ನವದೆಹಲಿ: ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಏರ್‌ಲಿಫ್ಟ್ ಮಾಡುವ ಆರಪೇಷನ್ ಗಂಗಾ ಮುಂದುವರೆದಿದ್ದು, 182 ಮಂದಿಯನ್ನು ಹೊತ್ತ 7ನೇ ವಿಮಾನ, 216 ಮಂದಿಯ ಹೊತ್ತ 8ನೇ ವಿಮಾನ ಹಾಗೂ 218 ಮಂದಿಯನ್ನು ಹೊತ್ತ 9ನೇ ವಿಮಾನ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ಮುಂಬೈನತ್ತ ಹೊರಟಿವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಚಿವರು, 'ಆಪರೇಷನ್ ಗಂಗಾ'ದಡಿ ಮೂರು ವಿಮಾನಗಳು ಭಾರತೀಯ ಪ್ರಜೆಗಳನ್ನು ಹೊತ್ತು ನಿನ್ನೆ ಬುಕಾರೆಸ್ಟ್‌ನಿಂದ ಮುಂಬೈಗೆ ಪ್ರಯಾಣವನ್ನು ಪ್ರಾರಂಭಿಸಿವೆ ಎಂದು ಹೇಳಿದ್ದಾರೆ.
-
#OperationGanga advances to its seventh flight.
— Dr. S. Jaishankar (@DrSJaishankar) February 28, 2022 " class="align-text-top noRightClick twitterSection" data="
182 Indian nationals have started the journey to Mumbai from Bucharest. https://t.co/hiS55lifro
">#OperationGanga advances to its seventh flight.
— Dr. S. Jaishankar (@DrSJaishankar) February 28, 2022
182 Indian nationals have started the journey to Mumbai from Bucharest. https://t.co/hiS55lifro#OperationGanga advances to its seventh flight.
— Dr. S. Jaishankar (@DrSJaishankar) February 28, 2022
182 Indian nationals have started the journey to Mumbai from Bucharest. https://t.co/hiS55lifro
ಉಕ್ರೇನ್ ಬಿಕ್ಕಟ್ಟಿನ ಕುರಿತು ಸೋಮವಾರ ಸಂಜೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್‌ನಲ್ಲಿರುವ ಎಲ್ಲಾ ಭಾರತೀಯರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಇಡೀ ಸರ್ಕಾರಿ ಯಂತ್ರವು ಹಗಲಿರುಳು ಶ್ರಮಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
-
We will not rest till our fellow Indians are safe.
— Dr. S. Jaishankar (@DrSJaishankar) February 28, 2022 " class="align-text-top noRightClick twitterSection" data="
Ninth #OperationGanga flight departs Bucharest for New Delhi with 218 Indian nationals. https://t.co/uQzlBMlxi9
">We will not rest till our fellow Indians are safe.
— Dr. S. Jaishankar (@DrSJaishankar) February 28, 2022
Ninth #OperationGanga flight departs Bucharest for New Delhi with 218 Indian nationals. https://t.co/uQzlBMlxi9We will not rest till our fellow Indians are safe.
— Dr. S. Jaishankar (@DrSJaishankar) February 28, 2022
Ninth #OperationGanga flight departs Bucharest for New Delhi with 218 Indian nationals. https://t.co/uQzlBMlxi9
ಉಕ್ರೇನ್ ಪರಿಸ್ಥಿತಿ ಕುರಿತು ನಿನ್ನೆ ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಎರಡನೇ ಉನ್ನತ ಮಟ್ಟದ ಸಭೆ ಇದಾಗಿದೆ. ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ (ನಿವೃತ್ತ) ವಿಕೆ ಸಿಂಗ್ ನೇತೃತ್ವದ ತಂಡಗಳು ಉಕ್ರೇನ್‌ನಲ್ಲಿ ರಷ್ಯಾದ ಸೇನಾ ಕಾರ್ಯಾಚರಣೆಗಳ ಮಧ್ಯೆ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಉಕ್ರೇನ್‌ನ ನೆರೆಯ ದೇಶಗಳಿಗೆ ತೆರಳಲಿದ್ದಾರೆ.
-
Eighth #OperationGanga flight leaves from Budapest for New Delhi with 216 Indian nationals.
— Dr. S. Jaishankar (@DrSJaishankar) February 28, 2022 " class="align-text-top noRightClick twitterSection" data="
Our endeavor for everyone’s safe return continues. https://t.co/aUclKB8MJF
">Eighth #OperationGanga flight leaves from Budapest for New Delhi with 216 Indian nationals.
— Dr. S. Jaishankar (@DrSJaishankar) February 28, 2022
Our endeavor for everyone’s safe return continues. https://t.co/aUclKB8MJFEighth #OperationGanga flight leaves from Budapest for New Delhi with 216 Indian nationals.
— Dr. S. Jaishankar (@DrSJaishankar) February 28, 2022
Our endeavor for everyone’s safe return continues. https://t.co/aUclKB8MJF
ಫೆಬ್ರವರಿ 24 ರಂದು ಉಕ್ರೇನ್ ಬಿಕ್ಕಟ್ಟಿನ ಕುರಿತು ದೆಹಲಿಯಲ್ಲಿ ಭದ್ರತಾ ಕ್ಯಾಬಿನೆಟ್ ಸಮಿತಿ (ಸಿಸಿಎಸ್) ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ವಹಿಸಿದ್ದರು. ಸಂಘರ್ಷ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಮತ್ತು ಭಾರತೀಯ ನಾಗರಿಕರನ್ನು ಮರಳಿ ಕರೆತರಲು ಕೇಂದ್ರ ಸರ್ಕಾರವು 'ಆಪರೇಷನ್ ಗಂಗಾ' ಯೋಜನೆಯನ್ನು ಪ್ರಾರಂಭಿಸಿದೆ.
ಇದನ್ನೂ ಓದಿ: ಉಕ್ರೇನ್- ರಷ್ಯಾ ನಡುವೆ ಯಶಸ್ವಿಯಾಗದ ಮಾತುಕತೆ.. ಆದರೂ ಸಂಧಾನಕ್ಕೆ ಕೆಲ ಅಂಶಗಳನ್ನು ಕಂಡುಕೊಂಡ ಉಭಯ ರಾಷ್ಟ್ರಗಳು