ETV Bharat / bharat

Dangerous Video- ತೆರೆದ ಚರಂಡಿಗೆ ಬಿದ್ದ ಮಹಿಳೆಯರು: ಅದೃಷ್ಟವಶಾತ್​​ ಪಾರು - ಮ್ಯಾನ್​ಹೋಲ್​ ಬಿದ್ದ ಮಹಿಳೆ ವಿಡಿಯೋ ವೈರಲ್​

ನೀರು ತುಂಬಿದ್ದ ಹಿನ್ನೆಲೆ ದಾರಿ ಹುಡುಕುತ್ತ ಹೊರಟ ಇಬ್ಬರು ಮಹಿಳೆಯರು ನೀರು ಹೋಗಲೆಂದು ತೆರೆದಿದ್ದ ಚರಂಡಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್​​​ ಅಪಾಯದ ಮುನ್ಸೂಚನೆ ಅರಿತ ಮಹಿಳೆಯರು ತಕ್ಷಣ ಮ್ಯಾನ್​​ಹೋಲ್​​ನಿಂದ ಹೊರಬಂದಿದ್ದಾರೆ. ಘಟನೆಯ ವಿಡಿಯೋ ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

two-women-fall-into-open-gutters-in-mumbai-incident-captured-on-cctv
ಚರಂಡಿಗೆ ಬಿದ್ದ ಮಹಿಳೆಯರು
author img

By

Published : Jun 10, 2021, 5:28 PM IST

Updated : Jun 10, 2021, 6:47 PM IST

ಮುಂಬೈ: ನಗರದಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ರಸ್ತೆಗಳು ನದಿಯಂತಾಗಿದ್ದು, ತೆರೆದ ಗುಂಡಿಗೆ ಇಬ್ಬರು ಮಹಿಳೆಯರು ಬಿದ್ದ ಘಟನೆ ನಡೆದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಸ್ತೆಯಲ್ಲಿ ನೀರು ತುಂಬಿದ್ದ ಹಿನ್ನೆಲೆ ದಾರಿ ಹುಡುಕುತ್ತ ಹೊರಟ ಇಬ್ಬರು ಮಹಿಳೆಯರು ತೆರೆದಿದ್ದ ಚರಂಡಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್​​​ ಅಪಾಯದ ಮುನ್ಸೂಚನೆ ಅರಿತ ಮಹಿಳೆಯರು ತಕ್ಷಣ ಮ್ಯಾನ್​​ಹೋಲ್​​ನಿಂದ ಹೊರಬಂದಿದ್ದಾರೆ. ಘಟನೆಯ ವಿಡಿಯೋ ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತೆರೆದ ಚರಂಡಿಗೆ ಬಿದ್ದ ಮಹಿಳೆಯರು

ಈ ಹಿಂದೆಯೂ ಕೂಡಾ ವೈದ್ಯರೊಬ್ಬರು ಮ್ಯಾನ್​ಹೋಲ್​​​ ಒಳಗೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ನಡೆದಿತ್ತು. ಅದರಂತೆ ಮಳೆಗಾಲದಲ್ಲಿ ತೆರೆದ ಗಟಾರಗಳಿಂದ ಪ್ರಾಣಹಾನಿಯಂತಹ ಅನೇಕ ಘಟನೆಗಳು ಜರುಗುತ್ತಿವೆ. ಅಲ್ಲದೆ ನಿನ್ನೆ ಸುರಿದ ಮಳೆಗೆ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ರೈಲ್ವೆ ಓಡಾಟಕ್ಕೂ ಮಳೆ ಅಡ್ಡಿಯಾಗಿತ್ತು.

ಮುಂದಿನ 3-4 ದಿನಗಳಲ್ಲಿ ಮುಂಬೈ ಮತ್ತು ಕೊಂಕಣ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುಂಬೈ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ಮುಂಬೈಗೆ ನಗರದಲ್ಲಿ 231.3 ಮಿ.ಮೀ ಮಳೆಯಾಗಿದೆ.

Last Updated : Jun 10, 2021, 6:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.