ETV Bharat / bharat

ಮೈಮೇಲೆ ಹರಿದ ಯಮದೂತ ಕಾರು; ಇಬ್ಬರು ಮಹಿಳಾ ಸಾಫ್ಟ್‌ವೇರ್‌ ಇಂಜಿನಿಯರ್‌ಗಳು ಸಾವು

author img

By

Published : Sep 16, 2022, 6:46 AM IST

ವೇಗದೂತ ಕಾರೊಂದು ಮೈಮೇಲೆ ಹರಿದು ಇಬ್ಬರು ಮಹಿಳಾ ಸಾಫ್ಟ್‌ವೇರ್‌ ಇಂಜಿನಿಯರುಗಳು ದುರ್ಮರಣಕ್ಕೀಡಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

Two women techies killed in Road accident

ಚೆನ್ನೈ(ತಮಿಳುನಾಡು): ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಹಿಳಾ ಸಾಫ್ಟ್‌ವೇರ್‌ ಇಂಜಿನಿಯರ್‌ಗಳು ಪ್ರಾಣ ಕಳೆದುಕೊಂಡ ದಾರುಣ ಘಟನೆ ಬುಧವಾರ ರಾತ್ರಿ 11.30ರ ಸುಮಾರಿಗೆ ತಮಿಳುನಾಡಿನಲ್ಲಿ ನಡೆದಿದೆ. ಚೆನ್ನೈನ ಐಟಿ ಕಾರಿಡಾರ್​​ನ ನವಲೂರಿನಲ್ಲಿರುವ ಹೆಚ್​​​ಸಿಎಲ್​​​​​​​​ನಲ್ಲಿ ಕೆಲಸ ಮಾಡುತ್ತಿದ್ದ ಎಸ್.ಲಾವಣ್ಯ ಮತ್ತು ಆರ್.ಲಕ್ಷ್ಮಿ ಮೃತರೆಂದು ತಿಳಿದುಬಂದಿದೆ. ಕಂಪೆನಿಯಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರು ಇವರಿಗೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: ವರ್ಕ್​ ಫ್ರಂ ಹೋಮ್​ ಎಫೆಕ್ಟ್​ಗೆ ಟೆಕ್ಕಿ ಬಲಿ​.. ಅತ್ತೆ, ಪತ್ನಿ ಕಿರುಕುಳಕ್ಕೆ ನವವಿವಾಹಿತ ಆತ್ಮಹತ್ಯೆ

ಹೋಂಡಾ ಸಿಟಿ ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು ಹೋಗ್ತಿದ್ದ ಮೋತೀಶ್ ಕುಮಾರ್​ (20) ಅಪಘಾತಕ್ಕೆ ಕಾರಣವಾಗಿದ್ದಾನೆ. ವಾಹನದ ನಿಯಂತ್ರಣ ಕಳೆದುಕೊಂಡಿರುವ ಈತ ಯುವತಿಯರಿಬ್ಬರಿಗೂ ಡಿಕ್ಕಿ ಹೊಡೆದಿದ್ದಾನೆ. ಕಾರು ಈ ಸಂದರ್ಭದಲ್ಲಿ ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುತ್ತಿತ್ತು ಎಂದು ತಿಳಿದು ಬಂದಿದೆ.

ಲಕ್ಷ್ಮೀ ಮೂಲತಃ ಕೇರಳದ ಪಾಲಕ್ಕಾಡ್​​​ನವರು. ಲಾವಣ್ಯ ಆಂಧ್ರಪ್ರದೇಶದ ಚಿತ್ತೂರಿನವರಾಗಿದ್ದಾರೆ. ಅಪಘಾತದಿಂದ ಇಬ್ಬರು ಯುವತಿಯರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.