತ ವಂಚಕ ಕಲಾ ಜಥೆಡಿಯ ಸೋದರಳಿಯ ಆಗಿರುವ ಸೋನು ಮಹಲ್ ಅವರನ್ನು ವಿಚಾರಣೆ ನಡೆಸಲಿದೆ. ಸೋಮವಾರ, ಪೊಲೀಸ್ ತಂಡ ಅವರನ್ನು ಶಕಾರ್‌ಪುರದ ಕಚೇರಿಗೆ ವಿಚಾರಣೆಗಾಗಿ ಕರೆಸಿತ್ತು. ಇನ್ನು, ಪ್ರಕರಣ ಸಂಬಂಧ ಉಕ್ರೇನ್ ಮೂಲದ ಮಹಿಳೆ ಬಗ್ಗೆ ಸೋನು ಮಹಲ್ ಅವರಿಂದ ಮಾಹಿತಿ ಸಂಗ್ರಹಿಸಲಾಗುವುದು ಎಂದು ಪೊಲೀಸರು ಹೇಳುತ್ತಾರೆ. ಈ ಕೊಲೆಗೆ ಮಹಿಳೆ ಕೂಡ ಒಂದು ಕಾರಣವೇ ಎಂದು ತಿಳಿಯಬಹುದು.

Last Updated : Jun 15, 2021, 5:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.