ETV Bharat / bharat

'ಅಮಿತ್ ಶಾ ಈ ಕೆಲಸ ಮೊದಲೇ ಮಾಡಿದ್ದರೆ, ಶಿವಸೇನೆ ಅಧಿಕೃತವಾಗಿ ನಿಮ್ಮೊಂದಿಗಿರುತ್ತಿತ್ತು' - ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು

2019ರಲ್ಲೇ ನಾನು ಅಮಿತ್ ಶಾ ಅವರಿಗೆ ಈ ಮಾತು ಹೇಳಿದ್ದೆ. ಆದರೆ, ನಮಗೆ 2.5 ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಅವರು ಒಪ್ಪಿಕೊಂಡಿರಲಿಲ್ಲ ಎಂದು ಉದ್ಧವ್ ಠಾಕ್ರೆ ದೂರಿದರು.

Uddhav Thackeray
Uddhav Thackeray
author img

By

Published : Jul 1, 2022, 3:25 PM IST

ಮುಂಬೈ(ಮಹಾರಾಷ್ಟ್ರ): ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಇದೇ ಮೊದಲ ಬಾರಿಗೆ ಉದ್ಧವ್ ಠಾಕ್ರೆ ಫೇಸ್​​ಬುಕ್​ ಲೈವ್ ಮೂಲಕ ಮತ್ತೊಮ್ಮೆ ಮಾತನಾಡಿದರು. "ಈ ಕೆಲಸವನ್ನು ಅಮಿತ್ ಶಾ ಈ ಹಿಂದೆ ಗೌರವಯುತವಾಗಿ ಮಾಡಬಹುದಿತ್ತು. ಹಾಗೆ ಮಾಡಿದ್ದರೆ ಶಿವಸೇನೆ ಅಧಿಕೃತವಾಗಿ ನಿಮ್ಮೊಂದಿಗಿರುತ್ತಿತ್ತು" ಎಂದರು.

"ಈ ಹಿಂದೆ ಅಮಿತ್ ಶಾ ಅವರಿಗೆ ನಾನು ಇದೇ ಮಾತು ಹೇಳಿದ್ದೆ. 2.5 ವರ್ಷಗಳ ಕಾಲ ಶಿವಸೇನೆ ಸಿಎಂ ಆಗಿರಬೇಕು ಎಂದಿದ್ದೆ. ಅವರು ಇದನ್ನು ಮೊದಲೇ ಮಾಡಿದ್ದರೆ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ. ಇದೀಗ ಮುಖ್ಯಮಂತ್ರಿಯಾಗಿರುವ ಏಕನಾಥ್ ಶಿಂಧೆ ಶಿವಸೇನೆಯ ಅಭ್ಯರ್ಥಿ ಅಲ್ಲ" ಎಂದು ಹೇಳಿದರು.

"ನಾನು ರಾಜೀನಾಮೆ ನೀಡಿದ ಬಳಿಕ ನನಗೆ ಜನರಿಂದ ಅಪಾರ ಪ್ರೀತಿಪೂರ್ವಕ ಸಂದೇಶಗಳು ಬಂದಿವೆ. ದಿಢೀರ್ ಆಗಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ವ್ಯಕ್ತಿ ರಾಜೀನಾಮೆ ನೀಡಿದಾಗ ತುಂಬಾ ಪ್ರೀತಿ ಮತ್ತು ಗೌರವ ಸಿಕ್ಕಿರುವುದು ಸಂತೋಷ ಮೂಡಿಸಿದೆ. ಯಾವುದೇ ಕಾರಣಕ್ಕೂ ನನ್ನ ಮೇಲಿನ ಕೋಪವನ್ನು ಜನರ ಮೇಲೆ ತೋರಿಸಬೇಡಿ. ಮೆಟ್ರೋ ಕಾರ್‌ ಶೆಡ್​​ನ ಪ್ರಸ್ತಾಪ ಬದಲಾಯಿಸಬೇಡಿ" ಎಂದು ಇದೇ ವೇಳೆ ಶಿಂಧೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ ಶಿಂಧೆ ಅಧಿಕಾರ ಸ್ವೀಕಾರ ಮಾಡ್ತಿದ್ದಂತೆ ಮೆಟ್ರೋ ಕಾರ್​ಶೆಡ್ ಯೋಜನೆ ಬದಲಾಯಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಶರದ್ ಪವಾರ್​ಗೆ ಬಂತು 'ಪ್ರೇಮ ಪತ್ರ': 'ಇಡಿ' ಅಂದ್ರೆ ಜೋಕ್ ಎಂದ ಎನ್​ಸಿಪಿ ಮುಖ್ಯಸ್ಥ

ಸಂಜೆ ಸಚಿವ ಸಂಪುಟ ಸಭೆ: ಏಕನಾಥ್ ಶಿಂಧೆ ನೇತೃತ್ವದಲ್ಲಿ ಇಂದು ಸಂಜೆ 5 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ಇದರಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಜುಲೈ 3, 4ರಂದು ವಿಶೇಷ ಅಧಿವೇಶನ: ಸ್ಪೀಕರ್​ ಆಯ್ಕೆ ಮಾಡಲು ಜುಲೈ 3 ಹಾಗೂ 4ರಂದು ಮಹಾರಾಷ್ಟ್ರ ವಿಶೇಷ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಬಂಡಾಯ ಶಿವಸೇನೆ ವಿಶ್ವಾಸಮತ ಮಂಡಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.