ETV Bharat / bharat

ಬಾಲಾಕೋಟ್​ ಸ್ಟ್ರೈಕ್​ಗೆ 2 ವರ್ಷ; ವೈರಿ ಪಾಕ್​ ನೆಲಕ್ಕೆ ನುಗ್ಗಿ ಉಗ್ರರ ರುಂಡ ಚೆಂಡಾಡಿದ್ದ ಯೋಧರು!

author img

By

Published : Feb 26, 2021, 7:01 AM IST

2019ರ ಫೆ.26 ರಂದು ಅತ್ಯಂತ ಕರಾರುವಾಕ್ ಹಾಗೂ ದಿಟ್ಟತನದ ದಾಳಿ ನಡೆಸಿದ ಭಾರತೀಯ ಯೋಧರು, ಪಾಕ್ ಆಕ್ರಮಿತ ಕಾಶ್ಮೀರದ ಬಾಲಾಕೋಟ್​ನಲ್ಲಿ ಬಾಂಬ್​ ಸುರಿಮಳೆಗೈದರು. ಏನಾಗುತ್ತಿದೆ ಎಂಬುದು ಪಾಕಿಸ್ತಾನಕ್ಕೆ ಅರ್ಥವಾಗುವ ಮೊದಲೇ ಜೈಶ್​-ಎ-ಮೊಹಮ್ಮದ್ ಉಗ್ರರ ಶಿಬಿರಗಳು ಧ್ವಂಸಗೊಂಡು, ನೂರಾರು ಉಗ್ರರು ಹತರಾದರು. ಅಲ್ಲಿಗೆ ಭಾರತದ ಸರ್ಜಿಕಲ್ ಸ್ಟ್ರೈಕ್​ ಪಾಪಿ ಪಾಕಿಸ್ತಾನದ ಎದೆ ಝಲ್ಲೆನಿಸಿತ್ತು.

two-years-after-balakot-surgicle-strike
ಬಾಲಾಕೋಟ್​ ಸ್ಟ್ರೈಕ್​ಗೆ 2 ವರ್ಷ

ಭಾರತೀಯ ವಾಯುಪಡೆಯ ಧೀರ ಯೋಧರು ಶತ್ರುರಾಷ್ಟ್ರ ಪಾಪಿ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ, ಉಗ್ರಗಾಮಿಗಳ ನೆಲೆಗಳನ್ನು ಧ್ವಂಸ ಮಾಡಿದ ಬಾಲಾಕೋಟ್ ಸರ್ಜಿಕಲ್​ ಸ್ಟ್ರೈಕ್​ ನಡೆದು ಇಂದಿಗೆ ಎರಡು ವರ್ಷ ಪೂರ್ಣ. 1971 ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದ ನಂತರ, 2019ರ ಫೆಬ್ರವರಿ 26ರಂದು ಭಾರತದ ಯುದ್ಧ ವಿಮಾನಗಳು ಮೊದಲ ಬಾರಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗೆ ಬಹುದೂರ ಸಾಗಿ ಜೈಶ್​-ಎ-ಮೊಹಮ್ಮದ್ ಉಗ್ರರ ಪಾತಕ ತರಬೇತಿ ಶಿಬಿರಗಳನ್ನು ಹೇಳಹೆಸರಿಲ್ಲದಂತೆ ನಾಶಮಾಡಿದ್ದವು.

ಪುಲ್ವಾಮಾ ಅಟ್ಯಾಕ್​ಗೆ ಸೇಡು ತೀರಿಸಿಕೊಂಡ ಭಾರತ!

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಯೋಧರ ವಾಹನಗಳ ಮೇಲೆ 2019ರ ಫೆಬ್ರವರಿ 14 ರಂದು ಪಾಕಿಸ್ತಾನಿ ಉಗ್ರಗಾಮಿಗಳು ಭೀಕರ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಭಾರತಮಾತೆಯ 40 ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದರು. ಈ ಭೀಭತ್ಸ ದಾಳಿಯ ನಂತರ ಪಾಕಿಸ್ತಾನದ ಉಗ್ರಗಾಮಿ ಚಟುವಟಿಕೆಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಭಾರತದ ಧೋರಣೆ ಸಂಪೂರ್ಣ ಬದಲಾಯಿತು. ಮಾತುಕತೆ ಸಾಕು.. ಇನ್ನೇನಿದ್ದರೂ ಅವರದೇ ಭಾಷೆಯಲ್ಲಿ ಉತ್ತರ ಕೊಡಬೇಕೆಂದು ಭಾರತ ನಿರ್ಧರಿಸಿ ಬಿಟ್ಟಿತು. ಹೀಗಾಗಿಯೇ ಅದೇ ವರ್ಷ ಫೆ.26 ರಂದು ಅತ್ಯಂತ ಕರಾರುವಾಕ್ ಹಾಗೂ ದಿಟ್ಟತನದ ದಾಳಿ ನಡೆಸಿದ ಭಾರತೀಯ ಯೋಧರು, ಪಾಕ್ ಆಕ್ರಮಿತ ಕಾಶ್ಮೀರದ ಬಾಲಾಕೋಟ್​ನಲ್ಲಿ ಬಾಂಬ್​ ಸುರಿಮಳೆಗೈದರು. ಏನಾಗುತ್ತಿದೆ ಎಂಬುದು ಪಾಕಿಸ್ತಾನಕ್ಕೆ ಅರ್ಥವಾಗುವ ಮೊದಲೇ ಜೈಶ್​-ಎ-ಮೊಹಮ್ಮದ್ ಉಗ್ರರ ಶಿಬಿರಗಳು ಧ್ವಂಸಗೊಂಡು, ನೂರಾರು ಉಗ್ರರು ಹತರಾದರು. ಅಲ್ಲಿಗೆ ಭಾರತದ ಸರ್ಜಿಕಲ್ ಸ್ಟ್ರೈಕ್​ ಪಾಪಿ ಪಾಕಿಸ್ತಾನದ ಎದೆ ಝಲ್ಲೆನಿಸಿತ್ತು.

ಪಾಕ್​ ಛಾಯಾ ಸಮರದ ವಿರುದ್ಧ ಭಾರತದ ನೇರ ಯುದ್ಧ

ಭಾರತದ ವಿರುದ್ಧ ನೇರವಾಗಿ ಯುದ್ಧ ಮಾಡಿ ಯಾವುದೇ ಹಂತದಲ್ಲೂ ಜಯಿಸಲಾಗದ ಪಾಕ್, ದಶಕಗಳಿಂದಲೂ ಛಾಯಾ ಸಮರವನ್ನು ಮುಂದುವರಿಸಿಕೊಂಡು ಬಂದಿದೆ. ಇದಕ್ಕಾಗಿ ತನ್ನ ನೆಲದಲ್ಲಿ ನಿರಂತರವಾಗಿ ಉಗ್ರಗಾಮಿಗಳಿಗೆ ತರಬೇತಿ ನೀಡಿ, ಅವರನ್ನು ದುರ್ಗಮ ಕಾಶ್ಮೀರ ಕಣಿವೆಯ ಮೂಲಕ ಭಾರತದೊಳಗೆ ನುಗ್ಗಿಸುತ್ತಿದೆ. ಹೀಗೆ ಒಳಬಂದ ಉಗ್ರರು ಕಾಶ್ಮೀರ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಮಾರಣಾಂತಿಕ ದಾಳಿ ನಡೆಸುತ್ತಾರೆ. ಆದರೆ, ಬಾಲಾಕೋಟ್​ ದಾಳಿಯ ನಂತರ ಕಳೆದ ಎರಡು ವರ್ಷಗಳಲ್ಲಿ ಭಾರತದ ನೆಲದಲ್ಲಿ ಯಾವುದೇ ದೊಡ್ಡ ಪ್ರಮಾಣದ ಉಗ್ರಗಾಮಿ ದಾಳಿಗಳು ನಡೆದಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ಅಂದರೆ ಬಾಲಾಕೋಟ್​ ದಾಳಿಯ ನಂತರ ಪಾಕ್​ ಅಷ್ಟರಮಟ್ಟಿಗೆ ತಣ್ಣಗಾಗಿದೆ.

41 ಬಾರಿ ಉಗ್ರರ ದಾಳಿ.. ಭಾರತದ ದಿಟ್ಟ ಪ್ರತ್ಯುತ್ತರ

ಬಾಲಾಕೋಟ್​ ಸರ್ಜಿಕಲ್ ಸ್ಟ್ರೈಕ್​ ನಂತರ ಎರಡು ವರ್ಷಗಳ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 41 ಬಾರಿ ಉಗ್ರರ ದಾಳಿ ನಡೆದಿವೆ. ಆದರೆ ಇವು ಯಾವುವೂ ದೊಡ್ಡ ಪ್ರಮಾಣದ ದಾಳಿಗಳಲ್ಲ. ಬೃಹತ್ ಸಂಖ್ಯೆಯ ಉಗ್ರರನ್ನು ಭಾರತದೊಳಕ್ಕೆ ನುಗ್ಗಿಸಲು ಪಾಕ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ರಹಸ್ಯ ಸುರಂಗ ಮಾರ್ಗಗಳನ್ನು ಕೊರೆದು ಅವುಗಳ ಮೂಲಕ ಉಗ್ರಗಾಮಿಗಳನ್ನು ಒಳನುಗ್ಗಿಸುವುದು, ಡ್ರೋನ್ ಮೂಲಕ ಅವರಿಗೆ ಶಸ್ತ್ರಾಸ್ತ್ರ ಪೂರೈಸುವುದು ಹೀಗೆ ಹಲವಾರು ಕುಕೃತ್ಯಗಳನ್ನು ಪಾಕಿಸ್ತಾನದ ಐಎಸ್​ಐ ನಡೆಸುತ್ತಿದೆ. ಆದರೆ ಇವೆಲ್ಲವುಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಭಾರತೀಯ ಯೋಧರು, ಆ ಎಲ್ಲ ಪ್ರಯತ್ನಗಳನ್ನು ನಿಷ್ಫಲಗೊಳಿಸಿದ್ದಾರೆ. ಇದರಿಂದ ವಿಹ್ವಲಗೊಂಡ ಪಾಕ್​ ಸೇನೆ ಆಗಾಗ ಕದನ ವಿರಾಮ ಉಲ್ಲಂಘಿಸಿ ಭಾರತದ ಗಡಿಯತ್ತ ಗುಂಡಿನ ದಾಳಿ ನಡೆಸುತ್ತಿದೆ. 2019 ರಲ್ಲಿ 3479 ಬಾರಿ ಪಾಕ್ ಕದನ ವಿರಾಮ ಉಲ್ಲಂಘಿಸಿತ್ತು. ಈ ಸಂಖ್ಯೆ 2020ರಲ್ಲಿ 5133ಕ್ಕೆ ಹೆಚ್ಚಾಗಿದೆ.

ಕಾಶ್ಮೀರಕ್ಕಾಗಿ ಎರಡು ಬಾರಿ ಯುದ್ಧ.. ಮಣ್ಣುಮುಕ್ಕಿದ್ದ ಪಾಕ್!

ಕಾಶ್ಮೀರಕ್ಕಾಗಿ 1947 ಹಾಗೂ 1965 ರಲ್ಲಿ ಪಾಕ್ ಭಾರತದೊಂದಿಗೆ ಕಾಲುಕೆರೆದು ಯುದ್ಧಕ್ಕೆ ಬಂದಿತ್ತು. ಆದರೆ ಎರಡೂ ಬಾರಿ ಸೋತು ಸುಣ್ಣವಾಗಿ ಹಿಂದಿರುಗಿತ್ತು. ಯುದ್ಧದ ಮೂಲಕವಾದರೂ ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಕರಣಗೊಳಿಸುವುದು ಪಾಕಿಸ್ತಾನದ ಹುನ್ನಾರ. ಆದರೆ ಇದರಲ್ಲಿ ವಿಫಲವಾದ ಪಾಕ್ ಮತ್ತೊಮ್ಮೆ ಕಾರ್ಗಿಲ್ ದುಸ್ಸಾಹಸಕ್ಕೆ ಕೈಹಾಕಿತ್ತು. ಆದರೇನು.. ಅಲ್ಲಿಯೂ ಭಾರಿ ಸೋಲು ಪಾಕಿಸ್ತಾನಕ್ಕೆ ಎದುರಾಯಿತು.

ಭಯೋತ್ಪಾದನೆಯೇ ಪಾಕಿಸ್ತಾನದ ವಿದೇಶಾಂಗ ನೀತಿ

ಭಯೋತ್ಪಾದನೆಯನ್ನೇ ಅಧಿಕೃತ ವಿದೇಶಾಂಗ ನೀತಿಯನ್ನಾಗಿ ಅಳವಡಿಸಿಕೊಂಡಿರುವ ಪಾಕಿಸ್ತಾನಕ್ಕೆ ಭಾರತದೊಂದಿಗೆ ಶಾಂತಿ-ಸೌಹಾರ್ದದಿಂದ ಇರುವುದು ಬೇಕಿಲ್ಲ ಎಂಬುದು ಈಗ ಜಗತ್ತಿಗೇ ಅರ್ಥವಾಗಿದೆ. ತನ್ನ ನೆಲದಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ನಿಲ್ಲಿಸುವವರೆಗೂ ಮಾತುಕತೆ ಸಾಧ್ಯವಿಲ್ಲ ಎಂದು ಭಾರತ ಖಡಕ್ಕಾಗಿ ಹೇಳಿದ್ದು, ಅವರ ಭಾಷೆಯಲ್ಲಿಯೇ ಅವರಿಗೆ ಉತ್ತರ ಕೊಡಲು ಈಗ ಹಿಂದೆಂದಿಗಿಂತಲೂ ಹೆಚ್ಚು ಸಮರ್ಥವಾಗಿದೆ ಹಾಗೂ ಅದೇ ನಿಟ್ಟಿನಲ್ಲಿ ಮುಂದುವರೆಯುತ್ತಿದೆ.

ಬಾಲಾಕೋಟ್​ ವಾಯುದಾಳಿಯ ನಂತರ ದೇಶದಲ್ಲಿ ನಡೆದ ಪ್ರಮುಖ ಉಗ್ರಗಾಮಿ ದಾಳಿಗಳು

ವರ್ಷ

ಪ್ರಕರಣಗಳ

ಸಂಖ್ಯೆ

ಭಾರತೀಯ ಯೋಧರಿಂದ

ಆರಂಭಿಸಲ್ಪಟ್ಟ

ಕಾರ್ಯಾಚರಣೆಗಳು

ಉಗ್ರರು ಆರಂಭಿಸಿದ

ದಾಳಿಗಳು

ಅಪರಿಚಿತ ದಾಳಿಗಳು

( Not specified)

2019(ಮಾರ್ಚ್​ನಿಂದ)21876
20204753210
2021 (15.02.21) 3021

ಉಗ್ರರ ದಾಳಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬಲಿಯಾದವರ ಸಂಖ್ಯೆ

ವರ್ಷ

ಸಾವು ಸಂಭವಿಸಿದ

ಪ್ರಕರಣಗಳ ಸಂಖ್ಯೆ

ನಾಗರಿಕರು

ಭದ್ರತಾ ಪಡೆ

ಯೋಧರು

ಉಗ್ರರು/ ನುಸುಳುಕೋರರು

/ಮೂಲಭೂತವಾದಿಗಳು

ಅಪರಿಚಿತಒಟ್ಟು
ಬಾಲಾಕೋಟ್ ಸರ್ಜಿಕಲ್ ದಾಳಿಯ ನಂತರ ( ಮಾರ್ಚ್​ 2019 ರಿಂದ 15.02.21 ರವರೆಗೆ )
2019 11539271240190
2020 14033562320321
2021 60112013

ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆಯ ಪ್ರಕರಣಗಳು

ವರ್ಷ20192020

2021

(ಜನೇವರಿ 28ರವರೆಗೆ)

ಕದನ ವಿರಾಮ ಉಲ್ಲಂಘನೆಗಳ ಸಂಖ್ಯೆ34795133299
ಮೃತಪಟ್ಟ ನಾಗರಿಕರು1822
ಹುತಾತ್ಮ ಯೋಧರ ಸಂಖ್ಯೆ1924

(ಮೂಲ: ಲೋಕಸಭೆಯಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ 149ಕ್ಕೆ ಉತ್ತರ. ದಿನಾಂಕ: 02-02-2021)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.