ETV Bharat / bharat

ಸೆ.31 ರೊಳಗೆ ದಾಖಲಾತಿ, ಅಕ್ಟೋಬರ್ 1 ರಿಂದ ತರಗತಿ: ಪದವಿ ಕಾಲೇಜುಗಳು ಪುನಾರಂಭಕ್ಕೆ ಮಾರ್ಗಸೂಚಿ - ಅಕ್ಟೋಬರ್​​ 1 ರಿಂದ ಪದವಿ ಕಾಲೇಜುಗಳ ಪುನಾರಂಭ

ಅಕ್ಟೋಬರ್​​ 1 ರಿಂದ ಪದವಿ ಕಾಲೇಜುಗಳನ್ನು ಪುನಾರಂಭಿಸಲು ಯುಜಿಸಿ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.

UGC
UGC
author img

By

Published : Jul 17, 2021, 11:20 AM IST

ನವದೆಹಲಿ: ಪದವಿ ಕಾಲೇಜುಗಳ ಆರಂಭದ ಬಗ್ಗೆ ಇದ್ದ ಗೊಂದಲಕ್ಕೆ ಯುಜಿಸಿ ತೆರೆ ಎಳೆದಿದ್ದು, ಅಕ್ಟೋಬರ್ 1ರಿಂದ ಪದವಿ ಕಾಲೇಜುಗಳನ್ನು (Degree College) ತೆರೆಯಲು ಸೂಚಿಸಿದೆ. ಈ ಬಗ್ಗೆ ಮಾರ್ಗಸೂಚಿ ಹೊರಡಿಸಿರುವ ಯುಜಿಸಿ, ಎಲ್ಲಾ ವಿಶ್ವವಿದ್ಯಾಲಯಗಳಿಗೆ, ಕಾಲೇಜುಗಳಿಗೆ ಮಾಹಿತಿ ನೀಡಿದೆ.

ಸೆಪ್ಟೆಂಬರ್ ತಿಂಗಳ 30ನೇ ತಾರೀಖಿನೊಳಗೆ 2021-22ನೇ ಶೈಕ್ಷಣಿಕ ಸಾಲಿನ ದಾಖಲಾತಿ ಮುಗಿಸಿ, ಅಕ್ಟೋಬರ್​ 1ರಿಂದ ಕಾಲೇಜುಗಳನ್ನು ಪುನಾರಂಭಿಸಿ ಎಂದು ಸೂಚನೆ ನೀಡಿದೆ.

ಅಲ್ಲದೆ, ದಾಖಲಾತಿಗೆ ನೀಡಲಾದ ಗಡುವನ್ನು ಅಕ್ಟೋಬರ್​​ 31, 2021 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಅರ್ಹತಾ ಪರೀಕ್ಷೆ ಸಂಬಂಧಿತ ದಾಖಲೆಗಳನ್ನು ನೀಡಲು ಡಿಸೆಂಬರ್ 31, 2021 ರವರೆಗೆ ಕಾಲಾವಕಾಶ ನೀಡಿದೆ.

12 ನೇ ತರಗತಿಯ ಫಲಿತಾಂಶವನ್ನು ಜುಲೈ 31, 2021 ರೊಗಳಗೆ ಘೋಷಿಸುವ ನಿರೀಕ್ಷೆಯಿದೆ. ಒಂದು ವೇಳೆ ವಿಳಂಬವಾದರೆ, ಶಿಕ್ಷಣ ಸಂಸ್ಥೆಗಳು ಅಕ್ಟೋಬರ್​​ 18, 2021 ರ ವರೆಗೆ ದಾಖಲಾತಿಗೆ ಅನುಮತಿ ನೀಡಬಹುದು ಎಂದು ನಿರ್ದೇಶಿಸಿದೆ. ತರಗತಿಯು ಆನ್​ಲೈನ್, ಆಫ್​ಲೈನ್​ನಲ್ಲಿ ನಡೆಸಬಹುದು ಎಂದು ಯುಜಿಸಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.