ETV Bharat / bharat

UGC-NET 2021 ಪರೀಕ್ಷೆ ಮುಂದೂಡಿಕೆ: ಆದೇಶ ಹೊರಡಿಸಿದ ಕೇಂದ್ರ ಸರ್ಕಾರ!

ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಹೆಚ್ಚಾಗಿರುವ ಕಾರಣ ಇದೀಗ UGC-NET 2021 ಪರೀಕ್ಷೆ ಕೂಡ ಮುಂದೂಡಿಕೆಯಾಗಿದೆ.

UGC NET
UGC NET
author img

By

Published : Apr 20, 2021, 5:32 PM IST

ಹೈದರಾಬಾದ್​: ಮಹಾಮಾರಿ ಕೊರೊನಾ ವೈರಸ್​ ಹಾವಳಿ ಹೆಚ್ಚಾಗಿರುವ ಕಾರಣ ಮೇ 2ರಿಂದ ಮೇ.17ರವರೆಗೆ ನಿಗದಿಯಾಗಿದ್ದ ಯುಜಿಸಿ ನೆಟ್ ಪರೀಕ್ಷೆ ಮುಂದೂಡಿ ಮಹತ್ವದ ಆದೇಶ ಹೊರಹಾಕಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್​ ನಿಶಾಂಕ್​ ಟ್ವೀಟ್ ಮಾಡಿದ್ದಾರೆ.

ಪ್ರಸಕ್ತ ಸಾಲಿನ ಯುಜಿಸಿ - ನೆಟ್​​ ಪರೀಕ್ಷೆ ಮೇ 2ರಿಂದ ಆರಂಭಗೊಂಡು, ಮೇ.17ಕ್ಕೆ ಮುಕ್ತಾಯವಾಗಬೇಕಾಗಿತ್ತು. ಆದರೆ, ಕೊರೊನಾ ಸೋಂಕಿನ ಕಾರಣದಿಂದಾಗಿ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ಹೊಸ ದಿನಾಂಕ ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಯುಪಿಎಸ್​ಸಿ ಪರೀಕ್ಷೆ ಮುಂದೂಡಿಕೆ: ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿರುವ ಕಾರಣ ಯುಪಿಎಸ್​ಸಿ ಪರೀಕ್ಷೆ ಸಹ ಮುಂದೂಡಿಕೆ ಮಾಡಲಾಗಿದೆ. ಏಪ್ರಿಲ್​ ಮತ್ತು ಮೇ ತಿಂಗಳಲ್ಲಿ ನಡೆಯಬೇಕಾಗಿದ್ದ ಪರೀಕ್ಷೆಯನ್ನ ನಾಗರಿಕ ಸೇವಾ ಮಂಡಳಿ(UPSC) ಮುಂದೂಡಿಕೆ ಮಾಡಿದೆ.

ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಈಗಾಗಲೇ ಸಿಬಿಎಸ್​​ಇ 10ನೇ ತರಗತಿ ಪರೀಕ್ಷೆ ರದ್ಧುಗೊಂಡಿದ್ದು, 12ನೇ ತರಗತಿ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.