ನವದೆಹಲಿ: ಪದವಿ ಮತ್ತು ತಾತ್ಕಾಲಿಕ ಪ್ರಮಾಣಪತ್ರಗಳ ಮೇಲೆ ವಿದ್ಯಾರ್ಥಿಗಳ ಆಧಾರ್ ಸಂಖ್ಯೆಯನ್ನು ಮುದ್ರಿಸದಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ದೇಶದ ಎಲ್ಲ ವಿಶ್ವವಿದ್ಯಾಲಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. 'ನೇಮಕಾತಿ ಅಥವಾ ಪ್ರವೇಶದ ಸಮಯದಲ್ಲಿ ದಾಖಲೆಗಳ ಪರಿಶೀಲನೆ ಹಾಗೂ ನಂತರ ಇತರ ಬಳಕೆಗಾಗಿ ಪದವಿ ಪ್ರಮಾಣಪತ್ರ ಹಾಗೂ ತಾತ್ಕಾಲಿಕ ಪ್ರಮಾಣಪತ್ರಗಳಲ್ಲಿ ವಿದ್ಯಾರ್ಥಿಗಳ ಪೂರ್ಣ ಆಧಾರ್ ಸಂಖ್ಯೆ ಮುದ್ರಿಸುವ ಕುರಿತು ರಾಜ್ಯ ಸರ್ಕಾರಗಳು ಚಿಂತಿಸುತ್ತಿವೆ' ಎಂಬ ವರದಿಗಳ ಮಧ್ಯೆ ಉನ್ನತ ಶಿಕ್ಷಣ ನಿಯಂತ್ರಕನಾದ ಆಯೋಗದಿಂದ ಈ ನಿರ್ದೇಶನ ಬಂದಿದೆ.
ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಅವರು ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದಿದ್ದು, ಆಧಾರ್ ಸಂಖ್ಯೆಗಳನ್ನು ಮುದ್ರಿಸಲು ಅನುಮತಿಯಿಲ್ಲ. ಉನ್ನತ ಶಿಕ್ಷಣ ಸಂಸ್ಥೆಗಳು ಯುಐಡಿಎಐ ನಿಯಮಗಳು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲೇಬೇಕು ಎಂದು ತಿಳಿಸಿದ್ದಾರೆ.
-
UGC Letter regarding display of Aadhaar number on provisional certificates and degrees issued by universities.
— UGC INDIA (@ugc_india) September 1, 2023 " class="align-text-top noRightClick twitterSection" data="
Read:https://t.co/jtxN2oDipB pic.twitter.com/TSK9ne8hdV
">UGC Letter regarding display of Aadhaar number on provisional certificates and degrees issued by universities.
— UGC INDIA (@ugc_india) September 1, 2023
Read:https://t.co/jtxN2oDipB pic.twitter.com/TSK9ne8hdVUGC Letter regarding display of Aadhaar number on provisional certificates and degrees issued by universities.
— UGC INDIA (@ugc_india) September 1, 2023
Read:https://t.co/jtxN2oDipB pic.twitter.com/TSK9ne8hdV
ಪ್ರಮಾಣಪತ್ರಗಳಲ್ಲಿ ಆಧಾರ್ ಸಂಖ್ಯೆಗಳನ್ನು ಮುದ್ರಿಸುವುದರಿಂದ ವೈಯಕ್ತಿಕ ವಿವರಗಳ ಸೋರಿಕೆ ಆಗಬಹುದು ಎಂಬ ಆತಂಕವನ್ನು ಪರಿಗಣಿಸಿ ಯುಜಿಸಿ ಈ ನಿರ್ಧಾರ ತೆಗೆದುಕೊಂಡಿದೆ.
ಮನೀಷ್ ಜೋಶಿ ಪ್ರತಿಕ್ರಿಯಿಸಿ, "ನಿಯಮಗಳಂತೆ ಪ್ರಮಾಣಪತ್ರದಲ್ಲಿ ಆಧಾರ್ ಸಂಖ್ಯೆಯನ್ನು ಮುದ್ರಿಸಬಾರದು. ಈ ಕುರಿತು ಎಲ್ಲ ವಿಶ್ವವಿದ್ಯಾಲಯಗಳಿಗೂ ತಿಳಿಸಿದ್ದೇವೆ" ಎಂದು ಮಾಹಿತಿ ನೀಡಿದ್ದಾರೆ.
ಮಾತೃ ಭಾಷೆಯಲ್ಲಿ ಪರೀಕ್ಷೆ: ಮತ್ತೊಂದೆಡೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಇತ್ತೀಚೆಗೆ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆಯೊಂದನ್ನು ಕೊಟ್ಟಿದೆ. ಇನ್ನು ಮುಂದೆ ವಿದ್ಯಾರ್ಥಿ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದರೂ ಸ್ಥಳೀಯ ಭಾಷೆಯಲ್ಲೇ ಅಂದರೆ ಮಾತೃಭಾಷೆಯಲ್ಲಿಯೇ ಪರೀಕ್ಷೆಗಳನ್ನು ಬರೆಯಲು ಅವಕಾಶ ಕಲ್ಪಿಸುವ ನಿರ್ಧಾರ ಕೈಗೊಂಡಿದೆ. ದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಈ ವ್ಯವಸ್ಥೆ ಜಾರಿಯಾಗಬೇಕು. ವಿದ್ಯಾರ್ಥಿ ಮಾತೃಭಾಷೆ ಪರೀಕ್ಷೆಗಳನ್ನು ಬರೆಯಲು ಬಯಸಿದರೆ ಇಂಗ್ಲಿಷ್ ಮಾಧ್ಯಮದಲ್ಲಿ ತನ್ನ ಆಯ್ಕೆಯ ಕೋರ್ಸ್ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವಂತೆ ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ವಿಶ್ವವಿದ್ಯಾಲಯಗಳಿಗೆ ತಿಳಿಸಿದ್ದರು.
"ಪಠ್ಯಪುಸ್ತಕಗಳ ತಯಾರಿಕೆಯಲ್ಲಿ ಮಾತೃ/ಸ್ಥಳೀಯ ಭಾಷೆಗಳಲ್ಲಿ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯನ್ನು ಉತ್ತೇಜಿಸುವಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಸ್ಥಳೀಯ ಭಾಷೆಗಳಲ್ಲಿ ಪರೀಕ್ಷೆಗಳನ್ನು ಬರೆಯುವುದು, ಇತರ ಭಾಷೆಗಳಿಂದ ಪ್ರಮಾಣಿತ ಪುಸ್ತಕಗಳ ಅನುವಾದ, ಮಾತೃಭಾಷೆಯಲ್ಲಿ ಪಠ್ಯಪುಸ್ತಕಗಳನ್ನು ಬರೆಯುವುದು ಮತ್ತು ಬೋಧನೆಯಲ್ಲಿ ಅವುಗಳ ಬಳಕೆಯನ್ನು ಪ್ರೋತ್ಸಾಹಿಸುವ ಪ್ರಯತ್ನಗಳನ್ನು ಬಲಪಡಿಸುವುದು ಪ್ರತಿ ವಿಶ್ವವಿದ್ಯಾಲಯದ ಜವಾಬ್ದಾರಿ" ಎಂದು ಆಯೋಗ (ಯುಜಿಸಿ) ಸ್ಪಷ್ಟಪಡಿಸಿದೆ.
ಸಹಾಯಕ ಪ್ರಾಧ್ಯಾಪಕರಿಗೆ ಪಿಹೆಚ್ಡಿ ಕಡ್ಡಾಯವಲ್ಲ: ನೆಟ್, ಎಸ್ಇಟಿ , ಎಸ್ಎಲ್ಇಟಿ ಪರೀಕ್ಷೆ ತೇರ್ಗಡೆಯಾಗಿದ್ದರೆ ಸಹಾಯಕ ಪ್ರಾಧ್ಯಾಪಕರಾಗಲು ಅಭ್ಯರ್ಥಿಗಳು ಅರ್ಹತೆಯನ್ನು ಪಡೆಯಬಹುದು. ಇತ್ತೀಚೆಗೆ ಯುಜಿಸಿ ಹೊರಡಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ, ದೇಶದ ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ಪಿಹೆಚ್ಡಿ ಕಡ್ಡಾಯ ಎಂಬ ನಿಯಮವನ್ನು ರದ್ದುಪಡಿಸಲಾಗಿದೆ. ಯುಜಿಸಿ ಅಧ್ಯಕ್ಷ ಎಂ.ಜಗದೀಶ್ ಕುಮಾರ್ ಈ ಕುರಿತು ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಸುತ್ತೋಲೆ ಪ್ರತಿಯನ್ನು ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದರು.
ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರಿಗೆ ಪಿಹೆಚ್ಡಿ ಕಡ್ಡಾಯವಲ್ಲ: NET/ SET/ SLET ಪಾಸ್ ಆಗಿದ್ದರೆ ಸಾಕು..!