ಕರ್ನೂಲ್ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಟಿಡಿಪಿಯ ಇಬ್ಬರು ನಾಯಕನ್ನು ಹತ್ಯೆ ಮಾಡಲಾಗಿದೆ.
ಪೆಸರಾವೈ ಗ್ರಾಮದಲ್ಲಿ ದಾಳಿ ನಡೆಸಿ ಈ ಕೃತ್ಯ ನಡೆದಿದೆ. ಪೆಸರವಾಯಿ ಗ್ರಾಮದ ಮಾಜಿ ಸರ್ಪಂಚ್ ನಾಗೇಶ್ವರ ರೆಡ್ಡಿ (54), ಸಹಕಾರ ಸಂಘದ ಮಾಜಿ ಅಧ್ಯಕ್ಷ ವಡ್ಡು ಪ್ರತಾಪ್ ರೆಡ್ಡಿ (52) ಹತ್ಯೆಯಾದ ಮುಖಂಡರು.
ಘಟೀವಮುಲಾ ಗ್ರಾಮದ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನುಳಿದಂತೆ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಡು ವೆಂಕಟೇಶ್ವರ ರೆಡ್ಡಿ, ವಡ್ಡು ಸುಬ್ಬರೆಡ್ಡಿ ಮತ್ತು ವೆಂಕಟೇಶ್ವರ ರೆಡ್ಡಿ ಎಂಬ ಮೂವರನ್ನು ನಂದ್ಯಾಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಮೂವರು ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.