ETV Bharat / bharat

ದುಷ್ಕರ್ಮಿಗಳ ಅಟ್ಟಹಾಸ.. ಶ್ರೀನಗರದ ಶಾಲೆಗೆ ನುಗ್ಗಿ ಕಾಶ್ಮೀರಿ ಪಂಡಿತ ಪ್ರಾಂಶುಪಾಲ, ಶಿಕ್ಷಕಿಯ ಹತ್ಯೆ! - Srinagar crime news

ಇತ್ತೀಚೆಗೆ ಉಗ್ರರ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಇಂದು ದುಷ್ಕರ್ಮಿಗಳು ದಾಳಿ ನಡೆಸಿ ಓರ್ವ ಪ್ರಾಂಶುಪಾಲ ಮತ್ತು ಶಿಕ್ಷಕಿಯನ್ನು ಶಾಲೆಯೊಳಗೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

Two teachers shot dead inside school in Srinagar
ಶ್ರೀನಗರದ ಶಾಲೆಯೊಂದರಲ್ಲಿ ಓರ್ವ ಕಾಶ್ಮೀರಿ ಪಂಡಿತ ಸೇರಿದಂತೆ ಇಬ್ಬರು ಶಿಕ್ಷಕರ ಹತ್ಯೆ
author img

By

Published : Oct 7, 2021, 12:15 PM IST

Updated : Oct 7, 2021, 6:51 PM IST

ಶ್ರೀನಗರ(ಜಮ್ಮು ಕಾಶ್ಮೀರ): ಸರ್ಕಾರಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಪ್ರಾಂಶುಪಾಲ ಮತ್ತು ಶಿಕ್ಷಕಿಯನ್ನು ಶಾಲೆಯೊಳಗೆ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ಶ್ರೀನಗರದ ಈದ್ಗಾದ ಪ್ರದೇಶದಲ್ಲಿ ನಡೆದಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.

  • #BREAKING: Two teachers killed in broad daylight in Srinagar, Kashmir - both from minority community of Sikh and Kashmiri Pandits. The teachers identified as Satinder Kour and Deepak Chand. IG Kashmir Vijay Kumar confirms the development. Security forces have reached the spot. pic.twitter.com/HFZ32VpTMi

    — Aditya Raj Kaul (@AdityaRajKaul) October 7, 2021 " class="align-text-top noRightClick twitterSection" data=" ">

ಪ್ರಾಂಶುಪಾಲ ಕಾಶ್ಮೀರಿ ಪಂಡಿತ ಕುಟುಂಬಕ್ಕೆ ಸೇರಿದವನಾಗಿದ್ದು, ಶಿಕ್ಷಕಿ ಸಿಖ್​​ ಧರ್ಮಕ್ಕೆ ಸೇರಿದವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಾವನ್ನಪ್ಪಿದವರನ್ನು ಶಿಕ್ಷಕಿ ಸ್ಪಿಂದರ್ ಕೌರ್ ಮತ್ತು ಪ್ರಾಂಶುಪಾಲ ದೀಪಕ್ ಚಂದ್ ಎಂದು ಗುರುತಿಸಲಾಗಿದೆ. ದಾಳಿಯ ನಂತರ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿವೆ.

ಮಂಗಳವಾರವಷ್ಟೇ ಮೂರು ಪ್ರತ್ಯೇಕ ದಾಳಿಗಳಲ್ಲಿ ಓರ್ವ ಕಾಶ್ಮೀರ ಪಂಡಿತ ಕುಟುಂಬಕ್ಕೆ ಸೇರಿದ ಕೆಮಿಸ್ಟ್ ಹಾಗೂ ಉದ್ಯಮಿ ಸೇರಿದಂತೆ ಮೂವರನ್ನು ಭಯೋತ್ಪಾದಕರು ಕೊಂದಿದ್ದರು. ಈಗಲೂ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ, ದಾಳಿ ನಡೆಸಿದ್ದಾರೆ ಎನ್ನಲಾಗ್ತಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ತೈವಾನ್, ಹಾಂಕಾಂಗ್, ಕ್ಸಿನ್​ಜಿಯಾಂಗ್ ವಿಚಾರದಲ್ಲಿ ಅಮೆರಿಕ ಹಸ್ತಕ್ಷೇಪ ಬೇಡ: ಚೀನಾ

Last Updated : Oct 7, 2021, 6:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.