ETV Bharat / bharat

ಹಿಂದುತ್ವದ ನೆಪದಲ್ಲಿ ಬಿಜೆಪಿ ನನ್ನ ತಂದೆಗೆ ಮೋಸ ಮಾಡಿದೆ: ಸಿಎಂ ಉದ್ಧವ್ ಠಾಕ್ರೆ - BJP cheated my father on Hindutva pretext

ಬಾಳಾಸಾಹೇಬರಿಗೆ ಮುಗ್ಧತೆ ಇತ್ತು. ಆದರೆ, ನಾನು ಹಾಗಲ್ಲ. ಬಿಜೆಪಿ ತನ್ನ ಸಂಚಿನಲ್ಲಿ ಯಶಸ್ವಿಯಾಗಲು ನಾನು ಬಿಡುವುದಿಲ್ಲ. ನಾನು ಅವರ ಕಾರ್ಯಗಳು ಮತ್ತು ಕಾರ್ಯತಂತ್ರಗಳ ಮೇಲೆ ನನ್ನ ಕಣ್ಣಿಟ್ಟಿರುತ್ತೇನೆ ಮತ್ತು ಕಿವಿಗಳನ್ನು ತೆರೆದಿದ್ದೇನೆ ಎಂದು ಮಹಾ ಸಿಎಂ ಎಚ್ಚರಿಸಿದ್ದಾರೆ.

Uddhav Thackeray claims 'BJP cheated my father on Hindutva pretext'

author img

By

Published : May 2, 2022, 3:24 PM IST

ಮುಂಬೈ (ಮಹಾರಾಷ್ಟ್ರ): ಹಿಂದುತ್ವವನ್ನು ಪ್ರಚಾರ ಮಾಡುವ ಮೈತ್ರಿಯ ನೆಪದಲ್ಲಿ ಭಾರತೀಯ ಜನತಾ ಪಕ್ಷವು ಈ ಹಿಂದೆ ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರಿಗೆ ಮೋಸ ಮಾಡಿದೆ ಎಂದು ಬಾಳ್​ ಠಾಕ್ರೆ ಪುತ್ರ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.

ಬಾಳಾಸಾಹೇಬರಿಗೆ ಮುಗ್ಧತೆ ಇತ್ತು. ಆದರೆ, ನಾನು ಹಾಗಲ್ಲ. ಬಿಜೆಪಿ ತನ್ನ ಸಂಚಿನಲ್ಲಿ ಯಶಸ್ವಿಯಾಗಲು ನಾನು ಬಿಡುವುದಿಲ್ಲ. ನಾನು ಅವರ ಕಾರ್ಯಗಳು ಮತ್ತು ಕಾರ್ಯತಂತ್ರಗಳ ಮೇಲೆ ನನ್ನ ಕಣ್ಣಿಟ್ಟಿರುತ್ತೇನೆ ಮತ್ತು ಕಿವಿಗಳನ್ನು ತೆರೆದಿದ್ದೇನೆ. ಬಿಜೆಪಿಯ ಕಾರ್ಯಸೂಚಿಯನ್ನು ಚೆನ್ನಾಗಿ ತಿಳಿದಿದ್ದೇನೆ ಎಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉದ್ಧವ್​ ಠಾಕ್ರೆ ಬಿಜೆಪಿ ವಿರುದ್ಧ ಮಾತನಾಡಿದ್ದಾರೆ.

ಇದನ್ನೂ ಓದಿ: ಪಿಎಸ್​ಐ ಪರೀಕ್ಷಾ ಅಕ್ರಮ.. ಸಿಐಡಿ ಕಚೇರಿಗೆ ಹೊಸ ಬಟ್ಟೆ ಸಮೇತ ಆಗಮಿಸಿದ ಆರೋಪಿ ಸದ್ದಾಂ ಕುಟುಂಬ

ಹಿಂದುತ್ವವನ್ನು ರಾಜಕೀಯಗೊಳಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಠಾಕ್ರೆ, ಮಹಾರಾಷ್ಟ್ರದ ಹಿಂದೂಗಳು ಈ ಜನರು ನಡೆಸುತ್ತಿರುವ ಹಿಂದುತ್ವ ನೀತಿಗಳಿಗೆ ಸಿಕ್ಕಿಹಾಕಿಕೊಳ್ಳುವಷ್ಟು ಮೋಸಗಾರರಲ್ಲ. ಶಿವಸೇನೆ 1987 ರಲ್ಲಿ ವಿಲೇಪಾರ್ಲೆಯಿಂದ ಏಕಾಂಗಿಯಾಗಿ ಹಿಂದುತ್ವದ ಹೆಸರಿನಲ್ಲಿ ತನ್ನ ಮೊದಲ ಚುನಾವಣೆಯಲ್ಲಿ ಹೋರಾಡಿ ಗೆದ್ದಿತ್ತು. ಆ ಚುನಾವಣೆಯಲ್ಲಿ ಬಿಜೆಪಿಯು ಶಿವಸೇನೆ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಚುನಾವಣೆಯಲ್ಲಿ ಶಿವಸೇನೆ ಗೆದ್ದ ನಂತರ ಬಿಜೆಪಿ ನಾಯಕರು ಬಾಳಾಸಾಹೇಬ್ ಠಾಕ್ರೆ ಬಳಿ ಬಂದು ಹಿಂದುತ್ವದ ಆಧಾರದ ಮೇಲೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದರು ಎಂದು ಸ್ಮರಿಸಿದರು.

ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಸಹ ನೈಜ ಹಿಂದುತ್ವದ ಪರವಾಗಿದ್ದೇನೆ ಎನ್ನುವುದನ್ನು ಉದ್ಧವ್ ಠಾಕ್ರೆ ಪುನರುಚ್ಚರಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.