ETV Bharat / bharat

ದೇಹದ ತೂಕ ಇಳಿಸಿಕೊಂಡೇ ಕ್ಷೇತ್ರಕ್ಕೆ 2,300 ಕೋಟಿ ಅನುದಾನ ತಂದ ಸಂಸದ!

author img

By

Published : Oct 18, 2022, 7:59 PM IST

Updated : Oct 18, 2022, 8:19 PM IST

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಸವಾಲು ಸ್ವೀಕರಿಸಿ, ಮಧ್ಯಪ್ರದೇಶದ ಉಜ್ಜೈನಿ ಸಂಸದ ಅನಿಲ್ ಫಿರೋಜಿಯಾ ಕಳೆದ ಏಳು ತಿಂಗಳಲ್ಲಿ ತಮ್ಮ ದೇಹದ 32 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ.

ujjain-mp-reduced-32-kg-after-nitin-gadkari-challenged-him-of-shedding-flab
ದೇಹದ ತೂಕ ಇಳಿಸಿಕೊಂಡೇ ಕ್ಷೇತ್ರಕ್ಕೆ 2,300 ಕೋಟಿ ಅನುದಾನಕ್ಕೆ ತಂದ ಸಂಸದ

ಉಜ್ಜೈನಿ (ಮಧ್ಯಪ್ರದೇಶ): ರಾಜಕೀಯ ನಾಯಕರು ಸವಾಲುಗಳು ಹಾಕುವುದು ಸರ್ವೇಸಾಮಾನ್ಯ. ಆದರೆ, ನೀವು ತೂಕ ಇಳಿಸಿಕೊಂಡರೆ... ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ಪ್ರತಿ ಕೆಜಿಗೆ 1,000 ಕೋಟಿ ರೂ.ನಂತೆ ಅನುದಾನ ಮಂಜೂರು ಮಾಡುತ್ತೇನೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಎಸೆದಿರುವ ಸವಾಲು ಮಧ್ಯ ಪ್ರದೇಶದ ಉಜ್ಜೈನಿ ಸಂಸದ ಅನಿಲ್ ಫಿರೋಜಿಯಾ ಅವರಿಗೆ ಸ್ಫೂರ್ತಿ ತುಂಬಿದೆ. ಇದರಿಂದಲೇ ಅನಿಲ್ ಫಿರೋಜಿಯಾ ತಮ್ಮ ಕ್ಷೇತ್ರಕ್ಕೆ ಈಗಾಗಲೇ 2,300 ಕೋಟಿ ಅನುದಾನವನ್ನೂ ತಂದಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇದೇ ಫೆಬ್ರವರಿಯಲ್ಲಿ ಮಧ್ಯಪ್ರದೇಶದ ಉಜ್ಜೈನಿಯ ಮಾಲ್ವಾ ಪ್ರದೇಶಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಅಧಿಕ ತೂಕ ಹೊಂದಿದ್ದ ಸಂಸದ ಅನಿಲ್ ಫಿರೋಜಿಯಾ ಅವರನ್ನು ನೋಡಿ ಗಡ್ಕರಿ ಅಚ್ಚರಿಗೊಂಡಿದ್ದರು. ಅಲ್ಲದೇ, ಆರೋಗ್ಯ ಕಾಪಾಡಿಕೊಳ್ಳಲು ತೂಕ ಇಳಿಸಿಕೊಳ್ಳಿ ಎಂದು ಗಡ್ಕರಿ ಸಲಹೆ ನೀಡಿದ್ದರು. ಅಲ್ಲದೇ, ಇದಕ್ಕಾಗಿ ಸಂಸದರಿಗೆ ಸವಾಲೊಂದನ್ನೂ ಗಡ್ಕರಿ ಎಸೆದಿದ್ದರು.

ದೇಹದ ತೂಕ ಇಳಿಸಿಕೊಂಡೇ ಕ್ಷೇತ್ರಕ್ಕೆ 2,300 ಕೋಟಿ ಅನುದಾನ ತಂದ ಸಂಸದ

ಆಗ ಇದಕ್ಕೆ ಪ್ರತಿಯಾಗಿ ಅನಿಲ್ ಫಿರೋಜಿಯಾ ತಮ್ಮ ಕ್ಷೇತ್ರಕ್ಕೆ ಹಣ ಮಂಜೂರು ಮಾಡಬೇಕಾಗಿ ಬೇಡಿಕೆ ಇಟ್ಟಿದ್ದರು. ಅಂತೆಯೇ, ವೇದಿಕೆ ಮೇಲೆಯೇ ಸಚಿವ ಗಡ್ಕರಿ ಅವರು ಸಂಸದ ಅನಿಲ್ ಫಿರೋಜಿಯಾ ಎಷ್ಟು ಕೆಜಿ ಕಡಿಮೆ ಆಗುತ್ತಾರೋ, ಆ ಪ್ರತಿ ಕೆಜಿಗೆ 1,000 ಕೋಟಿ ರೂ.ನಂತೆ ಕ್ಷೇತ್ರಕ್ಕೆ ಅನುದಾನ ಮಂಜೂರು ಮಾಡುತ್ತೇನೆ ಎಂದು ಪ್ರಕಟಿಸಿದ್ದರು.

135ಯಿಂದ 93 ಕೆಜಿಗೆ ಇಳಿದಿರುವೆ ಎಂದಿದ್ದ ಗಡ್ಕರಿ: ಫೆಬ್ರವರಿಯಲ್ಲಿ ನಡೆದ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುತ್ತಾ ಸಚಿವ ನಿತಿನ್​ ಗಡ್ಕರಿ, ಸಂಸದ ಅನಿಲ್ ಫಿರೋಜಿಯಾ ಅವರಿಗೆ ಅನುದಾನ ಹಂಚಿಕೆಗೆ ಒಂದು ಷರತ್ತು ಹಾಕಿದ್ದೇನೆ. ನಾನು ಕೂಡ ಈ ಹಿಂದೆ 135 ಕೆಜಿ ತೂಗುತ್ತಿದ್ದೆ. ಈಗ ನನ್ನ ದೇಹ ತೂಕ 93 ಕೆಜಿಗೆ ಇಳಿದಿದೆ. ನನ್ನ ಹಳೆಯ ಫೋಟೋವನ್ನೂ ಸಂಸದ ಅನಿಲ್ ಅವರಿಗೆ ತೋರಿಸಿದ್ದೇನೆ. ಹಾಗೆ ಉಜ್ಜೈನಿ ಅಭಿವೃದ್ಧಿಗೆ ಹಣ ಕೊಡಲು ಸಂಸದ ಅನಿಲ್​ ತಮ್ಮ ತೂಕ ಇಳಿಸಿಕೊಳ್ಳಬೇಕೆಂದು ನಿತಿನ್​ ಗಡ್ಕರಿ ಹೇಳಿದ್ದರು.

ಅಂದಿನಿಂದಲೇ ತೂಕ ಇಳಿಸುವ ಕಸರತ್ತು ಶುರು: ಸಚಿವ ಗಡ್ಕರಿ ಅವರ ಈ ಷರತ್ತಿಗೆ ಒಪ್ಪಿಕೊಂಡಿದ್ದ ಸಂಸದ ಅನಿಲ್ ಫಿರೋಜಿಯಾ ಅಂದಿನಿಂದಲೇ ತಮ್ಮ ಫಿಟ್ನೆಸ್ ಬಗ್ಗೆ ಗಮನ ಹರಿಸಿದರು. ತೂಕ ಇಳಿಸುವ ಕಸರತ್ತು ಶುರು ಮಾಡಿದರು. ಯೋಗ, ದೈಹಿಕ ವ್ಯಾಯಾಮ, ಈಜು... ಹೀಗೆ ಅನೇಕ ಕಸರತ್ತುಗಳು ಮಾಡಿ ಫೆಬ್ರವರಿಯಲ್ಲಿ 127 ಕೆಜಿ ತೂಕವಿದ್ದ ಸಂಸದ ಅನಿಲ್, ಕಳೆದ ಏಳು ತಿಂಗಳಲ್ಲಿ 32 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಸದ್ಯ 95 ಕೆಜಿಗೆ ಸಂಸದ ಇಳಿದಿದ್ದಾರೆ.

2300 ಕೋಟಿ ಅನುದಾನ ಬಿಡುಗಡೆ: ಸಚಿವ ಗಡ್ಕರಿ ಸವಾಲು ಸ್ವೀಕರಿಸಿದಂತೆ ನಾನು 32 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಈ ವಿಷಯ ಇತ್ತೀಚೆಗೆ ಸಚಿವರಿಗೆ ತಿಳಿದಾಗ ತುಂಬಾ ಖುಷಿಪಟ್ಟರು. ಜೊತೆಗೆ ಸಚಿವ ಗಡ್ಕರಿ ಅವರು ನನಗೆ ನೀಡಿದ ಭರವಸೆಯಂತೆ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ 2,300 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಿದ್ದಾರೆ ಎಂದು ಸಂಸದ ಅನಿಲ್ ಫಿರೋಜಿಯಾ ತಿಳಿಸಿದ್ದಾರೆ. ಅಲ್ಲದೇ, ಸದ್ಯ ನನ್ನ ಆಹಾರ ಕ್ರಮದಲ್ಲೂ ಹಲವು ಬದಲಾವಣೆ ಮಾಡಿಕೊಂಡಿದ್ದೇನೆ. ನನ್ನ ತೂಕ ಇಳಿಸಿಕೊಳ್ಳುವ ಈ ಪ್ರಯತ್ನವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಪ್ಯಾಕೇಜ್​ ಸ್ಟಾರ್​ ಎಂದರೆ.. ಪವರ್​ ಸ್ಟಾರ್ ಪವನ್​ ಕಲ್ಯಾಣ್​ ರೋಷಾಗ್ನಿ

Last Updated : Oct 18, 2022, 8:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.