ಮಂಗಳೂರು: ರೈಲು ಬಡಿದು ಬೀಡಿ ಒಯ್ಯುತ್ತಿದ್ದ ಇಬ್ಬರು ಮಹಿಳೆಯರು ಮೃತಪಟಟ್ಟಿರುವ ಘಟನೆ ಮಂಗಳೂರಿನ ಮಹಾಕಾಳಿಪಡ್ಪು ಎಂಬಲ್ಲಿ ನಡೆದಿದೆ. ಮೃತರು ಜೆಪ್ಪು ಕುಡ್ಪಾಡಿಯವರು ಎಂದು ಗುರುತಿಸಲಾಗಿದೆ.
ತಾವು ಕಟ್ಟಿದ ಬೀಡಿಗಳನ್ನು ಬ್ರ್ಯಾಂಚ್ಗೆ ಕೊಡಲು ನಡೆದುಕೊಂಡು ಹೋಗುವಾಗ ರೈಲ್ವೆ ಹಳಿ ದಾಟುವ ವೇಳೆ ಓರ್ವ ಮಹಿಳೆ ಎಡವಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಮತ್ತೋರ್ವ ಮಹಿಳೆ ಆಕೆಯನ್ನು ಮೇಲೆತ್ತಲು ಹೋಗಿದ್ದಾರೆ.
ಆದ್ರೆ ಅದೇ ವೇಳೆ ಮಂಗಳೂರು ಜಂಕ್ಷನ್ನಿಂದ ಕೇರಳ ಕಡೆಗೆ ಹೋಗುತ್ತಿದ್ದ ರೈಲು ಬಂದಿದ್ದು, ಮಹಿಳೆಯರಿಬ್ಬರ ಮೇಲೆ ಹರಿದಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.