ETV Bharat / bharat

Udhampur road accident: ರಸ್ತೆಯಿಂದ ಸ್ಕಿಡ್ ಆಗಿ ಕಣಿವೆಗೆ ಬಿದ್ದ ಮಿನಿ ಬಸ್.. 12 ವಿದ್ಯಾರ್ಥಿಗಳು ಸೇರಿ 15 ಜನರಿಗೆ ಗಾಯ - ಜಮ್ಮು ಮತ್ತು ಕಾಶ್ಮೀರ ಅಪಘಾತ ಸುದ್ದಿ

Udhampur road accident: ಜಮ್ಮು-ಕಾಶ್ಮೀರದ ಉಧಂಪುರ ಜಿಲ್ಲೆಯ ಮಸ್ಸೋರಾ ಬಳಿ ಪ್ರಯಾಣಿಸುತ್ತಿದ್ದ ಮಿನಿ ಬಸ್ ರಸ್ತೆಯಿಂದ ಸ್ಕಿಡ್ ಆಗಿ ಕಣಿವೆಗೆ ಬಿದ್ದ ಪರಿಣಾಮ ಸುಮಾರು 15 ಜನರು ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.

Udhampur road accident  Mini bus skids off the the Road and fell down  jammu and kashmir accident news  ರಸ್ತೆಯಿಂದ ಸ್ಕಿಡ್ ಆಗಿ ಕಣಿವೆಗೆ ಬಿದ್ದ ಮಿನಿ ಬಸ್  ಉಧಂಪುರ ರಸ್ತೆ ಅಪಘಾತ  ಜಮ್ಮು ಮತ್ತು ಕಾಶ್ಮೀರ ಅಪಘಾತ ಸುದ್ದಿ  ಮಸ್ಸೋರಾ ಬಳಿ ಮಿನಿ ಬಸ್ ಅಪಘಾತ
ರಸ್ತೆಯಿಂದ ಸ್ಕಿಡ್ ಆಗಿ ಕಣಿವೆಗೆ ಬಿದ್ದ ಮಿನಿ ಬಸ್
author img

By

Published : Aug 6, 2022, 9:45 AM IST

ಉಧಂಪುರ(ಜಮ್ಮು-ಕಾಶ್ಮೀರ): ಇಂದು ಬೆಳಗ್ಗೆ 7:00 ಗಂಟೆಗೆ ಜಿಲ್ಲೆಯ ಬರ್ಮೀನ್ ಪ್ರದೇಶದ ಮಸ್ಸೋರಾ ಬಳಿ ಮಿನಿ ಬಸ್ ಅಪಘಾತಕ್ಕೀಡಾಗಿದ್ದು, ಸುಮಾರು 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮಿನಿ ಬಸ್ ಪುಬರ್ಮಿನ್‌ನಿಂದ ಉಧಮ್‌ಪುರ ಕಡೆಗೆ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಣವೆಗೆ ಉರುಳಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.

ರಸ್ತೆಯಿಂದ ಸ್ಕಿಡ್ ಆಗಿ ಕಣಿವೆಗೆ ಬಿದ್ದ ಮಿನಿ ಬಸ್

ಈ ಅಪಘಾತದಲ್ಲಿ 15 ಮಂದಿಯಲ್ಲಿ ಸುಮಾರು 12 ಮಂದಿ ಶಾಲಾ ವಿದ್ಯಾರ್ಥಿಗಳೂ ಗಾಯಗೊಂಡಿದ್ದು, ಗಾಯಾಳುಗಳನ್ನು ಉಧಂಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ರಸ್ತೆಯ ದುಃಸ್ಥಿತಿಯಿಂದಾಗಿ ಈ ರಸ್ತೆ ಅಪಘಾತ ಸಂಭವಿಸಿದೆ ಎನ್ನಲಾಗ್ತಿದೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರ ರಕ್ಷಣೆ ಕಾರ್ಯಕ್ಕೆ ಕೈ ಜೋಡಿಸಿದರು. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಓದಿ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಆಲದ ಮರ: ತಂದೆ-ಮಗ ದಾರುಣ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.