ನವದೆಹಲಿ: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ನಾಳೆ (ಸೆ.26) ನವದೆಹಲಿಯ ಭಾರತ ಮಂಟಪದಲ್ಲಿ 'ಜಿ20 ವಿಶ್ವವಿದ್ಯಾಲಯ ಸಂಪರ್ಕ ಕಾರ್ಯಕ್ರಮ' ಹಮ್ಮಿಕೊಂಡಿದೆ. ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿ ಎನ್‌ಸಿಆರ್ ಪ್ರದೇಶದ ವಿಶ್ವವಿದ್ಯಾಲಯಗಳು, ಕಾಲೇಜುಗಳ ಉಪಕುಲಪತಿಗಳು, ಪ್ರಾಂಶುಪಾಲರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಭಾರತೀಯ ತಂಡದ ಜಿ20 ಸದಸ್ಯರು ಜಿ20 ಕಾರ್ಯಕ್ರಮದ ಫಲಿತಾಂಶಗಳ ಕುರಿತು ವಿವರಿಸಲಿದ್ದಾರೆ.
-
My young friends,
— Narendra Modi (@narendramodi) September 24, 2023 " class="align-text-top noRightClick twitterSection" data="
I look forward to your taking part in the G20 University Connect Finale on the 26th of this month. Over the year gone by, the G20 University Connect has emerged as a great forum to highlight the priority areas of India’s G-20 Presidency.
I look forward to a…
">My young friends,
— Narendra Modi (@narendramodi) September 24, 2023
I look forward to your taking part in the G20 University Connect Finale on the 26th of this month. Over the year gone by, the G20 University Connect has emerged as a great forum to highlight the priority areas of India’s G-20 Presidency.
I look forward to a…My young friends,
— Narendra Modi (@narendramodi) September 24, 2023
I look forward to your taking part in the G20 University Connect Finale on the 26th of this month. Over the year gone by, the G20 University Connect has emerged as a great forum to highlight the priority areas of India’s G-20 Presidency.
I look forward to a…
ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳ ಬೋಧನಾ ವಿಭಾಗದ ಸಂಯೋಜಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರದಲ್ಲಿ ಭಾಗಿಯಾಗಲು viablesoft.ors.in/risinvitationex o23VDionlineree lstratron.asDx ನಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗಾಗಿ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ ಒದಗಿಸಿದ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬೇಕು.
ಸುಗಮ ಪ್ರವೇಶ ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ಸಂಯೋಜಕರು ಮಧ್ಯಾಹ್ನ 2 ಗಂಟೆಗೆ ಸೇರಬೇಕಾಗುತ್ತದೆ. ಯಾವುದೇ ವಿದ್ಯಾರ್ಥಿ ಅಥವಾ ಅಧ್ಯಾಪಕ ಸಂಯೋಜಕರು ಪೂರ್ವ ನೋಂದಣಿ ಇಲ್ಲದೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂದು ಯುಜಿಸಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
"ರಾಷ್ಟ್ರೀಯ ರಾಜಧಾನಿ ಪ್ರದೇಶದ ಉನ್ನತ ಶಿಕ್ಷಣ ಸಂಸ್ಥೆಗಳು 30ರಿಂದ 40 ವಿದ್ಯಾರ್ಥಿಗಳು ಮತ್ತು ಇಬ್ಬರು ಅಧ್ಯಾಪಕರನ್ನು ಹಾಜರಾಗಲು ನಾಮನಿರ್ದೇಶನ ಮಾಡುವ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿಸಲಾಗಿದೆ. ಸಂಸ್ಥೆಯ ಮುಖ್ಯಸ್ಥರನ್ನು ಸಹ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಸುಗಮ ಸಮನ್ವಯಕ್ಕಾಗಿ ಅಧ್ಯಾಪಕ ಸಂಯೋಜಕರನ್ನು ನಾಮನಿರ್ದೇಶನ ಮಾಡಲಾಗುವುದು. ಸಮನ್ವಯ ಉದ್ದೇಶಗಳಿಗಾಗಿ ನಾಮನಿರ್ದೇಶನಗೊಂಡವರು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ತಮ್ಮ ವಿವರಗಳನ್ನು dgoffice@ris.org.in ನಲ್ಲಿ ಸಲ್ಲಿಸಬೇಕು" ಎಂದು ಯುಜಿಸಿ ಹೇಳಿದೆ.
-
The University Grants Commission (UGC) is organising a 'G20 University Connect' event on September 26. PM Modi will interact with the Vice-Chancellors, principals, faculty members and students of the universities and colleges at Bharat Mandapam: Prof Manish R Joshi, Secretary UGC pic.twitter.com/cAWGaIUdRT
— ANI (@ANI) September 25, 2023 " class="align-text-top noRightClick twitterSection" data="
">The University Grants Commission (UGC) is organising a 'G20 University Connect' event on September 26. PM Modi will interact with the Vice-Chancellors, principals, faculty members and students of the universities and colleges at Bharat Mandapam: Prof Manish R Joshi, Secretary UGC pic.twitter.com/cAWGaIUdRT
— ANI (@ANI) September 25, 2023The University Grants Commission (UGC) is organising a 'G20 University Connect' event on September 26. PM Modi will interact with the Vice-Chancellors, principals, faculty members and students of the universities and colleges at Bharat Mandapam: Prof Manish R Joshi, Secretary UGC pic.twitter.com/cAWGaIUdRT
— ANI (@ANI) September 25, 2023
ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ ನೇತೃತ್ವದ ಜಿ20 ಯೂನಿವರ್ಸಿಟಿ ಕನೆಕ್ಟ್ ಪ್ರೋಗ್ರಾಂನಲ್ಲಿ ಭಾರತ ಉತ್ತಮ ಯಶಸ್ಸನ್ನು ಸಾಧಿಸಿದೆ ಎಂದು ಯುಜಿಸಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಈ ವಿಶ್ವವಿದ್ಯಾಲಯ ಸಂಪರ್ಕ ಕಾರ್ಯಕ್ರಮವನ್ನು ನವದೆಹಲಿಯ ಅಭಿವೃದ್ಧಿಶೀಲ ರಾಷ್ಟ್ರಗಳಿಗಾಗಿ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ (RIS) ನೇತೃತ್ವ ವಹಿಸಿದೆ. ಮತ್ತು ಜಿ20 ಸೆಕ್ರೆಟರಿಯೇಟ್‌ನಿಂದ ಬೆಂಬಲಿತವಾಗಿದೆ.
ಯುವ ವೃತ್ತಿಪರರನ್ನು ಆಹ್ವಾನಿಸಿದ ಪ್ರಧಾನಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ20 ವಿಶ್ವವಿದ್ಯಾಲಯದ ಸಂಪರ್ಕ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಹೆಚ್ಚಿನ ಶಿಕ್ಷಣವನ್ನು ಪಡೆಯಲು ಬಯಸುವ ಯುವ ವೃತ್ತಿಪರರನ್ನು ಆಹ್ವಾನಿಸಿದ್ದಾರೆ. "ನಿಮ್ಮೆಲ್ಲರನ್ನೂ ವಿಶೇಷವಾಗಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಹೆಚ್ಚಿನ ಶಿಕ್ಷಣವನ್ನು ಪಡೆಯಲು ಉತ್ಸುಕರಾಗಿರುವ ಯುವ ವೃತ್ತಿಪರರನ್ನು ಸೆ.26ರ ಮಂಗಳವಾರದಂದು ನಡೆಯುವ ವಿಶೇಷ ಕಾರ್ಯಕ್ರಮಕ್ಕೆ ಆಹ್ವಾನಿಸಲು ನಾನು ಸಂತೋಷಪಡುತ್ತೇನೆ. ಕೆಲವು ದಿನಗಳ ಹಿಂದೆ ಜಿ20 ಶೃಂಗಸಭೆಯಲ್ಲಿ ವಿಶ್ವ ನಾಯಕರು ಸಂಗಮಿಸಿದ ಭಾರತ ಮಂಟಪದಲ್ಲಿ ಈ ಕಾರ್ಯಕ್ರಮ ನಡೆಯಲಿದೆ" ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಭಾರತದ ಜಿ20 ಅಧ್ಯಕ್ಷೀಯ ಪಯಣದ ಸಮಗ್ರ ಮಾಹಿತಿ ನೀಡುವ 'ಪೀಪಲ್ಸ್ ಜಿ20' ಇ-ಬುಕ್ ಅನಾವರಣ