ವಿಳ್ಳುಪುರಂ(ತಮಿಳುನಾಡು): ರಷ್ಯಾದ ಪ್ರಾಧ್ಯಾಪಕರೋರ್ವರು ತಮ್ಮ ಪಾಸ್‌ಪೋರ್ಟ್ ಹಾಗೂ ಇತರೆ ದಾಖಲಾತಿಗಳನ್ನು ಕಳೆದುಕೊಂಡಿದ್ದು, ತಮಿಳುನಾಡಿನಲ್ಲೇ ಸಿಲುಕಿಕೊಂಡಿದ್ದಾರೆ. ಶ್ರೀ ಜೆರ್ಸಿ (86) ಅವರು ರಷ್ಯಾ ದೇಶದ ಪ್ರಾಧ್ಯಾಪಕರು. ಅವರು ಅನ್ನಾ ವಿಶ್ವವಿದ್ಯಾನಿಲಯದಲ್ಲಿ 1985 ರಿಂದ 1989ರವರೆಗೆ ರಷ್ಯನ್ ಭಾಷಾ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ. ಹಾಗೆಯೇ, ಆರೋವಿಲ್ಲೆ (ವಿಲ್ಲುಪುರಂ ಮತ್ತು ಪಾಂಡಿಚೇರಿ ನಡುವಿನ ಪ್ರದೇಶ) ಶಾಲೆಯಲ್ಲಿಯೂ ತಮ್ಮ ಸೇವೆ ಸಲ್ಲಿಸಿದ್ದಾರೆ.
ಕಳೆದ ತಿಂಗಳು ಬೆಂಗಳೂರಿಗೆ ಭೇಟಿ ನೀಡಿದ್ದ ಅವರು ಮರಳಿ ಪಾಂಡಿಚೇರಿಗೆ ಹಿಂದಿರುಗುವಾಗ ಪಾಸ್‌ಪೋರ್ಟ್ ಮತ್ತು ಇತರ ದಾಖಲೆಗಳಿದ್ದ ಬ್ಯಾಗ್ ಕಳೆದುಕೊಂಡಿದ್ದಾರೆ. ಈ ಬಗ್ಗೆ ಆರೋವಿಲ್ಲೆ ಮತ್ತು ಕೋಣಂಕುಪ್ಪಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲವಂತೆ.
ಈ ಘಟನೆಯ ನಂತರ ಜರ್ಸಿ ಅವರು ನನಗೆ ನ್ಯಾಯ ಬೇಕು ಎಂಬ ಫಲಕವನ್ನು ಹಿಡಿದು ಕಳೆದ 10 ದಿನಗಳಿಂದ ಕೋಣಂಕುಪ್ಪಂ ಬಳಿಯ ಮುತ್ತು ಮಾರಿಯಮನ್ ದೇವಸ್ಥಾನದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಅವರ ಕಷ್ಟಕ್ಕೆ ಸ್ಪಂದಿಸುವಂತೆ ಗ್ರಾಮಸ್ಥರು ಮನವಿ ಕೂಡ ಮಾಡಿದ್ದಾರೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸಮೀಕ್ಷೆ: ಬಾವಿಯೊಳಗೆ ಶಿವಲಿಂಗ ಪತ್ತೆಯಾಗಿದೆ ಎಂದ ಹಿಂದೂ ವಕೀಲರು!