ನಾಗ್ಪುರ (ಮಹಾರಾಷ್ಟ್ರ): ನಾಗ್ಪುರದ ರಾಮ್ಟೆಕ್ ಗ್ರಾಮದಲ್ಲಿ ಬೋರ್ವೆಲ್ಗೆ ಬಿದ್ದ ಎರಡು ವರ್ಷದ ಬಾಲಕನನ್ನು ರಕ್ಷಿಸಲಾಗಿದೆ. ಬರೋಬ್ಬರಿ 50 ಫೀಟ್ ಆಳದ ಕೊಳವೆಬಾವಿಗೆ ಬಿದ್ದಿದ್ದ ದನವಗನ್ ದೇವಾ ದೋಂಡಾ ಎಂಬ ಎರಡು ವರ್ಷದ ಬಾಲಕನನ್ನು ಹರಸಾಹಸದ ಬಳಿಕ ಮೇಲೆತ್ತುವ ಮೂಲಕ ಬದುಕಿಸಿಕೊಳ್ಳಲಾಗಿದೆ.
ಬಾಲಕ ಬೋರ್ವೆಲ್ಗೆ ಬಿದ್ದಿದ್ದನ್ನು ನೋಡಿದ ಸ್ಥಳೀಯರು, ತಕ್ಷಣ ಸ್ಥಳಕ್ಕೆ ಧಾವಿಸಿ ಪ್ರಾಣಾಪಾಯದಿಂದ ಆತನನ್ನು ಪಾರು ಮಾಡಿದ್ದಾರೆ. ಆಳದ ಬೋರ್ವೆಲ್ಗೆ ಹಗ್ಗ ಬಿಟ್ಟ ಗ್ರಾಮಸ್ಥರು ಅದರೊಂದಿಗೆ ಬಾಲಕನನ್ನು ರಕ್ಷಿಸಿದ್ದಾರೆ. ಹಗ್ಗ ಹಿಡಿದುಕೊಂಡು ಸಿನಿಮೀಯ ರೀತಿಯಲ್ಲಿ ಮೇಲೆ ಆತ ಮೇಲೆ ಬಂದಿದ್ದಾನೆ. ಗ್ರಾಮಸ್ಥರ ಸಹಾಯಕ್ಕೆ ಪಾಲಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಸ್ಥಳೀಯರು ಹೇಳಿದಂತೆ ಹಗ್ಗವನ್ನು ಗಟ್ಟಿಯಾಗಿ ಹಿಡಿದುಕೊಂಡು ಬಾಲಕ ಮೇಲೆ ಬಂದಿದ್ದು, ಬೋರ್ವೆಲ್ನಿಂದ ಮೇಲೆ ಬರುತ್ತಿದ್ದಂತೆ ನೀರು ಕುಡಿಸಿ ಆವರಿಸಿದ್ದ ಭಯವನ್ನು ದೂರ ಮಾಡಿದ್ದಾರೆ. ಇತ್ತ ಸಾವಿನ ಬಾಗಿಲು ತಟ್ಟಿ ಬಂದ ಬಾಲಕನ ಧೈರ್ಯಕ್ಕೆ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.