ETV Bharat / bharat

ವಿಮಾನದ ಮೂಲಕ ವಿದೇಶಿ ಕರೆನ್ಸಿ ಕಳ್ಳಸಾಗಣೆ.. ಇಬ್ಬರು ಪ್ರಯಾಣಿಕರ ಬಂಧನ - ಕಸ್ಟಮ್ಸ್​ ಅಧಿಕಾರಿಗಳು

ಪಂಜಾಬ್​ನ ಅಮೃತಸರ ವಿಮಾನ ನಿಲ್ದಾಣದಿಂದ ದುಬೈಗೆ ಸಾಗಿಸಲಾಗುತ್ತಿದ್ದ ವಿದೇಶಿ ಕರೆನ್ಸಿಗಳನ್ನು ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದು, ಇಬ್ಬರು ಪ್ರಯಾಣಿಕರನ್ನು ಬಂಧಿಸಿದ್ದಾರೆ.

foreign-currency-smuggling
ವಿಮಾನದ ಮೂಲಕ ವಿದೇಶಿ ಕರೆನ್ಸಿ ಕಳ್ಳಸಾಗಣೆ
author img

By

Published : Sep 4, 2022, 8:41 PM IST

ಅಮೃತಸರ: ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾಣದಲ್ಲಿ ವಿದೇಶಿ ಕರೆನ್ಸಿ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಬಂಧಿಸಲಾಗಿದೆ. ಈ ಕರೆನ್ಸಿಯ ಮೌಲ್ಯವು 32.86 ಲಕ್ಷ ರೂಪಾಯಿಗಳಾಗಿವೆ. ಲಗೇಜು ತಪಾಸಣೆ ನಡೆಸುತ್ತಿದ್ದ ವೇಳೆ ಈ ಕರೆನ್ಸಿಗಳು ಪತ್ತೆಯಾಗಿವೆ.

ಅಮೃತಸರದಿಂದ ದುಬೈಗೆ ಏರ್​ ಇಂಡಿಯಾ ವಿಮಾನ ಟೇಕ್​ಆಫ್​ ಸಜ್ಜಾಗಿತ್ತು. ಈ ವೇಳೆ ಸಿಐಎಸ್​ಎಫ್​ ಪೊಲೀಸರು ಪ್ರಯಾಣಿಕರ ಲಗೇಜ್​ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಪ್ರಯಾಣಿಕರ ಬ್ಯಾಗ್​ನಲ್ಲಿ ವಿಚಿತ್ರವಾದ ವಸ್ತುಗಳು ಕಂಡುಬಂದಿವೆ. ಹೊರತೆಗೆದು ಪರಿಶೀಲಿಸಿದಾಗ ಅವು ವಿದೇಶಿ ಕರೆನ್ಸಿಗಳು ಎಂದು ತಿಳಿದುಬಂದಿದೆ.

ಲಗೇಜುಗಳಲ್ಲಿ ಕಂಡುಬಂದ 21 ಸಾವಿರ ಯುರೋಗಳ ಸಮೇತ ಇಬ್ಬರು ಪ್ರಯಾಣಿಕರನ್ನೂ ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿದೇಶಕ್ಕೆ ಕೊಂಡೊಯ್ಯುತ್ತಿದ್ದ ವಿದೇಶಿ ಕರೆನ್ಸಿಗಳು ಭಾರತೀಯ ರೂಪಾಯಿ ಪ್ರಕಾರ 32,86,500 ರೂಪಾಯಿ ಮೌಲ್ಯದ್ದಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದಿ: ಸ್ವಂತ ಫ್ಲ್ಯಾಟ್‌ ಖರೀದಿಸಲು ಕನಸು ಕಾಣುತ್ತಿರುವ ಬೆಂಗಳೂರಿಗರಿಗೆ ಗುಡ್ ನ್ಯೂಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.