ಕಂಧಮಾಲ್ (ಒಡಿಶಾ): ಕಂಧಮಾಲ್ ಜಿಲ್ಲೆಯ ಫುಲ್ಬಾನಿಯ ಗೋಚಪಾರಾದಲ್ಲಿ ಮಂಗಳವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ಮಾವೋವಾದಿಗಳು ಹತರಾಗಿದ್ದಾರೆ.
ಒಂದು ಬಂದೂಕು,11 ಜೀವಂತ ಗುಂಡುಗಳು ಮತ್ತು ಇತರ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಂಧಮಾಲ್ - ಬೌಧ್ ಗಡಿಯಲ್ಲಿರುವ ಗೊಚ್ಚಪದ ಪ್ರದೇಶದ ದಟ್ಟ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಇದನ್ನೂ ಓದಿ: ಭದ್ರತಾ ಪಡೆ ನಕ್ಸಲರ ನಡುವೆ ಎನ್‌ಕೌಂಟರ್: ಐವರು ಸೈನಿಕರಿಗೆ ಗಾಯ
ಗುಪ್ತಚರ ವರದಿಯ ಆಧಾರದ ಮೇಲೆ ಕೂಂಬಿಂಗ್ ಮಾಡಲಾಗಿತ್ತು. ಕಂಧಮಾಲ್ ಎಸ್ಪಿ ವಿನೀತ್ ಅಗರ್ವಾಲ್ ಸಮನ್ವಯ ಮತ್ತು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು ಎಂದು ಪೊಲೀಸ್ ಡಿಜಿ ಸುನಿಲ್ ಕುಮಾರ್ ಬನ್ಸಾಲ್ ಹೇಳಿದ್ದಾರೆ.
"ನಮ್ಮ ಪಡೆಗಳು ಶೋಧ ಕಾರ್ಯಾಚರಣೆಯಲ್ಲಿ ಎರಡು ಉತ್ತಮ ಗುಣಮಟ್ಟದ ಬಂದೂಕುಗಳು ಮತ್ತು 11 ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ" ಎಂದು ಬನ್ಸಾಲ್ ಹೇಳಿದರು.